ವಂದೇ ಭಾರತ್ ರೈಲಿನಲ್ಲಿ ಹಳಸಿದ ಆಹಾರ ವಿತರಣೆ: ಆಕ್ರೋಶಗೊಂಡ ಪ್ರಯಾಣಿಕರು

Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಾಳಾದ, ಹಳಸಿದ ಊಟವನ್ನು ನೀಡಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ನವದೆಹಲಿಯಿಂದ ವಾರಣಾಸಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್​ನಲ್ಲಿ ಪ್ರಯಾಣ ಬೆಳೆಸಿದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿತ್ತು.

ವಂದೇ ಭಾರತ್ ರೈಲಿನಲ್ಲಿ ಹಳಸಿದ ಆಹಾರ ವಿತರಣೆ: ಆಕ್ರೋಶಗೊಂಡ ಪ್ರಯಾಣಿಕರು
ಆಹಾರ
Follow us
ಗಂಗಾಧರ​ ಬ. ಸಾಬೋಜಿ
|

Updated on: Jan 13, 2024 | 10:14 PM

ಆರಾಮದಾಯಕ ಮತ್ತು ತ್ವರಿತ ಪ್ರಯಾಣಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ. ಆದರೆ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಇಲ್ಲಿ ಸಿಗುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಾಳಾದ, ಹಳಸಿದ ಊಟವನ್ನು ನೀಡಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ನವದೆಹಲಿಯಿಂದ ವಾರಣಾಸಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್​ನಲ್ಲಿ ಪ್ರಯಾಣ ಬೆಳೆಸಿದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿತ್ತು.

ಆಕಾಶ್​ ಕೇಶಾರಿ ಎಂಬ ಪ್ರಯಾಣಿಕರೊಬ್ಬರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನೀಡಲಾದ ಕಳಪೆ ಆಹಾರದ ಬಗ್ಗೆ ದೂರಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ನಾನು ಎನ್​ಡಿಎಲ್​ಎಸ್​ ನಿಂದ ಬಿಎಸ್​ಬಿಗೆ 22416 ರೈಲಿನಲ್ಲಿ ಪ್ರಯಾಣ ನಡೆಸಿದ್ದೆ. ಈ ವೇಳೆ ನೀಡಲಾದ ಆಹಾರವು ವಾಸನೆ ಮತ್ತು ಅತ್ಯಂತ ಕಳಪೆ ಗುಣಮಟ್ಟವಾಗಿದೆ. ದಯವಿಟ್ಟು ನನ್ನ ಎಲ್ಲಾ ಹಣವನ್ನು ಮರುಪಾವತಿ ಮಾಡಿ. ಈ ಮಾರಾಟಗಾರರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಬ್ರಾಂಡ್ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಯಾಣಿಕ ಆಕಾಶ್​ ಕೇಶಾರಿ ಟ್ವೀಟ್​​ 

ವಿಡಿಯೋ ಕೂಡ ಹಂಚಿಕೊಂಡಿರುವ ಆಕಾಶ್​ ಕೇಶಾರಿ, ಪ್ರಯಾಣಿಕರು ಆಹಾರವನ್ನು ತೆಗೆದುಕೊಂಡು ಹೋಗುವಂತೆ ರೈಲ್ವೆ ಸಿಬ್ಬಂದಿಗೆ ಹೇಳುವುದನ್ನು ಕಾಣಬಹುದಾಗಿದೆ. ಪಲ್ಯ ವಾಸನೆ ಬರುತ್ತಿದೆ ಮತ್ತು ದಾಲ್ ಹಾಳಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳುವುದನ್ನು ಕೇಳಬಹುದಾಗಿದೆ.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಬೆಂಗಳೂರು, ಹೈದರಾಬಾದ್ ವಂದೇ ಭಾರತ್ ರೈಲು ಸಂಚಾರ ಆರಂಭ; ಎಲ್ಲೆಲ್ಲಿ ನಿಲುಗಡೆ? ಇಲ್ಲಿದೆ ವಿವರ

ಈ ಪೋಸ್ಟ್​ನ್ನು ಜನವರಿ 7 ರಂದು ಹಂಚಿಕೊಳ್ಳಲಾಗಿದ್ದು, ಇವರೆಗೂ 1,000 ಕ್ಕೂ ಹೆಚ್ಚು ಜನರು ನೋಡಿದ್ದು, ವಿವಿಧ ಕಾಮೆಂಟ್‌ಗಳು ಸಹ ಬಂದಿವೆ. ಈ ಆಹಾರ ಮಾರಾಟಗಾರರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಕೆಲಸದಿಂದ ತೆಗೆದುಹಾಕಬೇಕು. ಈ ಕೆಟ್ಟ ಮತ್ತು ನಿರ್ಲಜ್ಜ ಮಾರಾಟಗಾರರು ನಿಜವಾಗಿಯೂ ನಮ್ಮ ಅತ್ಯಂತ ಪ್ರೀತಿಯ ವಂದೇ ಭಾರತ್ ಬ್ರ್ಯಾಂಡ್ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಅವರನ್ನು ಕೆಲಸದಿಂದ ತೆಗೆದುಹಾಕ ಎಂದು ಕಾಮೆಂಟ್​ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಇಂದು ಪ್ರಧಾನಿ ಮೋದಿಯಿಂದ ಚಾಲನೆ

ಮತ್ತೊಬ್ಬರು ರಾಜಧಾನಿಯಲ್ಲಿಯೂ ಅದೇ ಸ್ಥಿತಿಯಾಗಿದೆ. ಅದಕ್ಕಾಗಿ ನೀವು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದರೆ ಮತ್ತು ಯಾವುದೇ ಮೇಲ್ ಎಕ್ಸ್‌ಪ್ರೆಸ್ ರೈಲು ಅದರ ಮೂಲಕ ಹಾದು ಹೋದರೆ, ಅದು ಪ್ಲಾಟ್‌ಫಾರ್ಮ್‌ನಲ್ಲಿ ಬಿಡುವ ದುರ್ವಾಸನೆ ಅಸಹನೀಯವಾಗಿರುತ್ತದೆ. ರೈಲುಗಳು ಕೊಳಕಾಗಿದ್ದು, ಶುಚಿಗೊಳಿಸಲಾಗುವುದಿಲ್ಲ ಮತ್ತು ನಾವು ಸ್ವಚ್ಛತೆಯ ಕುರಿತು ಉಪನ್ಯಾಸಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.