ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ, ಇತ್ತ ಧಾರವಾಡದಲ್ಲಿ ಅಚ್ಚರಿಯ ಘಟನೆ
ಮೇಲ್ಭಾಗದಲ್ಲಿ ಶಿವ-ಪಾರ್ವತಿ ಕೆತ್ತನೆ, ಕೆಳಭಾಗದಲ್ಲಿ ಶ್ರೀರಾಮನ ಕೆತ್ತನೆಯಿದೆ. ವಿಗ್ರಹ ಕಂಡು ಅಚ್ಚರಿಗೊಂಡ ಸ್ಥಳೀಯರು ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ.
ಧಾರವಾಡ, ಜನವರಿ 19: ಅಯೋಧ್ಯೆಯಲ್ಲಿ ಇನ್ನು ಮೂರೇ ದಿನದಲ್ಲಿ (ಜನವರಿ 22) ರಾಮಮಂದಿರ ಉದ್ಘಾಟನೆಯಾಗಲಿದೆ. ಈ ಮಧ್ಯೆ ಧಾರವಾಡದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕಲಿಕೇರಿ ಧಾರವಾಡ ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ಶ್ರೀರಾಮ ವಿಗ್ರಹ ಪತ್ತೆಯಾಗಿದೆ.
ಗ್ರಾಮದ ಹೊರಭಾಗದಲ್ಲಿ ಕೆರೆಯ ದಂಡೆಯಲ್ಲಿ ಶ್ರೀರಾಮ ವಿಗ್ರಹ ಪತ್ತೆಯಾಗಿದೆ. ಗ್ರಾಮಸ್ಥರು ಜೆಸಿಬಿ ಮೂಲಕ ಕಚ್ಚಾ ರಸ್ತೆ ದುರಸ್ತಿ ನಡೆಸುತ್ತಿದ್ದಾಗ ದೊಡ್ಡ ಕಲ್ಲು ಪತ್ತೆಯಾಗಿದೆ. ಕಲ್ಲಿನಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ರೂಪಗಳಿವೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ 1 ಕೆಜಿ ಚಿನ್ನ ನೀಡಿದ ಕನ್ನಡಿಗ
ಮೇಲ್ಭಾಗದಲ್ಲಿ ಶಿವ-ಪಾರ್ವತಿ ಕೆತ್ತನೆ, ಕೆಳಭಾಗದಲ್ಲಿ ಶ್ರೀರಾಮನ ಕೆತ್ತನೆಯಿದೆ. ವಿಗ್ರಹ ಕಂಡು ಅಚ್ಚರಿಗೊಂಡ ಸ್ಥಳೀಯರು ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. ಜನವರಿ 22 ರಂದು ಕಲಿಕೇರಿ ಗ್ರಾಮದಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
Also Read: ಏಕಾಶಿಲಾ ಹನುಮ.. ಅದೂ ಸಹ ಶಿಲ್ಪಿ ಅರುಣ್ ಯೋಗಿರಾಜ್ ಅವರದ್ದೇ ಕೆತ್ತನೆ, ಇಲ್ಲಿದೆ ನೋಡಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ