ಡೆತ್ ನೋಟ್​ನಲ್ಲಿ ಪತ್ನಿಗೆ ಕ್ಷಮೆ ಕೇಳಿ ಪ್ರಾಣ ಕಳೆದುಕೊಂಡ ಬೆಂಗಳೂರಿನ ಉದ್ಯಮಿ

ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರು ಡೆತ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್​ನಲ್ಲಿ ಪತ್ನಿಗೆ ಕ್ಷಮೆ ಕೇಳಿ ಪ್ರಾಣ ಕಳೆದುಕೊಂಡಿದ್ದು, ಘಟನಾ ಸ್ಥಳಕ್ಕೆ ಹುಳಿಮಾವು ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಡ್ಡಿ ಟಾರ್ಚರ್​ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳ ಮೂಲಕ ತನಿಖೆ ನಡೆಸಿದ್ದಾರೆ.

ಡೆತ್ ನೋಟ್​ನಲ್ಲಿ ಪತ್ನಿಗೆ ಕ್ಷಮೆ ಕೇಳಿ ಪ್ರಾಣ ಕಳೆದುಕೊಂಡ ಬೆಂಗಳೂರಿನ ಉದ್ಯಮಿ
ಕಲಾಲ್ ದತ್ತ
Edited By:

Updated on: Jan 07, 2025 | 2:59 PM

ಬೆಂಗಳೂರು, (ಜನವರಿ 07): ಉದ್ಯಮಿಯೊಬ್ಬರು ಡೆತ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಉದ್ಯಮಿ ಕಲಾಲ್ ದತ್ತ(40) ನಿನ್ನೆ(ಜನವರಿ 06) ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್​ ನೋಟ್​ ಬರೆದಿಟ್ಟಿದ್ದು, ಸಾಲದಿಂದ ಬೇಸತ್ತು ಬಡ್ಡಿ ಟಾರ್ಚರ್​ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಸದ್ಯಕ್ಕೆ ಸ್ಥಳಕ್ಕೆ ಹುಳಿಮಾವು ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸಾಲದಿಂದ ಬೇಸತ್ತು ಬಡ್ಡಿ ಟಾರ್ಚರ್​ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ. ಹಾಗೇ ಡೆತ್ ನೋಟ್ ನಲ್ಲಿ ಪತ್ನಿಗೆ ಕ್ಷಮೆ ಕೇಳಿದ್ದಾರೆ. ಇನ್ನು ಈ ಸಂಬಂಧ ಮೃತ ಕಲಾಲ್ ದತ್ತ ಸಜಿನಿ, ತಮ್ಮ ಪತಿಯ ಬ್ಯುಸಿನೆಸ್​ ಪಾರ್ಟನರ್​​ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ರಸ್ತೆ ಅಪಘಾತದಲ್ಲಿ ತಾಯಿ-ಮಕ್ಕಳು ಸೇರಿದಂತೆ ಮೂವರ ಸಾವು

2016 ರಿಂದ ಮೃತ ಕಲಾಲ್ ದತ್ತ ಹಾಗೂ ಎಜಿ ಮರಿಸ್ವಾಮಿ ಎನ್ನುವರು ಸೇರಿಕೊಂಡು ಸಾಯಿ ಫೆಸಿಲಿಟಿ ಸರ್ವೀಸಸ್ ಕಂಪನಿ ನಡೆಸುತ್ತಿದ್ದರು. ಈ ವೇಳೆ ಮರಿಸ್ವಾಮಿ ಸುಮಾರು ನಾಲ್ಕು ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಮೃತ ಉದ್ಯಮಿ ಕಲಾಲ್ ದತ್ತ ಪತ್ನಿ ಸಜಿನಿ ಅವರು ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಹುಳಿಮಾವು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us