ಚಿಕ್ಕಮಗಳೂರು: ಡಿಪೋ ಮ್ಯಾನೇಜರ್ ಒತ್ತಡಕ್ಕೆ ಕೆಟ್ಟು ಹೋದ ಬಸ್ ಚಾಲನೆ! ಚಾಲಕನ ವಿರುದ್ಧ ಪ್ರಯಾಣಿಕರ ಆಕ್ರೋಶ
ಡಕೋಟ ಕೆಎಸ್ಆರ್ಟಿಸಿ ಬಸ್ಗಳನ್ನು ರಸ್ತೆಗಿಳಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಅವಾಂತಗಳು ಸೃಷ್ಟಿಯಾಗುತ್ತಿವೆ. ಹೀಗಿದ್ದರೂ ಡಿಪ್ಪೋ ಮ್ಯಾನೇಜರ್ ಒತ್ತಡಕ್ಕೆ ಮಣಿದ ಚಾಲಕರೊಬ್ಬರು ಗೇರ್ ಸಮಸ್ಯೆ ಇದ್ದರೂ ಪ್ರಯಾಣಿಕರನ್ನು ಹತ್ತಿಸಿ ಬಸ್ ಚಾಲನೆ ಮಾಡಿದ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ವಿಚಾರ ತಿಳಿದ ಪ್ರಯಾಣಿಕರು ಚಾಲಕನನ್ನು ತರಾಟೆಗೆ ತೆಗದುಕೊಂಡಿದ್ದಾರೆ.
ಚಿಕ್ಕಮಗಳೂರು, ಜ.18: ಡಕೋಟ ಕೆಎಸ್ಆರ್ಟಿಸಿ (KSRTC) ಬಸ್ಗಳನ್ನು ರಸ್ತೆಗಿಳಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಅವಾಂತಗಳು ಸೃಷ್ಟಿಯಾಗುತ್ತಿವೆ. ಹೀಗಿದ್ದರೂ ಡಿಪ್ಪೋ ಮ್ಯಾನೇಜರ್ ಒತ್ತಡಕ್ಕೆ ಮಣಿದ ಚಾಲಕರೊಬ್ಬರು ಗೇರ್ ಸಮಸ್ಯೆ ಇದ್ದರೂ ಪ್ರಯಾಣಿಕರನ್ನು ಹತ್ತಿಸಿ ಬಸ್ ಚಾಲನೆ ಮಾಡಿದ ಪ್ರಕರಣ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ. ವಿಚಾರ ತಿಳಿದ ಪ್ರಯಾಣಿಕರು ಚಾಲಕನನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಕಡೂರಿನಿಂದ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ ಬಸ್ ರಸ್ತೆ ಮಧ್ಯೆ ಕೆಟ್ಟು ಹೋಗಿದೆ. ಗೇರ್ ಬೀಳದಿದ್ದರೂ 80 ಪ್ರಯಾಣಿಕರನ್ನು ಹಾಕಿ ಬಸ್ ಚಾಲನೆ ಮಾಡಲಾಗಿದೆ. ಪ್ರಯಾಣಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆ ಬಸ್ ನಿಲ್ಲಿಸಿ ಬೇರೊಂದು ಬಸ್ಗೆ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ. ಬಳಿಕ ಚಾಲಕ ಆ ಬಸ್ ಅನ್ನು ಕಡೂರು ಬಸ್ ನಿಲ್ದಾಣಕ್ಕೆ ಕೊಂಡೊಯ್ದಿದ್ದಾರೆ. ಕಡೂರು ಕೆಎಸ್ಆರ್ಟಿಸಿ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ