ದೇವನಹಳ್ಳಿ: ಪೊಲೀಸರ ಸೋಗಿನಲ್ಲಿ ಬಂದು ಇಬ್ಬರ ಅಪಹರಣ! ಎಫ್​ಐಆರ್ ದಾಖಲಾದ ನಂತರ ಕೇಸ್​ಗೆ ಟ್ವಿಸ್ಟ್

| Updated By: sandhya thejappa

Updated on: Feb 12, 2022 | 2:58 PM

ಅಪಹರಣ ಪ್ರಕರಣಕ್ಕೆ ಇದೀಗೆ ಟ್ವಿಸ್ಟ್ ಸಿಕ್ಕಿದೆ. ಎಪ್ಐಆರ್ ದಾಖಲಾದ ನಂತರ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ಆನೇಕಲ್ ಪೊಲೀಸರು ರವಿ ಮತ್ತು ಬಾಬು ಇಬ್ಬರನ್ನು ಬಂಧಿಸಿದ್ದಾರೆ. ಅಪಹರಣದ ರೀತಿಯಲ್ಲಿ ಇಬ್ಬರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು.

ದೇವನಹಳ್ಳಿ: ಪೊಲೀಸರ ಸೋಗಿನಲ್ಲಿ ಬಂದು ಇಬ್ಬರ ಅಪಹರಣ! ಎಫ್​ಐಆರ್ ದಾಖಲಾದ ನಂತರ ಕೇಸ್​ಗೆ ಟ್ವಿಸ್ಟ್
ಕಂಬಿ ಅಂಗಡಿ ಮಾಲೀಕ ರಾಜು ನಾಯಕ್ ಮತ್ತು ಬಾಬು
Follow us on

ದೇವನಹಳ್ಳಿ: ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿಯಲ್ಲಿ ಇಬ್ಬರನ್ನು ಕಿಡ್ನಾಪ್ ಮಾಡಿದ್ದಾರೆ. ಪೊಲೀಸರ ಸೋಗಿನಲ್ಲಿ ಬಂದು ಕಂಬಿ ಅಂಗಡಿ ಮಾಲೀಕ ರಾಜು ನಾಯಕ್ ಮತ್ತು ಬಾಬು ಎಂಬುವವರನ್ನು ಅಪಹರಣ ಮಾಡಿದ್ದಾರೆ. ಆರೋಪಿಗಳು ವೈಟ್​ಫೀಲ್ಡ್​ ಪೊಲೀಸರೆಂದು ಹೇಳಿಕೊಂಡು ವಿಚಾರಣೆಗೆ ಬರುವಂತೆ ಹೇಳಿ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್  ಮಾಡಿ 8.5 ಟನ್ ಕಬ್ಬಿಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಳಾಗಿದೆ.

ಅಪರಿಚಿತರು ನಿನ್ನೆ ಮಧ್ಯಾಹ್ನ ರಾಜು ನಾಯಕ್ ಮತ್ತು ಸಂಜೆ ಬಾಬು ಎಂಬುವರನ್ನ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ. ಮೊದಲಿಗೆ ವೈಟ್​ಫೀಲ್ಡ್ ಪೊಲೀಸರು ಅಂತ ಹೇಳಿದ್ದಾರೆ. ನಂತರ ವೈಟ್​ಫೀಲ್ಟ್ ಪೊಲೀಸ್ ಠಾಣೆ ಬಳಿ ಕುಟುಂಬಸ್ಥರು ಹೋಗಿ ವಿಚಾರಿಸಿದಾಗ ನಾವಲ್ಲ ಅಂತ ಹೇಳಿದ್ದರು. ಕಿಡ್ನಾಪ್ ಮಾಡಿಕೊಂಡು ಕಾರಿನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಳಿ ಕಾರಿನಲ್ಲಿ ಅಪಹರಣ ಮಾಡಿದ್ದಾರೆ.

ಕಿಡ್ನಾಪ್ ಕೇಸ್​ಗೆ ಟ್ವಿಸ್ಟ್
ಅಪಹರಣ ಪ್ರಕರಣಕ್ಕೆ ಇದೀಗೆ ಟ್ವಿಸ್ಟ್ ಸಿಕ್ಕಿದೆ. ಎಪ್ಐಆರ್ ದಾಖಲಾದ ನಂತರ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ಆನೇಕಲ್ ಪೊಲೀಸರು ರವಿ ಮತ್ತು ಬಾಬು ಇಬ್ಬರನ್ನು ಬಂಧಿಸಿದ್ದಾರೆ. ಅಪಹರಣದ ರೀತಿಯಲ್ಲಿ ಇಬ್ಬರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು. ಸ್ಥಳೀಯ ಆವಲಹಳ್ಳಿ ಪೊಲೀಸರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡದೆ ಪೊಲೀಸರು ಕರೆದು ಹೋಗಿದ್ದರು. ಆವಲಹಳ್ಳಿ ಪೊಲೀಸರು ಅಪಹರಣ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮಾಹಿತಿ ತಿಳಿದುಬಂದಿದೆ.

ಆನೇಕಲ್ ಪೊಲೀಸರ ವಿರುದ್ಧ ಕುಟುಂಬಸ್ಥರು, ಆವಲಹಳ್ಳಿ ಪೊಲೀಸರು ಗರಂ ಆಗಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿಯಲ್ಲಿ ಹೈಡ್ರಾಮ ನಡೆದಿದೆ.

ಇದನ್ನೂ ಓದಿ

Faf Du Plessis, IPL 2022 Auction: 7 ಕೋಟಿ ರೂ.ಗೆ ಆರ್​ಸಿಬಿ ಸೇರಿದ ಹರಿಣಗಳ ಸ್ಟಾರ್ ಬ್ಯಾಟರ್ ಫಾಫ್ ಡು ಪ್ಲೆಸಿಸ್

ಸೋಮವಾರದಿಂದ ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನ ಆರಂಭ, ರಾಜ್ಯಪಾಲರ ಸ್ವಾಗತಕ್ಕೆ ಸಿದ್ಧತೆ

Published On - 2:55 pm, Sat, 12 February 22