ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿ ಪತ್ತೆ: ಆತಂಕಕ್ಕೀಡಾದ ನೆಲಮಂಗಲದ ಜನರು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 08, 2023 | 6:29 PM

ನ್ಯಾಯಬೆಲೆ ಅಂಗಡಿಗೆ ಬಂದಿರೋ ಸರ್ಕಾರ ಪಡಿತರ ಚೀಟಿಗೆ ನೀಡಿದ ಅಕ್ಕಿಯಲ್ಲಿ ಪ್ಯಾಸ್ಟಿಕ್ ಅಕ್ಕಿ ಪತ್ತೆಯಾಗಿರುವಂತಹ ಘಟನೆ ನೆಲಮಂಗದಲ್ಲಿ ನಡೆದಿದೆ.

ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿ ಪತ್ತೆ: ಆತಂಕಕ್ಕೀಡಾದ ನೆಲಮಂಗಲದ ಜನರು
ಪತ್ತೆಯಾದ ಪ್ಯಾಸ್ಟಿಕ್​ ಅಕ್ಕಿ
Follow us on

ಬೆಂಗಳೂರು ಗ್ರಾಮಾಂತರ: ನ್ಯಾಯಬೆಲೆ ಅಂಗಡಿಗೆ ಬಂದಿರೋ ಸರ್ಕಾರ ಪಡಿತರ ಚೀಟಿಗೆ ನೀಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ(plastic rice) ಪತ್ತೆಯಾಗಿರುವಂತಹ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಆನಂದನಗರ ಗ್ರಾಮದಲ್ಲಿ ಕಂಡುಬಂದಿದೆ. ಪ್ಯಾಸ್ಟಿಕ್ ಅಕ್ಕಿಯನ್ನು ಕಂಡು ಗ್ರಾಮಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ.‌ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಬಂದಂತಹ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿದೆ ಎಂದು ಪಡಿತರ ಪಲಾನುಭವಿಗಳು ಆರೋಪಿಸುತ್ತಿದ್ದಾರೆ.

ಪ್ಲಾಸ್ಟಿಕ್ ಅಕ್ಕಿ ಕಂಡು ಆನಂದ ನಗರ ಜನತೆ ಆತಂಕ

ಆನಂದ ನಗರದ ನಿವಾಸಿ ಸಾವಿತ್ರಮ್ಮ ಎಂಬುವವರು ಅನ್ನ ಮಾಡಲು ಅಕ್ಕಿಯನ್ನು ಆರಿಸುತ್ತಿದ್ದಾಗ ಪ್ಲಾಸ್ಟಿಕ್ ಅಕ್ಕಿ ಕಂಡು ಬಂದಿದೆ ಎನ್ನಲಾಗಿದೆ. ಇದರಿಂದ ಭಯಗೊಂಡು ನೆಲಮಂಗಲ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಪರಿಶೀಲನೆ ವೇಳೆ ಕೇವಲ ಒಂದು ಮನೆಯಲ್ಲಿ ಅಲ್ಲದೆ, ಇಬ್ಬರು ಮೂವರ ಪಡಿತರದಲ್ಲಿ ಈ ರೀತಿಯ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ ಎನ್ನಲಾಗಿದ್ದು, ಪರಿಶೀಲನೆ ವೇಳೆ ಒಟ್ಟು 150 ಕೆಜಿಗೂ ಹೆಚ್ಚು ಅಕ್ಕಿಯನ್ನ ಆಹಾರ ಇಲಾಖೆ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ಪ್ಲಾಸ್ಟಿಕ್‌ ತ್ಯಾಜ್ಯದಿಂದ ಸಾವಿರ ಬೆಂಜ್‌, ಡೆಸ್ಕ್‌ ತಯಾರಿಸಿ ಸರ್ಕಾರಿ ಶಾಲೆಗಳಿಗೆ ವಿತರಣೆ

ಪ್ಲಾಸ್ಟಿಕ್ ಅಕ್ಕಿ ಎಂದು ಆರೋಪ

ಇನ್ನೂ ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳನ್ನ ಕೇಳಿದರೆ, ಆನಂದನಗರದಲ್ಲಿ ಮೂರು ಜನ ಫಲಾನುಭವಿಗಳು ಪಡೆದ ಪಡಿತರ ಅಕ್ಕಿಯಲ್ಲಿ ಪ್ಲ್ಯಾಸ್ಟಿಕ್ ಅಕ್ಕಿ ಇದೆ ಅಂತ ಆರೋಪಿಸಿದ್ದಾರೆ. ಹೀಗಾಗಿ ಪ್ಲಾಸ್ಟಿಕ್ ಅಕ್ಕಿ ಅಂತ ಹೇಳುವ ಅಕ್ಕಿಯ ಮಾದರಿಯನ್ನ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಸಲಾಗಿದ್ದು ವರದಿ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿ ಫರಾನ್ ತಿಳಿಸಿದ್ದಾರೆ.

ಇದನ್ನೂ ಓದಿ: BWSSB Bill scam: ಸಿಬ್ಬಂದಿಯೇ ಬೆಂಗಳೂರು ಜಲಮಂಡಳಿ ವಾಟರ್ ಬಿಲ್​ಗೆ ಕನ್ನ ಹಾಕಿದರು! ಎಷ್ಟಕ್ಕೆ?

ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದೌಡು 

ಅದೆಷ್ಟೊ ಜನ ಇದೇ ಅಕ್ಕಿಯನ್ನ ಬೇಯಿಸಿಕೊಂಡು ತಿಂದವರು ಸದ್ಯ ಆತಂಕಕ್ಕೀಡಾಗಿದ್ದಾರೆ. ಇನ್ನೂ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಆಹಾರ ಇಲಾಖೆ ಅಧಿಕಾರಿಗಳು ಸದ್ಯ ಅಕ್ಕಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ವರದಿ ಏನು ಬರಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಇನ್ನಾದರೂ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆಗೂ ಮುನ್ನಾ ಒಮ್ಮೆ ಅಧಿಕಾರಿಗಳು ಪರಿಶೀಲಿಸಬೇಕಾದ ಅವಶ್ಯಕತೆ ಇದೆ.

ವರದಿ: ವಿನಾಯಕ್ ಗುರವ್, ಟಿವಿ9, ನೆಲಮಂಗಲ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:27 pm, Sun, 8 January 23