ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 14 ವರ್ಷದ ಸಿಂಹ ಸಾವು; ಕಾರಣ ಏನು ಗೊತ್ತಾ?

| Updated By: Rakesh Nayak Manchi

Updated on: Nov 17, 2023 | 2:08 PM

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಂಹ ಸಾವನ್ನಪ್ಪಿದೆ. ಸಿಂಹವು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಅಲ್ಲದೆ, ಪಶುವೈದ್ಯರು ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 14 ವರ್ಷದ ಸಿಂಹ ಸಾವು; ಕಾರಣ ಏನು ಗೊತ್ತಾ?
ಮೃತಪಟ್ಟ ಸಿಂಹ ರಾಮ
Image Credit source: DH File Photo
Follow us on

ಬೆಂಗಳೂರು, ನ.17: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) 14 ವರ್ಷದ ರಾಮ ಎಂಬ ಹೆಸರಿನ ಸಿಂಹ ಸಾವನ್ನಪ್ಪಿದೆ. ಸಿಂಹವು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಅಲ್ಲದೆ, ಪಶುವೈದ್ಯರು ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 14 ವರ್ಷದ ಸಿಂಹ ಸಾವನ್ನಪ್ಪಿದೆ. ಸಿಂಹಕ್ಕೆ ಬುಧವಾರ ಸಂಜೆ ವಾಂತಿ ಸಂಬಂಧಿತ ಲಕ್ಷಣಗಳನ್ನು ಕಾಣಿಸಿಕೊಂಡಿದೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಗುರುವಾರ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರಿಗೆ ಗುಡ್​ ನ್ಯೂಸ್​: ಮಂಗಳವಾರವೂ ಬನ್ನೇರುಘಟ್ಟ ಉದ್ಯಾನವನ ಓಪನ್​

ಪಶುವೈದ್ಯರ ತಂಡದಿಂದ ಉತ್ತಮ ಆರೈಕೆಯನ್ನು ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಿಂಹ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ವೇಳೆ ಬಹು ಅಂಗಾಂಗ ವೈಫಲ್ಯಗಳಾಗಿರುವುದು ತಿಳಿದುಬಂದಿದೆ ಮತ್ತು ಸಾವಿಗೆ ಇದೇ ಕಾರಣ ಎಂದು ಶಂಕಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸದ್ಯ, ಒಳಾಂಗಗಳ ಮಾದರಿಗಳನ್ನು ಪರೀಕ್ಷೆಗಾಗಿ ಇನ್​ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯಾಲಜಿಕಲ್ಸ್ ಲ್ಯಾಬ್‌ಗೆ ಕಳುಹಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗಣೇಶ ಮತ್ತು ಅನು ಜೋಡಿ ಒಟ್ಟು 12 ಮರಿಗಳನ್ನು ಹೊಂದಿತ್ತು. ಈ ಪೈಕಿ ರಾಮ ಕೂಡ ಒಬ್ಬನಾಗಿದ್ದ. ಈತ 2010 ರ ಫೆಬ್ರವರಿ 4 ರಂದು ರಾಮ ಜನಿಸಿದ್ದನು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ