Sign In

By signing in or creating an account, you agree with Associated Broadcasting Company's Terms & Conditions and Privacy Policy.

BWSSB Bill scam: ಸಿಬ್ಬಂದಿಯೇ ಬೆಂಗಳೂರು ಜಲಮಂಡಳಿ ವಾಟರ್ ಬಿಲ್​ಗೆ ಕನ್ನ ಹಾಕಿದರು! ಎಷ್ಟಕ್ಕೆ?

BWSSB: ಕಂಪ್ಯೂಟರ್ ಸಿಸ್ಟಂನಲ್ಲಿ ಡೇಟಾ ಬದಲಾಯಿಸಿ ವಂಚಸಿರುವುದು ಪತ್ತೆಯಾಗಿದೆ. ಗ್ರಾಹಕರಿಂದ ಕ್ಯಾಷ್ ಹಾಗೂ ಯುಪಿಐ ಐಡಿ ಮೂಲಕ‌ ಹಣ ಪಡೆದಿದ್ದ ಕಾಂಟ್ರ್ಯಾಕ್ಟ್ ಬೇಸ್ ನ ಮೀಟರ್ ರೀಡರ್ಸ್, ಬಳಿಕ ಜಲಮಂಡಳಿ ಆಪ್ ದುರ್ಬಳಕೆ ಮಾಡಿಕೊಂಡು ಗ್ರಾಹಕರು ಪಾವತಿಸಿದ ಹಣಕ್ಕೆ ಕನ್ನಹಾಕಿದ್ದಾರೆ.

BWSSB Bill scam: ಸಿಬ್ಬಂದಿಯೇ ಬೆಂಗಳೂರು ಜಲಮಂಡಳಿ ವಾಟರ್ ಬಿಲ್​ಗೆ ಕನ್ನ ಹಾಕಿದರು! ಎಷ್ಟಕ್ಕೆ?
ಸಿಬ್ಬಂದಿಯೇ ಬೆಂಗಳೂರು ಜಲಮಂಡಳಿ ವಾಟರ್ ಬಿಲ್​ಗೆ ಕನ್ನ ಹಾಕಿದರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 28, 2022 | 11:32 AM

ಬೆಂಗಳೂರು: ಸಿಬ್ಬಂದಿಯಿಂದಲೇ (Employees) ಬೆಂಗಳೂರು ಜಲಮಂಡಳಿ (Bangalore Water Supply and Sewerage Board- BWSSB) ವಾಟರ್ ಬಿಲ್​ಗೆ ಕನ್ನ ಹಾಕಿರುವ ಪ್ರಸಂಗ ನಡೆದಿದೆ. ಗ್ರಾಹಕರು ಪಾವತಿಸಿದ್ದ ಹಣವನ್ನು ಜಲಮಂಡಳಿಗೆ ನೀಡದೆ ವಂಚನೆ ಎಸಗಿರುವ ಪ್ರಕರಣ ಇದಾಗಿದೆ. ಗ್ರೂಪ್ ಸಿ ಮತ್ತು ಗ್ರೂಪ್​​ ಡಿ ನೌಕರ ಸೇರಿದಂತೆ ಒಟ್ಟು 9 ಜನರ ಬಂಧನವಾಗಿದೆ (Arrest). ರೆವಿನ್ಯೂ ಮ್ಯಾನೇಜರ್ ಆಗಿರುವ ಎಫ್​ಡಿಎ ನೌಕರ, ಗ್ರೂಪ್ ಡಿ ನೌಕರ, ಐವರು ಗುತ್ತಿಗೆದಾರರನ್ನು ಬೊಮ್ಮನಹಳ್ಳಿ ಪೊಲೀಸರು ಪ್ರಕರಣದ ಸಂಬಂಧ ಬಂಧಿಸಿದ್ದಾರೆ. ಜಸ್ಟ್​ ಒಂದೂವರೆ ಕೋಟಿ ರೂ ವಂಚನೆ:

ವರದರಾಜು, ಕಿರಣ್ ಕುಮಾರ್, ನಿರ್ಮಲ್ ಕುಮಾರ್, ಚೌಡೇಶ್, ಮಂಜುನಾಥ್, ಮಹದೇವಸ್ವಾಮಿ, ಉಮೇಶ್, ಬಸವರಾಜು ಬಂಧಿತರು. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ್ದಾರೆ. 2018ರಿಂದ 2022ರವರೆಗೆ ಈ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ.

ಇದನ್ನೂ ಓದಿ:

Coronavirus Live Updates: ಡಿ 31ರ ರಾತ್ರಿ ಕುಡಿದು ಟೈಟಾದವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ

ಒಂದೂವರೆ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿ ಆರೋಪಿಗಳು ವಂಚನೆ ನಡೆಸಿದ್ದಾರೆ. 850ಕ್ಕೂ ಅಧಿಕ ಗ್ರಾಹಕರಿಂದ ಬಿಲ್ ಪಡೆದು ಸರ್ಕಾರಕ್ಕೆ ಕಟ್ಟದೇ ವಂಚನೆ ಎಸಗಲಾಗಿದೆ. ಈ ಬಗ್ಗೆ ಕೋಡಿಚಿಕ್ಕನಹಳ್ಳಿ ಉಪವಿಭಾಗದ ಎಇಇ ದೂರು ನೀಡಿದ್ದು, ಬೊಮ್ಮನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಕಂಪ್ಯೂಟರ್ ಸಿಸ್ಟಂನಲ್ಲಿ ಡೇಟಾ ಬದಲಾಯಿಸಿ ವಂಚಸಿರುವುದು ಪತ್ತೆಯಾಗಿದೆ. ಗ್ರಾಹಕರ ಬಳಿ ಬೇರೆ ಬೇರೆ ಮಾದರಿಯಲ್ಲಿ ನೀರಿನ ಬಿಲ್ ಸಂಗ್ರಹವಾಗಿದೆ. ಗ್ರಾಹಕರಿಂದ ಕ್ಯಾಷ್ ಹಾಗೂ ಯುಪಿಐ ಐಡಿ ಮೂಲಕ‌ ಹಣ ಪಡೆದಿದ್ದ ಕಾಂಟ್ರ್ಯಾಕ್ಟ್ ಬೇಸ್ ನ ಮೀಟರ್ ರೀಡರ್ಸ್, ಬಳಿಕ ಜಲಮಂಡಳಿ ಆಪ್ ದುರ್ಬಳಕೆ ಮಾಡಿಕೊಂಡು ಗ್ರಾಹಕರು ಪಾವತಿಸಿದ ಹಣಕ್ಕೆ ಕನ್ನಹಾಕಿದ್ದಾರೆ.

ಇದನ್ನೂ ಓದಿ:

ಸರ್ಕಾರಿ ಕೊಳವೆಮಾರ್ಗದ ನೀರು ಬೇಡವೆಂದು, ಗಡಿ ಊರಿನ ಜನ ಕಂಡುಕೊಂಡ ಗಂಗಾ ಮಾರ್ಗ ಯಾವುದು ಗೊತ್ತಾ!?

ನಕಲಿ ದಾಖಲೆ ಸೃಷ್ಟಿಸಿ ಜಲಮಂಡಳಿ ಬ್ಯಾಂಕ್ ಖಾತೆಗೆ ಹಣ ಪಾವತಿಸಿದ ಬಗ್ಗೆ ರಶೀದಿಗಳನ್ನು ಸೃಷ್ಟಿಸಿದ್ದಾರೆ. ವಂಚಕ ಅಧಿಕಾರಿ ಹಾಗೂ ಸಿಬ್ಬಂದಿ ನಕಲಿ ಬಿಲ್, ಪೇಮೆಂಟ್ ಸ್ಲಿಪ್ ಗಳನ್ನ ಸೃಷ್ಟಿಸಿ ಹಣ ಜೇಬಿಗೆ ಹಾಕಿಕೊಳ್ತಿದ್ದರು. ಹಗರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರೋ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 am, Wed, 28 December 22

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ