ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಕಾಂಗ್ರೆಸ್ ಅಭ್ಯರ್ಥಿಯಾಗುವರೇ ಅಂತ ಕೇಳಿದರೆ ಪರಮೇಶ್ವರ್ ಗೊತ್ತಿಲ್ಲ ಅಂದರು

ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಕಾಂಗ್ರೆಸ್ ಅಭ್ಯರ್ಥಿಯಾಗುವರೇ ಅಂತ ಕೇಳಿದರೆ ಪರಮೇಶ್ವರ್ ಗೊತ್ತಿಲ್ಲ ಅಂದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 18, 2024 | 1:14 PM

ಕಲಬುರಗಿ, ಕೋಲಾರ ಮತ್ತು ಚಾಮರಾಜನಗರ-ಮೂರು ಕ್ಷೇತ್ರಗಳ ಪೈಕಿ ಒಂದರಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ವದಂತಿ ಹರಿದಾಡುತ್ತಿದೆಯಲ್ಲ ಅಂತ ಕೇಳಿದಾಗ ಪರಮೇಶ್ವರ್ ಎಂದಿನಂತೆ ಗೊತ್ತಿಲ್ಲ, ಮೊನ್ನೆ ದೆಹಲಿಯಲ್ಲಿ ರಾಜ್ಯ ಸರ್ಕಾರದ ಸಚಿವರೊಂದಿಗೆ ಎಐಸಿಸಿ ವರಿಷ್ಢರು ನಡೆಸಿದ ಸಭೆಯಲ್ಲಿ ಖರ್ಗೆ ಸ್ಪರ್ಧೆ ಕುರಿತು ಚರ್ಚೆಯಾಗಲಿಲ್ಲ ಅಂತ ಹೇಳಿದರು.

ಬೆಂಗಳೂರು: ಗೃಹ ಸಚಿವ ಜಿ ಪರಮೇಶ್ವರ (G Parameshwara) ಮಾತಾಡುವ ಶೈಲಿಯ ಬಗ್ಗೆ ನಾವು ಹೇಳಿದ್ದೇವೆ. ಮಾಧ್ಯಮ ಪ್ರತಿನಿಧಿಗಳು ಅವರಿಗೆ ಪ್ರಶ್ನೆ ಕೇಳಿದಾಗ ಗೊತ್ತಿಲ್ಲ ಅನ್ನುತ್ತಲೇ ಪ್ರತಿಕ್ರಿಯೆ ನೀಡಲಾರಂಭಿಸುತ್ತಾರೆ. ಇಂದು ಬೆಂಗಳೂರಲ್ಲಿ ಮಾಧ್ಯಮದವರು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವರೇ? ಕಲಬುರಗಿ, ಕೋಲಾರ ಮತ್ತು ಚಾಮರಾಜನಗರ-ಮೂರು ಕ್ಷೇತ್ರಗಳ ಪೈಕಿ ಒಂದರಿಂದ ಸ್ಪರ್ಧಿಸುವ ವದಂತಿ ಹರಿದಾಡುತ್ತಿದೆ ಅಂತ ಕೇಳಿದಾಗ ಅವರು ಎಂದಿನಂತೆ ಗೊತ್ತಿಲ್ಲ, ಮೊನ್ನೆ ದೆಹಲಿಯಲ್ಲಿ ರಾಜ್ಯ ಸರ್ಕಾರದ ಸಚಿವರೊಂದಿಗೆ ಎಐಸಿಸಿ ವರಿಷ್ಢರು ನಡೆಸಿದ ಸಭೆಯಲ್ಲಿ ಖರ್ಗೆ ಸ್ಪರ್ಧೆ ಕುರಿತು ಚರ್ಚೆಯಾಗಲಿಲ್ಲ ಅಂತ ಹೇಳಿದರು. ಮಂಡ್ಯ ಕ್ಷೇತ್ರವನ್ನು ಎನ್ ಡಿಎ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರೆ, ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಕಾಂಗ್ರೆಸ್ ಪಕ್ಷದೆಡೆ ವಾಲುವ ನಿರೀಕ್ಷೆಯಿದೆ ಎನ್ನಲಾಗುತ್ತಿದ್ದು, ಅವರು ಬಯಸಿದರೆ ಟಿಕೆಟ್ ಕೊಡಲಾಗುತ್ತಾ ಅಂತ ಕೇಳಿದಾಗಲೂ ಅವರು ಗೊತ್ತಿಲ್ಲ, ಅದನ್ನು ಪಕ್ಷದ ಅಧ್ಯಕ್ಷರು ನಿರ್ಣಯಿಸುತ್ತಾರೆ, ಅದು ಅಧ್ಯಕ್ಷರ ಮಟ್ಟದಲ್ಲಿ ನಡೆಯುವ ಚರ್ಚೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ