ಶೃಂಗೇರಿ ಜಗದ್ಗುರುಗಳು ಸನ್ಯಾಸ ಸ್ವೀಕರಿಸಿ 50 ವರ್ಷ: ಅ.26 ರಂದು ಬೆಂಗಳೂರಿನಲ್ಲಿ ಕಲ್ಯಾಣವೃಷ್ಟಿಸ್ತವ ಮಹಾಭಿಯಾನ

|

Updated on: Sep 24, 2024 | 9:20 PM

ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಮಹಾಸ್ವಾಮೀಜಿಯವರು ಸಂನ್ಯಾಸ ಸ್ವೀಕರಿಸಿ 50ನೇ ವರ್ಷವಾದ ಹಿನ್ನಲೆ ಅಕ್ಟೋಬರ್ 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶೃಂಗೇರಿ ಜಗದ್ಗುರುಗಳ ನೇತೃತ್ವದಲ್ಲಿ ‘ಕಲ್ಯಾಣವೃಷ್ಟಿಸ್ತವ ಮಹಾಭಿಯಾನ’ ನಡೆಯಲಿದೆ.

ಶೃಂಗೇರಿ ಜಗದ್ಗುರುಗಳು ಸನ್ಯಾಸ ಸ್ವೀಕರಿಸಿ 50 ವರ್ಷ: ಅ.26 ರಂದು ಬೆಂಗಳೂರಿನಲ್ಲಿ ಕಲ್ಯಾಣವೃಷ್ಟಿಸ್ತವ ಮಹಾಭಿಯಾನ
ಭಾರತೀತೀರ್ಥ ಮಹಾಸ್ವಾಮೀಜಿ
Follow us on

ಬೆಂಗಳೂರು, ಸೆ, 24: ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಮಹಾಸ್ವಾಮೀಜಿಯವರು ಸಂನ್ಯಾಸ ಸ್ವೀಕರಿಸಿ 50ನೇ ವರ್ಷವಾದ ಹಿನ್ನಲೆ ಈ ಶುಭಸಂದರ್ಭದಲ್ಲಿ ಸುವರ್ಣಭಾರತೀ ಹೆಸರಿನಲ್ಲಿ ವೇದಾಂತ ಭಾರತೀ ಹಾಗೂ ಶಂಕರ ತತ್ತ್ವಪ್ರಸಾರ ಅಭಿಯಾನದಡಿ ಈ ವರ್ಷ ರಾಜ್ಯಾದ್ಯಂತ ‘ಕಲ್ಯಾಣವೃಷ್ಟಿಸ್ತವ’ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಾಂತ ಭಾರತಿ ಸಂಸ್ಥೆಯ ನಿರ್ದೇಶಕ ಡಾ. ಶ್ರೀಧರ ಹೆಗಡೆ ತಿಳಿಸಿದ್ದಾರೆ.

ಈ ಅಭಿಯಾನದಲ್ಲಿ ಶ್ರೀ ಶಂಕರಭಗವತ್ಪಾದರು ರಚಿಸಿದ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರ ಹಾಗೂ ಲಕ್ಷ್ಮೀನರಸಿಂಹಕರುಣಾರಸಸ್ತೋತ್ರ ಎಂಬ ಮೂರು ಸ್ತೋತ್ರಗಳನ್ನು ಉಚಿತವಾಗಿ ಹೇಳಿಕೊಡಲಾಗುತ್ತಿದೆ. ಈಗಾಗಲೇ ಬೆಂಗಳೂರಿನ ಸಹಸ್ರಾರು ಪಾರಾಯಣ ಕೇಂದ್ರಗಳು ಹಾಗೂ ವಿದ್ಯಾಸಂಸ್ಥೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಜನರಿಗೆ ಈ ಸ್ತೋತ್ರಗಳನ್ನು ಅಭ್ಯಾಸ ಮಾಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ

KVS Pamphlet-Kan

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಲ್ಯಾಣವೃಷ್ಟಿಸ್ತವ ಮಹಾಭಿಯಾನ

ಅಕ್ಟೋಬರ್ 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶೃಂಗೇರಿ ಜಗದ್ಗುರುಗಳ ನೇತೃತ್ವದಲ್ಲಿ ಈ ಕಲ್ಯಾಣವೃಷ್ಟಿಸ್ತವ ಮಹಾಭಿಯಾನ  ನಡೆಯಲಿದೆ. ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಶಂಕರಭಾರತೀ ಮಹಾಸ್ವಾಮೀಜಿ. ಬ್ರಹ್ಮಾನಂದ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ