ಆನೇಕಲ್: ಆ ಕಿರಾತಕರ ಪ್ಲ್ಯಾನ್ ಮಗುವನ್ನು ಕಿಡ್ನ್ಯಾಪ್ (kidnapp) ಮಾಡೋದಿತ್ತು, ಅಂಗಡಿಗೆಂದು ಓಡಿ ಬಂದ ಮಗುವನ್ನು ಖದೀಮರು ಕಿಡ್ನ್ಯಾಪ್ ಮಾಡೇ ಬಿಟ್ರು. ಆದರೆ ಸ್ಥಳೀಯರು ತಮ್ಮ ಹಿಂದೆ ಚೇಸಿಂಗ್ ಮಾಡೋದು ಕಂಡು ಮಗುವನ್ನು ಕಾಡಿನಲ್ಲಿ ಬಿಟ್ಟು ಪರಾರಿಯಾಗಿರುವಂತಹ ಘಟನೆ ನಡೆದಿದೆ. ಸಮಯ ಸರಿಯಾಗಿ 7 ಗಂಟೆ 52 ನಿಮಿಷ, ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಕಲ್ಕೆರೆ ಗ್ರಾಮದಲ್ಲಿ ಆಗಷ್ಟೇ ಜನ ತಮ್ಮ ತಮ್ಮ ಕೆಲಸ ಮುಗಿಸಿ ಟೀ, ಕಾಫಿ ಅಂತ ರೆಸ್ಟ್ ಮಾಡ್ತಿದ್ರು. ಈ ವೇಳೆ ಮಹಿಳೆಯೊಬ್ಬಳು ತನ್ನ ಮಗಳಿಗೆ ಊಟ ಮಾಡಿಸುತ್ತಾ, ಮೊಸರು ತರಲು ಮನೆ ಬಳಿಯೇ ಇದ್ದ ಅಂಗಡಿಗೆ ಕಳುಹಿಸಿದ್ದಾಳೆ. ಆ ಮೂರು ವರ್ಷದ ಪುಟ್ಟ ಮಗು ಖುಷಿಯಿಂದ ಜಿಗಿಯುತ್ತಾ ಅಂಗಡಿ ಕಡೆ ಓಡಿದೆ. ಇದನ್ನೇ ಕಾಯುತ್ತಿದ್ದ ಕಿರಾತಕ ಕಿಡ್ನ್ಯಾಪರ್ಸ್ಗಳು, ಮಗುವನ್ನು ಅಡ್ಡಗಟ್ಟಿ ಆ್ಯಕ್ಟೀವಾ ಗಾಡಿ ಮೇಲೆ ಕೂರಿಸಿ ಹೊತ್ತೊಯ್ದಿದ್ದಾರೆ.
ವೈಟ್ ಹೆಲ್ಮೆಟ್ ಧರಿಸಿ ಅರ್ಧ ತಾಸಿಗೂ ಹೆಚ್ಚು ಕಾಲ ಹೊಂಚು ಹಾಕಿ ಕುತಿದ್ದ ಈ ಮಗು ಕಳ್ಳರ ಗ್ಯಾಂಗ್, ಅದ್ಯಾಕೆ ಈ ಮಗುವನ್ನೇ ಟಾರ್ಗೆಟ್ ಮಾಡಿತ್ತೋ ಗೊತ್ತಿಲ್ಲ, ಥೇಟ್ ಸಿನಿಮಾ ಸೀನಿನಂತೆ ಅಷ್ಟು ಜನರಿದ್ರೂ ಯಾವ ಭಯವಿಲ್ಲದೇ ಮಗುವನ್ನು ಹೊತ್ತೊಯ್ದಿದ್ದಾರೆ. ಮಗುವನ್ನು ಗಾಡಿ ಮೇಲೆ ಕೂರಿಸುವ ಸಂದರ್ಭದಲ್ಲಿಯೇ ಏನೋ ಸಂಚು ನಡಿಯುತ್ತಿದೆ ಅಂತ ಅರಿತ ಕೆಲವರು ಗಾಡಿ ಹಿಂದೆಯೇ ಓಡಿದ್ದಾರೆ, ಕೆಲವರು ಓಡೋದನ್ನು ಕಂಡು ಇನ್ನಷ್ಟು ಜನ ಖದೀಮರ ಹಿಂದೆ ಬಿದ್ದಿದ್ದಾರೆ, ತಮ್ಮ ಹಿಂದೆ ಬಿದ್ದ ಜನರ ದಿಕ್ಕು ತಪ್ಪಿಸಲು ಕಾಡಿನೊಳಗೆ ಗಾಡಿ ಓಡಿಸಿದ ಕಿರಾತಕರ ಗ್ಯಾಂಗ್, ಗಿಡ ಮರಗಳ ಬೈಕ್ ಓಡಿಸಲಾಗದೇ ಬೈಕ್ ಅಲ್ಲೇ ಬಿಟ್ಟಿದ್ದಾರೆ. ಇನ್ನು ತಮ್ಮ ಹಿಂದೆ ಜನ ಬಿದ್ದಿದ್ದರಿಂದ ಮಗುವವನ್ನು ಅರಣ್ಯದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಡಿಎಸ್‌ಪಿ ವಾಹನ ಬೈಕ್ ಸವಾರನಿಗೆ ಡಿಕ್ಕಿ, ಪೊಲೀಸ್ ವಾಹನದ ಚಾಲಕ ಅಮಾನತು
ಮನೆಯಿಂದ ಸುಮಾರು ಎರಡು ಕಿ.ಮೀಟರ್ ದೂರದ ವರೆಗೂ ಮಗುವನ್ನು ಹೊತ್ತೊಯ್ದಿದ್ದ ಕಳ್ಳರ ಗ್ಯಾಂಗ್, ಮಗುವನ್ನು ಕಾಡಿನಲ್ಲೇ ಬಿಟ್ಟಿದ್ದರಿಂದ ಮಗು ಗಾಬರಿಯಾಗಿ ಅಳುತ್ತಾ ನಿಂತಿದೆ. ಮಗು ಅಳುವಿನ ಶಬ್ದ ಕೇಳಿ ಸ್ಥಳೀಯರು ರಕ್ಷಣೆ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಕಿಡ್ನ್ಯಾಪರ್ಸ್ ಉಪಯೋಗಿಸಿದ್ದ ನಂಬರ್ ಪ್ಲೇಟ್ ಇಲ್ಲದ ಆ್ಯಕ್ಟೀವಾ ಗಾಡಿ ಹಾಗೂ ಚಾಕುವನ್ನು ವಶ ಪಡಿಸಿಕೊಳ್ಳಲಾಗಿದೆ. ಹಣದ ಬೇಡಿಕೆ ಇಡಲು ಈ ಕೃತ್ಯ ನಡೆದಿತ್ತಾ ಅಥವಾ ಇದರ ಬೇರೆ ಏನಾದ್ರೂ ಕಾರಣ ಇದೆಯಾ ಅಂತ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯ ತಮ್ಮ ಮಗು ಸಿಕ್ಕಿದೆ ಅಂತ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 am, Sat, 20 August 22