ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ, ಎಲ್ಲರೂ ರಾಮ ಜಪ ಮಾಡುವಂತೆ ಶೃಂಗೇರಿ ಶ್ರೀಗಳು ಕರೆ

ಅಯೋಧ್ಯೆ ಶ್ರೀರಾಮ ಮಂದಿಯರದಲ್ಲಿ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮದಿಂದ ಶಂಕರ ಮಠಗಳು ದೂರ ಉಳಿದಿವೆ ಎಂದು ಅಪಪ್ರಚಾರಗಳು ನಡೆಯುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠದ ಕಿರಿಯ ಸ್ವಾಮೀಜಿ ವಿಧುಶೇಖರ ಶ್ರೀ, ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ, ಎಲ್ಲರೂ ರಾಮ ಜಪ ಮಾಡುವಂತೆ ಕರೆ ನೀಡಿದರು.

ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ, ಎಲ್ಲರೂ ರಾಮ ಜಪ ಮಾಡುವಂತೆ ಶೃಂಗೇರಿ ಶ್ರೀಗಳು ಕರೆ
ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ, ಎಲ್ಲರೂ ರಾಮ ಜಪ ಮಾಡುವಂತೆ ಶೃಂಗೇರಿ ಶ್ರೀಗಳು ಕರೆ
Follow us
| Updated By: Rakesh Nayak Manchi

Updated on:Jan 16, 2024 | 10:30 PM

ಚಿಕ್ಕಮಗಳೂರು, ಜ.16: ಅಯೋಧ್ಯೆ ಶ್ರೀರಾಮ ಮಂದಿಯರದಲ್ಲಿ (Ayodhya Ram Mandir) ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮದಿಂದ ಶಂಕರ ಮಠಗಳು ದೂರ ಉಳಿದಿವೆ ಎಂದು ಅಪಪ್ರಚಾರಗಳು ನಡೆಯುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ (Sringeri) ಮಠದ ಕಿರಿಯ ಸ್ವಾಮೀಜಿ ವಿಧುಶೇಖರ ಶ್ರೀ, ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ, ಎಲ್ಲರೂ ರಾಮ ಜಪ ಮಾಡುವಂತೆ ಕರೆ ನೀಡಿದರು.

ಮಕರ ಸಂಕ್ರಮಣದಿಂದ ಸೂರ್ಯ ತನ್ನ ಪಥ ಬದಲಿಸುತ್ತಾನೆ. ದಕ್ಷಿಣದಿಂದ ಉತ್ತರಾಯಣದ ಕಡೆಗೆ ಪಥ ಬದಲಾವಣೆಯಾಗಿದೆ. ದೇಶದ ನಾಸ್ತಿಕರ ಚಿತ್ತ ಉತ್ತರದತ್ತ ನೆಟ್ಟಿದೆ. ಈ ಉತ್ತರಾಯಣದಲ್ಲಿ ಉತ್ತರದಲ್ಲಿ ವಿಶೇಷವಾದ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಗಮನ ದಕ್ಷಿಣದಿಂದ ಉತ್ತರದತ್ತ ಹೋಗಿದೆ ಎಂದರು.

ನಾಸ್ತಿಕರ ಮನದಲ್ಲಿ ಎರಡು ವಿಚಾರಗಳು ಕೇಂದ್ರೀಕೃತವಾಗಿದೆ. ಒಂದು, ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿರುವುದು, ಮತ್ತೊಂದು ಉತ್ತರದ ಅಯೋಧ್ಯೆಯಲ್ಲಿ ನಡೆಯುತ್ತಿರುವ ಧರ್ಮಕಾರ್ಯ. ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮಜನ್ಮ ಭೂಮಿ ಸಂಪನ್ನವಾಗಲಿದೆ. ಅಯೋಧ್ಯೆಯಲ್ಲಿ ಭವ್ಯ ಮತ್ತು ನವ್ಯಮಂದಿರ ಲೋಕಾರ್ಪಣೆಗೊಳ್ಳಲಿದೆ ಎಂದರು.

ಇದನ್ನೂ ಓದಿ: Ram Janmbhoomi Case 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣದವರೆಗೆ; ಟೈಮ್​ಲೈನ್

ಕೆಲವರು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ಮತ್ತಲವರು ಅಯೋಧ್ಯೆಯ ರಾಮಮಂದಿರಕ್ಕೆ ಮನಸ್ಸಲ್ಲೇ ಖುಷಿ ಪಡುತ್ತಿದ್ದಾರೆ. 5 ಶತಮಾನಗಳ ಬಳಿಕ ಈ ಶುಭಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬ ನಾಸ್ತಿಕನಿಗೂ ಇದು ಸಂತಸದ ಸಂಗತಿಯಾಗಿದೆ. ಪ್ರತಿಯೊಬ್ಬರೂ ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರು.

ಅಯೋಧ್ಯೆ, ಶೃಂಗೇರಿಯಲ್ಲೂ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ. ಸೂರ್ಯವಂಶದಲ್ಲಿ ಶ್ರೀರಾಮನ ಅವತಾರವಾಗಿದೆ, ಇದು ಸೂರ್ಯವಂಶದ ಬಹದೊಡ್ಡ ಸೌಭಾಗ್ಯ. ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದ್ದಾನೆ. ಸೂರ್ಯದೇವ ಕೂಡ ದಕ್ಷಿಣದಿಂದ ಉತ್ತರದ ಕಡೆ ಹೋಗಿ ನೋಡುತ್ತಿದ್ದಾನೆ. ಪ್ರಾಣಪ್ರತಿಷ್ಠಾಪನೆ ಪವಿತ್ರ ಕಾರ್ಯವನ್ನು ಸೂರ್ಯದೇವ ನೋಡುತ್ತಿದ್ದಾನೆ ಎಂದರು.

ರಾಮಭುಜಂಗ ಸ್ತೋತ್ರ ಪಠಣ

ಭಗವಾನ್ ಶ್ರೀರಾಮನ ರಾಮಭುಜಂಗ ಸ್ತೋತ್ರ ಪಠಣ ಮಾಡುವಂತೆ ಶ್ರೀಗಳು ಕರೆ ನೀಡಿದ್ದು, ಶಂಕರಾಚಾರ್ಯರು ಪಠಣ ಮಾಡಿರುವ ರಾಮನ ಶ್ಲೋಕದಲ್ಲಿ ಅದ್ಭುತ ಅರ್ಥವಿದೆ. ಕಳೆದ ದೀಪಾವಳಿಯಲ್ಲೇ ರಾಮ ಜಪ ಮಾಡಲು ಹೇಳಿದ್ದೇವೆ. ನಾಸ್ತಿಕರು ಕೂಡ ರಾಮಜಪ ಮಾಡುತ್ತಿದ್ದಾರೆ ಎಂದರು.

ಸುಳ್ಳು, ಅಪಪ್ರಚಾರಕ್ಕೆ ಕಿವಿಗೊಡಬೇಡಿ

ಅಯೋಧ್ಯೆಗೂ ಶೃಂಗೇರಿಗೂ ಅವಿನಾಭಾವ ಸಂಬಂಧವಿದೆ. ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ. ಎಲ್ಲರೂ ರಾಮ ಜಪ ಮಾಡುವಂತೆ ಶೃಂಗೇರಿಯ ಕಿರಿಯ ಜಗದ್ಗುರು ವಿಧುಶೇಖರ ಶ್ರೀಗಳು ಕರೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Tue, 16 January 24

ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ