ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಶೃಂಗೇರಿ ಶ್ರೀ ಬದಲಿಗೆ ಮಠದ ಆಡಳಿತಾಧಿಕಾರಿ ಭಾಗಿ

ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಶೃಂಗೇರಿಯ ಹಿರಿಯ ಜಗದ್ಗುರು ಭಾರತಿ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಜಗದ್ಗುರು, ರಾಮಮಂದಿರ ಟ್ರಸ್ಟ್​ನ ಸದಸ್ಯರಾಗಿರುವ ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ಗೈರಾಗಲಿದ್ದಾರೆ. ಶೃಂಗೇರಿ ಮಠದ ಪ್ರತಿನಿಧಿಯಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ ಎಂಬುವವರು ಅಯೋಧ್ಯೆಗೆ ತೆರಳಲಿದ್ದಾರೆ.

ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಶೃಂಗೇರಿ ಶ್ರೀ ಬದಲಿಗೆ ಮಠದ ಆಡಳಿತಾಧಿಕಾರಿ ಭಾಗಿ
ಶೃಂಗೇರಿ ಶಾರದಾ ಪೀಠ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Jan 18, 2024 | 7:00 PM

ಚಿಕ್ಕಮಗಳೂರು, ಜನವರಿ 18: ಜನವರಿ 22ರಂದು ರಾಮಲಲ್ಲಾ (Ramlalla) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಶೃಂಗೇರಿಯ ಹಿರಿಯ ಜಗದ್ಗುರು ಭಾರತಿ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಜಗದ್ಗುರು, ರಾಮಮಂದಿರ ಟ್ರಸ್ಟ್​ನ ಸದಸ್ಯರಾಗಿರುವ ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ಗೈರಾಗಲಿದ್ದಾರೆ. ಶೃಂಗೇರಿ ಮಠದ ಪ್ರತಿನಿಧಿಯಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ ಎಂಬುವವರು ಅಯೋಧ್ಯೆಗೆ ತೆರಳಲಿದ್ದಾರೆ. ರಾಮಮಂದಿರ ಕಾರ್ಯಕ್ರಮದಲ್ಲಿ ಶೃಂಗೇರಿ ಜಗದ್ಗುರುಗಳು ಭಾಗಿಯಾಗುತ್ತಾರೆನ್ನುವುದು ಸುಳ್ಳು ಸುದ್ದಿ. ಆ ಮೂಲಕ ಸಾರ್ವಜನಿಕರ ದಾರಿ ತಪ್ಪಿಸಬಾರದೆಂದು ಶೃಂಗೇರಿ ಮಠದ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ.

ಪ್ರಾಣ ಪ್ರತಿಷ್ಠಾಪನೆ ವೇಳೆ ರಾಮ ತಾರಕ, ರಾಮ ಭುಜಂಗ ಸ್ತೋತ್ರ ಪಠಣವಂತೆ ಕಿರಿಯಶ್ರೀ ಕರೆ ನೀಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಶೃಂಗೇರಿ ಮಠದ ಪುರೋಹಿತ ಶಿವಕುಮಾರ ಶರ್ಮಾರಿಗೆ ಆಹ್ವಾನ

500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರತಿಷ್ಠಾಪನೆಗೆ ಕ್ಷಣಗಣನೇ ಆರಂಭವಾಗಿದೆ. ಆದರೆ, ಈ ಮಧ್ಯೆ ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಮಠಗಳ ಪೈಕಿ ಮೂರು ಮಠಗಳು ಅಯೋಧ್ಯೆ ಕಾರ್ಯಕ್ರಮಕ್ಕೆ ಗೈರಾಗೋದನ್ನ ಸ್ಪಷ್ಟಪಡಿಸಿದ್ದಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ತುಂಗಾ ನದಿ ತೀರದಲ್ಲಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದ ಧರ್ಮಪೀಠದ ಸಚ್ಚಿದಾನಂದ ಶ್ರೀಗಳು ಶಂಕರಾಚಾರ್ಯರು-ಶ್ರೀರಾಮನ ಸಂಬಂಧವನ್ನ ಬಿಚ್ಚಿಟ್ಟಿದ್ದರು.

ಹರಿ ಅಂದರೆ ಮಹಾವಿಷ್ಟು. ವಿಷ್ಣುವಿನ 7ನೇ ಅವತಾರವೇ ಶ್ರೀರಾಮನ ಅವತಾರ. ಶಂಕರಾಚಾರ್ಯರು ಕೂಡ ಶ್ರೀರಾಮನ ಪರಮಭಕ್ತರಾಗಿದ್ದರು. ಶ್ರೀರಾಮನ ಮೇಲೆ ಭಕ್ತಿ-ಭಾವ ಹೊಂದಿದ್ದ ಶಂಕರರು ಸ್ತೋತ್ರಗಳನ್ನ ರಚಿಸಿ ರಾಮನಿಗೆ ಸಮರ್ಪಿಸಿದ್ದಾರೆ. ಅಷ್ಟೇ ಅಲ್ಲದೇ, ಶಂಕರರು ಸ್ಥಾಪಿಸಿದ್ದ ಪೀಠಗಳಲ್ಲಿ ಶ್ರೀರಾಮನ ಆರಾಧನೆ ನಿರಂತರವಾಗಿರಬೇಕೆಂದು ಶಂಕರರೇ ಆದೇಶಿಸಿದ್ದಾರೆ. ಶಂಕರರು ಸ್ಥಾಪಿಸಿದ ಎಲ್ಲಾ ಮಠಗಳಲ್ಲೂ ಶ್ರೀರಾಮಮಂದಿರವಿದೆ. ಶಂಕರ ಪರಂಪರೆಯ ಎಲ್ಲಾ ಮಠಗಳು ಶ್ರೀರಾಮನನ್ನ ಆರಾಧಿಸಿಕೊಂಡು ಬರುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ, ಎಲ್ಲರೂ ರಾಮ ಜಪ ಮಾಡುವಂತೆ ಶೃಂಗೇರಿ ಶ್ರೀಗಳು ಕರೆ

ಶ್ರೀರಾಮ ಭಾರತೀಯರ ದೇವರು. ನಮ್ಮ ರಾಮ ನಮ್ಮ ಹೆಮ್ಮೆ. ದೇಶದ ಹೆಗ್ಗುರುತು. ಅಸ್ಮಿತೆ. ಅಯೋಧ್ಯೆಯಲ್ಲಿ ಶ್ರೀರಾಮನ ಪುರಾತನ ದೇಗುಲವಿತ್ತು. ಆದರೆ, ವಿದೇಶಿ ಆಕ್ರಮಣದಿಂದ ಅದು ನಾಶವಾಗಿತ್ತು. ಆದರೆ, 500 ವರ್ಷದ ತ್ಯಾಗ, ಹೋರಾಟ, ಸಮರ್ಪಣಾ ಮನೋಭಾವದಿಂದ ಅದೇ ಸ್ಥಳದಲ್ಲಿ ದೇಗುಲ ನಿರ್ಮಾಣ ನಮ್ಮ ಹೆಮ್ಮೆ.

ಎಲ್ಲಾ ಪಂಥ-ಮತ-ಸಿದ್ಧಾಂತದ ಸ್ವಾಭಿಮಾನದ ಸಂಕೇಶ ರಾಮಮಂದಿರ. ಶಂಕರ ಪರಂಪರೆಯ ಯಾವ ಮಠ-ಗುರುಗಳಿಗೂ ಮಂದಿರದ ಬಗ್ಗೆ ಕಿಂಚಿತ್ತು ಭೇದವಿಲ್ಲ. ಯಾರಾದರೂ ಭಿನ್ನಾಭಿಪ್ರಾಯ ಹೇಳಿದ್ದರೆ ಅದು ಅವರ ವೈಯಕ್ತಿಕ ವಿಚಾರವಷ್ಟೆ. ಆದರೆ, ಇದನ್ನ ವಿಮರ್ಶೆ ಮಾಡುವಾಗ ದೇಶ-ಧರ್ಮದ ಸಂರಕ್ಷಣೆಯ ದೃಷ್ಠಿಯಿಂದ ಸಮನ್ವಯದ ಚಿಂತನೆ ಇರಲೇಬೇಕು. ಶಂಕರ ಪರಂಪರೆಯ ಎಲ್ಲಾ ಮಠಗಳು ರಾಮಮಂದಿರಕ್ಕೆ ತಮ್ಮ ಆಶೀರ್ವಾದ ತಿಳಿಸಿದ್ದಾರೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ