ಪ್ರೀತಿ ವಿಷಯಕ್ಕೆ ಪೋಷಕರು ಬುದ್ಧಿ ಹೇಳಿದಕ್ಕೆ ಆಚಾರ್ಯ ಕಾಲೇಜಿನ ವಿದ್ಯಾರ್ಥಿನಿ ಪಿಜಿಯಲ್ಲಿ ನೇಣಿಗೆ ಶರಣು

| Updated By: ಆಯೇಷಾ ಬಾನು

Updated on: Aug 31, 2021 | 8:00 AM

ಆಚಾರ್ಯ ಕಾಲೇಜಿನ ವಿದ್ಯಾರ್ಥಿನಿ ಅನಾಗ ಗೋಪಾ ಪ್ರೀತಿಯಲ್ಲಿ ಬಿದ್ದಿದ್ದಳು. ಪ್ರಿಯಕರನೊಂದಿಗೆ ಸುತ್ತಾಡುತ್ತಿದ್ದಳು. ಈ ವಿಷಯ ತಿಳಿದ ಪೋಷಕರು ಓದುವ ವಯಸ್ಸಿನಲ್ಲಿ ಪ್ರೀತಿ ಬೇಡವೆಂದು ಬುದ್ದಿವಾದ ಹೇಳಿದ್ದರು. ಇದಕ್ಕೆ ಮನನೊಂದ ಅನಾಗ ಪಿಜಿಯ ರೂಂನ ಫ್ಯಾನಿಗೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರೀತಿ ವಿಷಯಕ್ಕೆ ಪೋಷಕರು ಬುದ್ಧಿ ಹೇಳಿದಕ್ಕೆ  ಆಚಾರ್ಯ ಕಾಲೇಜಿನ ವಿದ್ಯಾರ್ಥಿನಿ ಪಿಜಿಯಲ್ಲಿ ನೇಣಿಗೆ ಶರಣು
ಆಚಾರ್ಯ ಕಾಲೇಜಿನ ವಿದ್ಯಾರ್ಥಿನಿ ಅನಾಗ ಗೋಪಾ ನೇಣಿಗೆ ಶರಣು
Follow us on

ಬೆಂಗಳೂರು: ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಸರಘಟ್ಟದ ಪಿಜಿಯಲ್ಲಿ ನಡೆದಿದೆ. ಕೇರಳದ ಅನಾಗ ಗೋಪಾ(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ಆಚಾರ್ಯ ಕಾಲೇಜಿನ ವಿದ್ಯಾರ್ಥಿನಿ ಅನಾಗ ಗೋಪಾ ಪ್ರೀತಿಯಲ್ಲಿ ಬಿದ್ದಿದ್ದಳು. ಪ್ರಿಯಕರನೊಂದಿಗೆ ಸುತ್ತಾಡುತ್ತಿದ್ದಳು. ಈ ವಿಷಯ ತಿಳಿದ ಪೋಷಕರು ಓದುವ ವಯಸ್ಸಿನಲ್ಲಿ ಪ್ರೀತಿ ಬೇಡವೆಂದು ಬುದ್ದಿವಾದ ಹೇಳಿದ್ದರು. ಇದಕ್ಕೆ ಮನನೊಂದ ಅನಾಗ ಪಿಜಿಯ ರೂಂನ ಫ್ಯಾನಿಗೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅನಾಗ ಮೊದಲ ವರ್ಷದ ಬಿಎ ವಿದ್ಯಾರ್ಥಿನಿ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೀರಿನ ಗುಂಡಿಗೆ ಬಿದ್ದು ಇಬ್ಬರು ಮಕ್ಕಳ ದುರ್ಮರಣ
ಇನ್ನು ಮತ್ತೊಂದು ಕಡೆ ನೀರಿನ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಡಿ.ಜಿ.ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ನಿಶು(10), ಅಕ್ಷಿತಾ(10) ಮೃತ ದುರ್ದೈವಿಗಳು.

ಮನೆಯ ಹಿಂಭಾಗ ವ್ಯವಸಾಯಕ್ಕಾಗಿ 10 ಅಡಿಯ ನೀರಿನ ಗುಂಡಿ ತೆಗೆದಿದ್ದರು. ಆಟ ಆಡುವ ವೇಳೆ ಮಕ್ಕಳು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗ್ರಾಮದ ಗೋಪಾಲೇಗೌಡ ರವರ ಮಗಳು ನಿಶು (10), ವೆಂಕಟೇಶ್ ರವರ ಮಗಳು ಅಕ್ಷಿತಾ (10) ಮೃತರು.

ಇದನ್ನೂ ಓದಿ: ಪ್ರೀತಿ ಕೊಂದ ಕೊಲೆಗಾತಿಗೆ ಜೀವಾವಧಿ ಶಿಕ್ಷೆ; ಮಗನ ಸಾವಿಗೆ ನ್ಯಾಯ ಸಿಗಲಿ ಎಂದು ಐದು ವರ್ಷ ಅಲೆದ ತಾಯಿಗೆ ಸಿಕ್ಕ ಜಯ!