ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಳಿಯ

| Updated By: ಸಾಧು ಶ್ರೀನಾಥ್​

Updated on: Nov 27, 2021 | 11:17 AM

ಅತ್ತೆ ಸರಸ್ವತಮ್ಮ ಮೇಲೆ ಅಳಿಯ ಶ್ರೀರಾಮ್ ಎಂಬಾತ ಹಲ್ಲೆ ಮಾಡಿದ್ದಾನೆ. ಗಾಯಾಳು ಸರಸ್ವತಮ್ಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಶ್ರೀರಾಮ್ ವಿರುದ್ಧ ಆತನ ಪತ್ನಿ ಚೈತ್ರಾ ದೂರು ನೀಡಿದ್ದಾರೆ.

ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಳಿಯ
ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಳಿಯ
Follow us on

ನೆಲಮಂಗಲ: ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಅಳಿಯ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಗ್ರಾಮದಲ್ಲಿ ನಡೆದಿದೆ. ಅತ್ತೆ ಸರಸ್ವತಮ್ಮ ಮೇಲೆ ಅಳಿಯ ಶ್ರೀರಾಮ್ ಎಂಬಾತ ಹಲ್ಲೆ ಮಾಡಿದ್ದಾನೆ. ಗಾಯಾಳು ಸರಸ್ವತಮ್ಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಶ್ರೀರಾಮ್ ವಿರುದ್ಧ ಆತನ ಪತ್ನಿ ಚೈತ್ರಾ ದೂರು ನೀಡಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಳಿಯ ಶ್ರೀರಾಮ 10 ಸಾವಿರ ರೂಪಾಯಿ ಹಣ ಕೇಳಿದ್ದಕ್ಕೆ 500 ರೂಪಾಯಿ ಕೊಡುವೆ ಎಂದಿದ್ದರು ಅತ್ತೆ ಸರಸ್ವತಮ್ಮ. ಇನ್ನೆರಡು ದಿನಗಳಲ್ಲಿ ಸಾವಿರ ರೂಪಾಯಿ ಮನೆಗೆ ಕಳಿಸುವೆ, ಸಧ್ಯಕ್ಕೆ ಹಣವಿಲ್ಲ ಎಂದೂ ಹೇಳಿದ್ದರಂತೆ. ಆಗ ಅತ್ತೆಯ ಮಾತಿನಿಂದ ಕೆರಳಿದ ಅಳಿಯ, ಸಮೀಪದಲ್ಲೇ ಇದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಅರೋಪಿ ಪತ್ನಿ ಚೈತ್ರಾ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ZameerAhamad : ಡಾ.ಕೆ.ಸುಧಾಕರ್​ ಜೊತೆ ಜಮೀರ್​ ಅಹ್ಮದ್​ ಖಾನ್​ ಚರ್ಚಿಸಿದ್ದಾದ್ರೂ ಏನು?|Tv9kannada

Published On - 10:44 am, Sat, 27 November 21