Bengaluru News: ಗೆಳೆಯನಿಗಾಗಿ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

|

Updated on: Jul 14, 2023 | 7:03 AM

ಚೀನಾ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಕಿರುಕುಳ ತಾಳಲಾರದೇ ಪ್ರಾಣಬಿಟ್ಟಿರುವ ದಾರುಣ ಘಟನೆ ಬೆಂಗಳೂರಿನ ನಡೆದಿದೆ.

Bengaluru News: ಗೆಳೆಯನಿಗಾಗಿ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಗೆಳೆಯನಿಗಾಗಿ ಆ್ಯಪ್ ಮೂಲಕ ಸಾಲ (moneylending apps) ಪಡೆದಿದ್ದ ವಿದ್ಯಾರ್ಥಿಯೊರ್ವ ಆತ್ಮಹತ್ಯೆ(suicide )ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್​ಎಂಟಿ ಕ್ವಾರ್ಟರ್ಸ್​ನಲ್ಲಿ ನಡೆದಿದೆ. ತೇಜಸ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ(Student). ಆ್ಯಪ್ ನಿರ್ವಾಹಕರ ಕಿರುಕುಳಕ್ಕೆ ಬೇಸತ್ತು ತಾಯಿಯ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಆತ್ಮಹತ್ಯೆಗೆ ಮುನ್ನ ತೇಜಸ್ ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಬೆಂಗಳೂರು: ಪೊಲೀಸರ ಸೋಗಿನಲ್ಲಿ ದರೋಡೆ, ವಿಚಾರಣೆ ವೇಳೆ ಕಟ್ಟುಕತೆ ಬಯಲಿಗೆ: ಇಬ್ಬರ ಬಂಧನ

ಸ್ನೇಹಿತ ಮಹೇಶ್‍ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಸಾಲ ಪಡೆದಿದ್ದ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ(ಕಂತು) ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ್ಯಪ್ ನಿರ್ವಾಹಕರು ತೇಜಸ್‍ಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ತೇಜಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಅಪ್ಪ ಅಮ್ಮ ನನ್ನನ್ನ ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ. ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ, ಇದು ನನ್ನ ಕೊನೆ ತೀರ್ಮಾನ. ಥ್ಯಾಂಕ್ಸ್ ಗುಡ್​ ಬೈ ಎಂದು ಡೆತ್ ನೋಟ್​ ಬರೆದಿಟ್ಟು ತೇಜಸ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ತೇಜಸ್ ಪೋಷಕರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ