AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿಗೆ ರಾಮ ಲಕ್ಷ್ಮಣ ಸೀತಾ ಮಾತೆ ಚಿತ್ರ ಅಂಟಿಸಿ, ಕೇಸರೀಮಯ ಮಾಡಿ ರಾಮಭಕ್ತಿ ಪ್ರದರ್ಶಿಸುತ್ತಿರುವ ಹುಬ್ಬಳ್ಳಿಯ ಸಚಿನ್!

ಸಚಿನ ಮಿಸ್ಕಿನ್ ಅವರು 15 ಸಾವಿರ ರೂಪಾಯಿ ಖರ್ಚು ಮಾಡಿ ಸಧ್ಯ ಕಾರನ್ನು ವಿಶೇಷವಾಗಿ ಕಾಣುವಂತೆ ಮಾಡಿ ಗಮನ ಸೆಳೆಯುತ್ತಿದ್ದಾನೆ. ಕಾರು ಎಲ್ಲಿ ಹೋದರೂ ಸಾಕು ಜನ ಕಾರನ್ನು ನೋಡುತ್ತಾ, ಸೆಲ್ಪಿ ತಗೆದುಕೊಳ್ಳುತ್ತಿರುವ ಚಿತ್ರಣ ಕಂಡು ಬರುತ್ತಿದೆ

ಶಿವಕುಮಾರ್ ಪತ್ತಾರ್
| Updated By: ಸಾಧು ಶ್ರೀನಾಥ್​|

Updated on:Jan 18, 2024 | 5:07 PM

Share

ದೇಶದೆಲ್ಲೇಡೆ ಎಲ್ಲಿ ನೋಡಿದಲ್ಲಿ ಜೈ ಶ್ರೀರಾಮ್ ಎನ್ನುತ್ತಾ ರಾಮನಾಮನ ಜಪ ಆರಂಭಗೊಂಡಿದೆ. ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಇತ್ತ ಇಲ್ಲೊಬ್ಬ ರಾಮ ಭಕ್ತ ಸಂಪೂರ್ಣವಾಗಿ ತನ್ನ ಕಾರನ್ನು ರಾಮ, ಹನುಮಂತ, ಸೀತಾ ಮಾತೆ ಯೊಂದಿಗೆ ಹೊಸ ರಾಮ ಮಂದಿರದ ಸ್ಟಿಕರ್ ಹಾಕಿಕೊಂಡು ತಮ್ಮೀ ಕಾರನ್ನು ಕೇಸರಿಮಯ ಮಾಡಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾನೆ. ಅಷ್ಟಕ್ಕೂ ಆ ರಾಮಭಕ್ತ ಯಾರು? ಆ ಕಾರನ್ನು ಹೇಗೆ ಮಾಡಿದ್ದಾರೆ… ಈ ಸ್ಟೋರಿ ನೋಡಿ.

ಹೌದು ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ದತೆಗಳು ನಡೆದಿದ್ದು ಇಂದು ಗುರುವಾರದಿಂದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ. ಇತ್ತ ದೇಶದೆಲ್ಲೆಡೆ ಜನರು ಕೂಡಾ ಈ ಒಂದು ಸಂಭ್ರಮವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತುಕೊಂಡಿದ್ದಾರೆ. ಆ ಐತಿಹಾಸಿಕ ದಿನವನ್ನು ವಿಶೇಷವಾಗಿ ಆಚರಣೆ ಮಾಡಲು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಬೇರೆ ಬೇರೆ ಆಚರಣೆಯ ಮೂಲಕ ಸಡಗರವನ್ನು ಇಮ್ಮಡಿಗೊಳಿಸಲು ಕರೆ ನೀಡಿದ್ದಾರೆ. ಹೀಗಾಗಿ ಎಲ್ಲರೂ ಕೂಡಾ ಜನವರಿ 22 ರಂದು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ರಾಮ ಮಂದಿರ ಉದ್ಘಾಟನೆಯನ್ನು ಮಾಡಲು ಕಾತುರದಿಂದ ಕಾಯುತ್ತಿದ್ದು ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೊಬ್ಬ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಕಾರನ್ನು ಸಂಪೂರ್ಣವಾಗಿ ಕೇಸರಿ ಮಯವನ್ನಾಗಿ ಮಾಡಿದ್ದಾನೆ.

ಎಸ್ ಹೀಗೆ ಕಾರಿನ ಮುಂದೆ ನಿಂತುಕೊಂಡಿರುವ ಯುವಕನೇ ಸಚಿನ ಮಿಸ್ಕಿನ್ ನಗರದ ಹೊಸೂರಿನ ನಿವಾಸಿಯಾಗಿದ್ದು ರಾಮಭಕ್ತನಾಗಿದ್ದಾನೆ. ಸಧ್ಯ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಂದರ್ಭದಲ್ಲಿ ತನ್ನ ಕಾರನ್ನು ರಾಮ, ಲಕ್ಷ್ಮಣ, ಸೀತೆ ಹುನುಮಂತನ ಸ್ಟಿಕರ್ ಮಾಡಿಸಿದ್ದಾನೆ. ಸಚಿನ್ ಕಾರು ಸಂಪೂರ್ಣ ಕೇಸರಿಮಯ ವಾಗಿದೆ.

ಕಾರನ್ನು ಸಂಪೂರ್ಣವಾಗಿ ರಾಮ,ಲಕ್ಷ್ಮಣ,ಸೀತಾ ಮಾತೆ ಹನುಮಂತ ನಿಂದ ತುಂಬಿಕೊಂಡಿದ್ದು ದೇಶದ ಜನತೆ ಬೇರೆ ಬೇರೆ ರೀತಿಯಲ್ಲಿ ಸಡಗರ ಸಂಭ್ರಮವನ್ನು ಆಚರಣೆ ಮಾಡುತ್ತಿದಾರೆ. ಸಚಿನ ಮಿಸ್ಕಿನ್ ಅವರು 15 ಸಾವಿರ ರೂಪಾಯಿ ಖರ್ಚು ಮಾಡಿ ಸಧ್ಯ ಕಾರನ್ನು ವಿಶೇಷವಾಗಿ ಕಾಣುವಂತೆ ಮಾಡಿ ಗಮನ ಸೆಳೆಯುತ್ತಿದ್ದಾನೆ. ಕಾರು ಎಲ್ಲಿ ಹೋದರೂ ಸಾಕು ಜನ ಕಾರನ್ನು ನೋಡುತ್ತಾ, ಸೆಲ್ಪಿ ತಗೆದುಕೊಳ್ಳುತ್ತಿರುವ ಚಿತ್ರಣ ಕಂಡು ಬರುತ್ತಿದೆ.

ಇದನ್ನೂ ನೋಡಿ: ಜೈ ಶ್ರೀರಾಮ್ ಎನ್ನುತ್ತಾ ಬೈಕ್ ಮೂಲಕ ಅಯೋಧ್ಯೆಯತ್ತ ಹೊರಟೇಬಿಟ್ಟರು ಧಾರವಾಡದ ಆ ನಾಲ್ಕು ಮಂದಿ!

ಅಯೋಧ್ಯೆಯ ಶ್ರೀ ರಾಮಚಂದ್ರನಿಗೆ ವಿಶೇಷ ಅಭಿಮಾನ ತೋರಿದ ಸಚಿನನ ಕಾರು ಈಗ ಹುಬ್ಬಳ್ಳಿಯಲ್ಲಿ ವಿಶೇಷವಾಗಿ ಕಂಡು ಬರುತ್ತಿದೆ. ಈ ಹಿಂದಿನಿಂದಲೂ ಹಿಂದೂ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ. ಈತ ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತನ್ನ ಕಾರಿಗೆ ಸಂಪೂರ್ಣವಾಗಿ ಜೈಶ್ರೀರಾಮ ಘೋಷಣೆಗಳು, ಹನುಮಂತ, ರಾಮನ ಭಾವಚಿತ್ರದ ಸ್ಟೀಕರ್ ಹಚ್ಚುವ ಮೂಲಕ ತನ್ನ ವಿಶೇಷ ಅಭಿಮಾನವನ್ನು ತೋರಿಸಿದ್ದಾನೆ. ಇನ್ನು ಈತನ ಈ ಕಾರ್ಯಕ್ಕೆ ಸ್ಥಳೀಯರು ಕೂಡಾ ಸಾಥ್ ನೀಡಿದ್ದಾರೆ. ಸಚಿನ್ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ತನ್ನ ಕಾರನ್ನು ಓಡಾಡಿಸುವ ಮೂಲಕ ಶ್ರೀರಾಮನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ, ತಮ್ಮಲ್ಲಿನ ರಾಮ ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ.

ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Thu, 18 January 24