15 ಲಕ್ಷ ಕೋಟಿ ರೂ ವಂಚನೆ: ಷೇರು ಮಾರ್ಕೆಟ್​ನಿಂದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ನಿಷೇಧ

ನಕಲಿ‌ ಆದಾಯ ತೋರಿಸಿ ಹೂಡಿಕೆದಾರರಿಗೆ ವಂಚನೆ ಆರೊಪ ಹಿನ್ನೆಲೆ ಬೆಂಗಳೂರು ಮೂಲದ ಚಿನ್ನ ಸಂಸ್ಕರಣೆ ಮತ್ತು ಆಭರಣ ರಫ್ತು ಕಂಪನಿಗೆ ಷೇರು ಮಾರ್ಕೆಟ್​ಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಇನ್ನು ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಸೆಬಿಯಿಂದ ಬಿಗಿ ಕ್ರಮ ಕೈಗೊಳ್ಳಲಾಗಿದೆ.

15 ಲಕ್ಷ ಕೋಟಿ ರೂ ವಂಚನೆ: ಷೇರು ಮಾರ್ಕೆಟ್​ನಿಂದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ನಿಷೇಧ
ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್
Image Credit source: wikipedia
Edited By:

Updated on: Jun 04, 2026 | 8:59 PM

ಬೆಂಗಳೂರು, ಜೂನ್​ 04: ಬೆಂಗಳೂರು (bangaluru) ಮೂಲದ ಚಿನ್ನ ಸಂಸ್ಕರಣೆ ಮತ್ತು ಆಭರಣ ರಫ್ತು ಕಂಪನಿಯಾದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ವಿರುದ್ಧ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಭಾರಿ ಶಿಸ್ತುಕ್ರಮ ಜರುಗಿಸಿದೆ. ಕಂಪನಿಯು ಆರ್ಥಿಕ ಅಕ್ರಮ ಎಸಗಿರುವ ಗಂಭೀರ ಆರೋಪ ಹಿನ್ನೆಲೆ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮೆಹ್ತಾಗೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ತಾತ್ಕಾಲಿಕ ನಿಷೇಧ ಹೇರಿ ಮಧ್ಯಂತರ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ಷೇರು ಮಾರ್ಕೆಟ್​ನಿಂದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ನಿಷೇಧ
  • ನಕಲಿ ಆದಾಯ ಆರೋಪ ಮತ್ತು ಹೂಡಿಕೆದಾರರಿಗೆ ವಂಚನೆ
  • ಬೆಂಗಳೂರಿನಲ್ಲಿರುವ 1989ರಲ್ಲಿ ಸ್ಥಾಪನೆಯಾಗಿದ್ದ REL ಕಂಪನಿ

ನಕಲಿ‌ ಆದಾಯ ತೋರಿಸಿ ಹೂಡಿಕೆದಾರರಿಗೆ ವಂಚನೆ

1989ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿದ್ದ ಈ ಕಂಪನಿಯು, ಈ ಹಿಂದೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಚಿನ್ನದ ರಫ್ತುದಾರ ಎಂದು ಗುರುತಿಸಿಕೊಂಡಿತ್ತು. ಈ ಕಂಪನಿಯು 2021 ರಿಂದ 2025ರ ನಡುವಿನ ಅವಧಿಯಲ್ಲಿ ತನ್ನ ವಾರ್ಷಿಕ ಆದಾಯವನ್ನು ಬರೋಬ್ಬರಿ 15.15 ಲಕ್ಷ ಕೋಟಿ ರೂಪಾಯಿಗಳಷ್ಟು ಅತಿಯಾಗಿ ತೋರಿಸುವ ಮೂಲಕ ಹೂಡಿಕೆದಾರರಿಗೆ ವಂಚಿಸಿದೆ ಎಂಬ ದೂರು ಕೇಳಿಬಂದಿದೆ. ಕಂಪನಿಯ ಒಟ್ಟು ವರಮಾನದ ಸುಮಾರು ಭಾಗ ನಕಲಿ ಎಂಬ ಆಘಾತಕಾರಿ ಅಂಶ ಸೆಬಿಯ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು: ಎಸ್​​ಬಿಐ ಬ್ಯಾಂಕ್ ಒಕ್ಕೂಟಕ್ಕೆ ಕೋಟ್ಯಂತರ ರೂ ವಂಚನೆ; ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕ ಅರೆಸ್ಟ್​

ಇನ್ನು ಈ ಪ್ರಕರಣ ಬೆಳಕಿಗೆ ಬಂದಿದ್ದು 2024ರ ಮಾರ್ಚ್ 11ರಂದು ಸಾಮಾನ್ಯ ಹೂಡಿಕೆದಾರನೊಬ್ಬ ಸೆಬಿ ಮೆಟ್ಟಿಲೇರಿದಾಗ. ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯು ತನ್ನ ಲೆಕ್ಕಪತ್ರಗಳಲ್ಲಿ ತೋರಿಸಿದ್ದ ಕೋಟ್ಯಂತರ ರೂ ವ್ಯಾಪಾರ ಬಾಕಿ ಮೊತ್ತ ಕಳೆದ ಎರಡು ವರ್ಷಗಳಿಂದಲೂ ವಸೂಲಾಗದೆ ಹಾಗೇ ಉಳಿದಿದ್ದನ್ನು ಆ ದೂರುದಾರ ಪ್ರಶ್ನಿಸಿದ್ದ. ಸಾಮಾನ್ಯವಾಗಿ ಇಷ್ಟು ಸುದೀರ್ಘ ಕಾಲ ಬೃಹತ್ ಮೊತ್ತದ ಹಣ ಬಾಕಿ ಉಳಿದಿರುವುದು ಕಂಪನಿಯ ದಿವಾಳಿತನ ಅಥವಾ ವ್ಯವಸ್ಥಿತ ಲೆಕ್ಕಪತ್ರ ವಂಚನೆ ಎನ್ನಲಾಗಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಸೆಬಿ, 2024ರ ಅಕ್ಟೋಬರ್‌ನಲ್ಲಿ ವಿಶೇಷ ತನಿಖಾ ಅಧಿಕಾರಿಯನ್ನು ನೇಮಿಸಿತ್ತು.

ಆರೋಪ ತಳ್ಳಿಹಾಕಿದ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಕಂಪನಿ

ಇನ್ನು ತನ್ನ ಮೇಲೆ ಬಂದಿರುವ ಅಕ್ರಮ ಆರೋಪಗಳನ್ನು ತಳ್ಳಿಹಾಕಿರುವ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಕಂಪನಿಯು, ‘ತಾನು ಘೋಷಿಸಿರುವ ವಾರ್ಷಿಕ ಆದಾಯದ ವಿವರಗಳು ಸಂಪೂರ್ಣವಾಗಿ ನಿಖರ ಹಾಗೂ ಸರಿಯಾಗಿವೆ ಎಂದು ಸ್ಪಷ್ಟನೆ ನೀಡಿದೆ. ಸೆಬಿ ಮತ್ತು ತನ್ನ ಕಂಪನಿ ನಡುವೆ ಮಾಹಿತಿ ವಿನಿಮಯದ ಕೊರತೆ ಹಾಗೂ ಗೊಂದಲ ಉಂಟಾಗಿರುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
Loading...
Unable to load recommendations.
Follow Us