AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಋತ್ಯ ರೈಲ್ವೆಗೆ ಭರ್ಜರಿ ಆದಾಯ: ಟಿಕೆಟ್ ರಹಿತ ಪ್ರಯಾಣಿಕರಿಂದ 46.31 ಕೋಟಿ ರೂ. ದಂಡ ವಸೂಲಿ

ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುವ ಪ್ರಕರಣಗಳು ನಡೆಯುತ್ತಿವೆ. ಕಳೆದ ಎಂಟು ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ್ದು, ಇವರಿಂದ ನೈಋತ್ಯ ರೈಲ್ವೆ ಒಟ್ಟು 46.31 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆ. ರೈಲ್ವೆ ಕಾಯ್ದೆ 1989 ಸೆಕ್ಷನ್ 138ರ ಪ್ರಕಾರ ದಂಡ ವಿಧಿಸಲಾಗಿದೆ.

ನೈಋತ್ಯ ರೈಲ್ವೆಗೆ ಭರ್ಜರಿ ಆದಾಯ: ಟಿಕೆಟ್ ರಹಿತ ಪ್ರಯಾಣಿಕರಿಂದ 46.31 ಕೋಟಿ ರೂ. ದಂಡ ವಸೂಲಿ
ನೈರುತ್ಯ ರೈಲ್ವೆಗೆ ಭರ್ಜರಿ ಆದಾಯ: ಟಿಕೆಟ್ ರಹಿತ ಪ್ರಯಾಣಿಕರಿಂದ 46.31 ಕೋಟಿ ರೂ. ದಂಡ ವಸೂಲಿ (ಸಾಂಕೇತಿಕ ಚಿತ್ರ)
Kiran Surya
| Updated By: Rakesh Nayak Manchi|

Updated on:Jan 18, 2024 | 1:27 PM

Share

ಬೆಂಗಳೂರು, ಜ.18: ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ (South Western Railway) ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಆರು ಲಕ್ಷಕ್ಕೂ ಅಧಿಕ ಮಂದಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ್ದು, ಇವರಿಂದ ಒಟ್ಟು 46.31 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಏಪ್ರಿಲ್​ನಿಂದ ಡಿಸೆಂಬರ್​ ತಿಂಗಳ ಕೊನೆಯ ವರೆಗೆ 6,27,014 ಜನರು ಟಿಕೆಟ್ ರಹಿತವಾಗಿ ಪ್ರಯಾಣಿಸಿದ್ದಾರೆ. ಇವರ ಬಳಿಯಿಂದ ರೈಲ್ವೆ ಸಿಬ್ಬಂದಿ 46.31 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ದಂಡ ಸಂಗ್ರಹಣೆಯಲ್ಲಿ ಶೇಕಡಾ 9.95 ರಷ್ಟು ಏರಿಕೆಯಾಗಿದೆ. ಡಿಸೆಂಬರ್ ತಿಂಗಳಿನಲ್ಲಿ 72,041 ಪ್ರಕರಣಗಳಲ್ಲಿ ಒಟ್ಟು 5.13 ಕೋಟಿ ದಂಡ ಸಂಗ್ರಹಿಸಲಾಗಿದೆ.

ಹುಬ್ಬಳ್ಳಿ ವಿಭಾಗ

  • ಪ್ರಕರಣಗಳು: 96790
  • ದಂಡದ ಮೊತ್ತ: 6.36 ಕೋಟಿ ರೂಪಾಯಿ

ಬೆಂಗಳೂರು ವಿಭಾಗ

  • ಪ್ರಕರಣಗಳು: 3,68,205
  • ದಂಡದ ಮೊತ್ತ: 28.26 ಕೋಟಿ ರೂಪಾಯಿ

ಇದನ್ನೂ ಓದಿ: Vande Bharat Express: ರೈಲಿನಲ್ಲಿ ಲಗೇಜ್ ಇಡುವ ವಿಚಾರದಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಜಗಳ;ವಿಡಿಯೋ ವೈರಲ್​​​

ಮೈಸೂರು ವಿಭಾಗ

  • ಪ್ರಕರಣಗಳು: 100538
  • ದಂಡದ ಮೊತ್ತ: 5.91 ಕೋಟಿ ರೂಪಾಯಿ

ಫ್ಲೈಯಿಂಗ್ ಸ್ಕ್ವಾಡ್

  • ಪ್ರಕರಣಗಳು; 61481
  • ದಂಡದ ಮೊತ್ತ; 5.77 ಕೋಟಿ ರೂಪಾಯಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Thu, 18 January 24