ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಗೀತಾ ಪ್ರೆಸ್ನ ರಾಮಚರಿತ ಮಾನಸ, ರಾಮನ ಕೃತಿಗಳಿಗೆ ಭರ್ಜರಿ ಬೇಡಿಕೆ
ಗೋರಖ್ಪುರದ ಗೀತಾ ಪ್ರೆಸ್ನ ‘ರಾಮಾಚರಿತ ಮಾನಸ’ಕ್ಕೆ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಬೇಡಿಕೆ ವ್ಯಕ್ತವಾಗಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಸುಂದರಕಾಂಡ’ ಮತ್ತು ‘ಹನುಮಾನ್ ಚಾಲೀಸ’ಕ್ಕೂ ಬಹಳಷ್ಟು ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಸಂದೇಶಗಳಲ್ಲಿ ಉಲ್ಲೇಖವಾಗಿದೆ.
ನವದೆಹಲಿ, ಜನವರಿ 13: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಪ್ರಾಣ ಪ್ರತಿಷ್ಠೆಗೆ ದಿನಗಳಲ್ಲಿ ಆರಂಭವಾಗಿದೆ. ಈ ಮಧ್ಯೆ ದೇಶದ ಮೂಲೆ ಮೂಲೆಯಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ವಿವಿಧ ವಿಚಾರಗಳು, ಐತಿಹ್ಯಗಳು ಬೆಳಕಿಗೆ ಬರುತ್ತಿವೆ. ಎಲ್ಲೆಡೆ ಭಗವಾನ್ ರಾಮನಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೀಗ ರಾಮ ಮಂದಿರ ಉದ್ಘಾಟನೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಮಾಚರಿತ ಮಾನಸದ ಪುಸ್ತಕ ಪ್ರತಿಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಗೋರಖ್ಪುರದ ಗೀತಾ ಪ್ರೆಸ್ನ ‘ರಾಮಾಚರಿತ ಮಾನಸ’ಕ್ಕೆ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಬೇಡಿಕೆ ವ್ಯಕ್ತವಾಗಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಭಗವಾನ್ ರಾಮನಿಗೆ ಸಂಬಂಧಿಸಿದ ಕೃತಿಗಳಿಗೆ ಬೇಡಿಕೆ ಬಹಳ ಹೆಚ್ಚಾಗಿದ್ದು ಪೂರೈಸುವುದು ಗೀತಾ ಪ್ರೆಸ್ಗೆ ಕಷ್ಟಕರವಾಗಿ ಪರಿಣಮಿಸಿದೆ.
‘ಸುಂದರಕಾಂಡ’ ಮತ್ತು ‘ಹನುಮಾನ್ ಚಾಲೀಸ’ಕ್ಕೂ ಬಹಳಷ್ಟು ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಸಂದೇಶಗಳಲ್ಲಿ ಉಲ್ಲೇಖವಾಗಿದೆ.
BIG NEWS ⚡⚡ For the first time in 50 years, Gita Press faces shortage of Ramcharitmanas copies due to MASSIVE rise in demand ahead of Ram Mandir event in Ayodhya.
The demand for Ram-related scriptures has gone so high that Gita Press has now run out of copies and finding it… pic.twitter.com/mlBDKGhoAW
— Times Algebra (@TimesAlgebraIND) January 12, 2024
ಮತ್ತೊಂಡೆ, ದೇಶದ ವಿವಿಧ ಕಡೆಗಳಲ್ಲಿ ಭಗವಾನ್ ಶ್ರೀ ರಾಮನ ಚಿತ್ರ ಹಾಗೂ ಸಂದೇಶಗಳುಳ್ಳ ಕಟೌಟ್ಗಳು, ಬ್ಯಾನರ್ಗಳು ರಾರಾಜಿಸುತ್ತಿವೆ. ಗುಜರಾತ್ ರಾಜ್ಯದ ಸೂರತ್ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ 35 ಮೀಟರ್ ಉದ್ದ ಹಾಗೂ 6.5 ಮೀಟರ್ ಅಗಲದ ಬೃಹದಾಕಾರದ ಬ್ಯಾನರ್ ಅಳವಡಿಸಿರುವುದು ಗಮನ ಸೆಳೆಯುತ್ತಿದೆ.
Gujarat : A 35-metre long and 6.5-metre wide banner, depicting Lord Ram, hung on an apartment building in Surat ahead of pranpratishtha ceremony of Ram Temple in Ayodhya. 🚩pic.twitter.com/BxZtrwHV5B
— The Random Guy (@RandomTheGuy_) January 13, 2024
ಮತ್ತಷ್ಟು ಓದಿ: ಒಡಿಶಾದ ಜಗನ್ನಾಥ ದೇವಾಲಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹಾಗೂ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟ್ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ನೂರಾರು ಗಣ್ಯರಿಗೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ