ಬಾಗಲಕೋಟೆಯಲ್ಲಿ ಪಂಚಮುಖಿ ಆಂಜನೇಯ ಮೂರ್ತಿ ಜ.22 ಪ್ರತಿಷ್ಠಾಪನೆ: ಸಚಿವ ತಿಮ್ಮಾಪುರರಿಂದ ಉದ್ಘಾಟನೆ

ನಾಲ್ಕುವರೆ ಅಡಿ ಎತ್ತರದ ಪಂಚಮುಖಿ ಆಂಜನೇಯನನ್ನು ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಗ್ರಾಮದ ಶಿಲ್ಪಿಗಳು ಕೆತ್ತನೆ ಮಾಡಿದ್ದಾರೆ. ದೇಗುಲ ನಿರ್ಮಾಣ ‌ಹಂತದಲ್ಲಿ ಅನೇಕ ಕಾನೂನು ಅಡಚಣೆಗಳು ಎದುರಾಗಿದ್ವು. ಆದರೆ ಜನವರಿ 22ರಂದು ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಉದ್ಘಾಟನೆ ಮಾಡಲಿದ್ದಾರೆ.

ಬಾಗಲಕೋಟೆಯಲ್ಲಿ ಪಂಚಮುಖಿ ಆಂಜನೇಯ ಮೂರ್ತಿ ಜ.22 ಪ್ರತಿಷ್ಠಾಪನೆ: ಸಚಿವ ತಿಮ್ಮಾಪುರರಿಂದ ಉದ್ಘಾಟನೆ
ಬಾಗಲಕೋಟೆಯಲ್ಲಿ ಆಂಜನೇಯನ ಪ್ರತಿಷ್ಠಾಪನೆ: ತಿಮ್ಮಾಪುರರಿಂದ ಉದ್ಘಾಟನೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on: Jan 18, 2024 | 1:41 PM

ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಅದೆಷ್ಟೊ ಕರಸೇವಕರು ಪ್ರಾಣ ತ್ಯಜಿಸಿದ್ದಾರೆ. ತಮ್ಮ ಇಡೀ ಜೀವನವನ್ನೇ ರಾಮಮಂದಿರ ಹೋರಾಟದಲ್ಲಿ ಕಳೆದವರಿದ್ದಾರೆ. ಈಗ ಎಲ್ಲ ಕರಸೇವಕರ ಕನಸು ನನಸಾಗುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನನಸಾಗುವ ಕಾಲಕ್ಕೆ ಅದೊಂದು ನಗರದಲ್ಲಿ ಕರಸೇವಕರು ಹಾಗೂ ರಾಮಭಕ್ತರು ರಾಮಬಂಟನ ದೇಗುಲ ಕಟ್ಟಿಸಿದ್ದಾರೆ. ರಾಮನ ಜೊತೆ ಹನುಮನ ಜಪ ಕೂಡ ನಡೆದಿದ್ದು ಭರದ ಸಿದ್ದತೆ ನಡೆದಿದೆ. ಒಂದು ಕಡೆ ಹಳೆಯ ದೇವಸ್ಥಾನದಲ್ಲಿ ಹನುಮನಿಗೆ ಪೂಜೆ ಪುನಸ್ಕಾರ. ಇನ್ನೊಂದು ಕಡೆ ನೋಡಿದರೇನೆ ಭಕ್ತಿ ಉಕ್ಕಿ ಹರಿಯುವಂತೆ ಸುಂದರವಾಗಿ ತಲೆಯೆತ್ತಿರುವ ಹನುಮನ ನೂತನ ಮಂದಿರ. ಮಂದಿರದಲ್ಲಿ ಅಂತಿಮ ಹಂತದ ಬಣ್ಣ ಬಳಿಯುತ್ತಿರುವ ಕಾರ್ಮಿಕರು. ಮುಂದೆ ಕಾರ್ಯಕ್ರಮದ ಸಿದ್ದತಾ ಕಾರ್ಯ. ಅಂದ‌ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ನಗರದಲ್ಲಿ.

ಇಲ್ಲಿ ಈ ದೇವಸ್ಥಾನಕ್ಕೂ ಅಯೋಧ್ಯೆ ರಾಮಮಂದಿರಕ್ಕೂ ಸಂಬಂಧವಿದೆ. ಅಯೋಧ್ಯೆ ರಾಮಮಂದಿರ ಹೋರಾಟದ ಕರಸೇವಕರು ಹಾಗೂ ಬಾಗಲಕೋಟೆ ನಗರದ ರಾಮ ಭಕ್ತರು ಇದನ್ನು ಕಟ್ಟಿಸಿದ್ದಾರೆ. ಅಂದು ಅಯೋಧ್ಯೆಯಲ್ಲಿ ಕರಸೇವೆಗೆ ಹೋದ ಬಾಗಲಕೋಟೆ ಜಿಲ್ಲೆಯ ೧೦ ಜನರು ಬಾಬ್ರಿ ಮಸೀದಿ ಧ್ವಂಸ ಆಗೋದನ್ನು‌ ಕಣ್ಣಾರೆ ಕಂಡಿದ್ದರು.

ಲಕ್ಷಾಂತರ ಸಂಖ್ಯೆಯಲ್ಲಿದ್ದ ಕರಸೇವಕರ ಆಕ್ರೋಶದ ಕಟ್ಟೆ ಒಡೆದು ಬಾಬ್ರಿ ಮಸೀದಿ ಕೂಡ ಒಡೆದಿತ್ತು. ಇದೀಗ ನಮ್ಮ ಹೋರಾಟ ಸಾರ್ಥಕವಾಗುತ್ತಿದೆ. ಇದರಿಂದ ಅಯೋಧ್ಯೆಯಲ್ಲಿ ರಾಮ – ಬಾಗಲಕೋಟೆಯಲ್ಲಿ ಹನುಮ ಎಂದು ಭಕ್ತಿ ಉಕ್ಕುತ್ತಿದೆ. ರಾಮಮಂದಿರಕ್ಕೆ ಭೂಮಿ ಪೂಜೆ ಮಾಡಿದಾಗಲೇ ಈ ದೇವಸ್ಥಾನಕ್ಕೂ ಭೂಮಿ ಪೂಜೆ ಮಾಡಲಾಗಿತ್ತು. ಈಗ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ದಿನವೇ ಆಂಜನೇಯದ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ ಕರಸೇವಕರು. ಇಡೀ ಬಾಗಲಕೋಟೆ ರಾಮಭಕ್ತರಲ್ಲಿ ಅಂದು ರಾಮಮಂದಿರ ನಗರದಲ್ಲಿ ಹನುಮಮಂದಿರ ಎರಡೂ ಸಂಭ್ರಮ ಇರಲಿದೆ.

ಬಾಗಲಕೋಟೆಯ ‌ಕೆಂಪು ರಸ್ತೆಗೆ ಹೊಂದಿಕೊಂಡು ಈ ದೇವಸ್ಥಾನ ಕಟ್ಟಿಸಲಾಗಿದೆ. ಅಯೋಧ್ಯೆ ರಾಮಮಂದಿರ ಮಾದರಿಯಲ್ಲೇ ಪಂಚಮುಖಿ ಹನುಮಾನ ದೇಗುಲ‌ ಸಿದ್ದವಾಗಿದೆ. ಈ ದೇಗುಲ‌‌ ಕಟ್ಟಿಸೋದಕ್ಕೆ ರಾಮಮಂದಿರವೇ ಪ್ರೇರಣೆಯಾಗಿದೆ. ಐವತ್ತು ವರ್ಷದ ಹಿಂದೆ ಮುಚಖಂಡಿ ಕ್ರಾಸ್‌ನ ಮರದ ಅಡಿಯಲ್ಲಿ ಬಾಲಹನುಮನ ಮೂರ್ತಿ ಕಂಡುಬಂದಿತ್ತು.

ಇದನ್ನೂಓದಿ: ಮಸೀದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ – ಭಟ್ಕಳದಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆ ಇನ್ನಷ್ಟು ಉದ್ಭವಿಸುವ ಸಾಧ್ಯತೆ

ಆಗ ಅಲ್ಲೊಂದು ಚಿಕ್ಕ‌ದೇವಸ್ಥಾನ ಕಟ್ಟಿಸಲಾಗಿತ್ತು. ಬಾಗಲಕೋಟೆ ಸ್ಥಳಾಂತರ ಹಿನ್ನೆಲೆ ಕೆಂಪು ರಸ್ತೆ ಬಳಿ ತಗಡಿನ ಶೆಡ್ ನಿಂದ ದೇಗುಲ ಕಟ್ಟಿಸಲಾಗಿದೆ. ಈಗ ಪಕ್ಕದಲ್ಲೇ ರಾಮಮಂದಿರ‌ ಮಾದರಿಯಲ್ಲಿ ಐದು‌ ಗೋಪುರದ ‌ಆಂಜನೇಯ ದೇಗುಲ ಸಿದ್ದವಾಗಿದೆ. ಅಂತಿಮ ‌ಹಂತದ ಕಾರ್ಯ ನಡೆಯುತ್ತಿದೆ. ಐದು ಮುಖ ಹೊಂದಿದ‌ ಪಂಚಮುಖಿ ಆಂಜನೇಯ ಮಂತ್ರಾಲಯ ಬಿಟ್ಟರೆ ಇಲ್ಲೆ ಮೊದಲು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ನಾಲ್ಕುವರೆ ಅಡಿ ಎತ್ತರದ ಪಂಚಮುಖಿ ಆಂಜನೇಯನನ್ನು ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಗ್ರಾಮದ ಶಿಲ್ಪಿಗಳು ಕೆತ್ತನೆ ಮಾಡಿದ್ದಾರೆ. ದೇಗುಲ ನಿರ್ಮಾಣ ‌ಹಂತದಲ್ಲಿ ಅನೇಕ ಕಾನೂನು ಅಡಚಣೆಗಳು ಎದುರಾಗಿದ್ವು. ಜಾಗದ ವಿಚಾರದಲ್ಲಿ ಸ್ವತಃ ಬಿಜೆಪಿ ಶಾಸಕರಾಗಿದ್ದ ವೀರಣ್ಣ ಚರಂತಿಮಠ ಹಾಗೂ ಹಿಂದು ಕಾರ್ಯಕರ್ತರ ‌ಮಧ್ಯೆ ವಾಗ್ವಾದ ನಡೆದು, ವಿವಾದವಾಗಿತ್ತು.

ನಂತರ ಎಲ್ಲ‌ ಕಾನೂನು ತೊಡಕು ನಿವಾರಣೆಯಾಗಿ ದೇವಸ್ಥಾನ ನಿರ್ಮಾಣ ಕಾರ್ಯ ಸರಾಗವಾಗಿ ಸಾಗಿದೆ.ನಗರದ ಭಕ್ತರು ತನುಮನ ಧನ ನೀಡಿ ಇಂದು ಇಂತಹ ಸುಂದರ ದೇಗುಲ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ನಾಳೆ ಹನುಮನ ಮೂರ್ತಿ ಶೋಭಾಯಾತ್ರೆ. ನಂತರ ೨೨ ರವರೆಗೆ. ಒಂದೊಂದು ದಿನ ಜಲವಾಸ, ದವಸದಾನ್ಯ ವಾಸ, ವಸ್ತ್ರವಾಸ, ಪುಷ್ಪವಾಸ ನಡೆದು ಜನವರಿ ೨೨ರಂದು ಪಂಚಮುಖಿ ಆಂಜನೇಯನ ಪ್ರಾಣಪ್ರತಿಷ್ಟಾಪನೆ ನಡೆಯಲಿದೆ.

ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಉದ್ಘಾಟನೆ ಮಾಡಲಿದ್ದಾರೆ. ಅಂದು ಸಮಸ್ತ ಹಿಂದು ಕಾರ್ಯಕರ್ತರು ಬಾಗಲಕೋಟೆ ಜನತೆ ಹಾಜರಿರರಲಿದ್ದಾರೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಇದ್ದು, ಜನವರಿ ೨೨ ರವರೆಗೆ ನಿರಂತರ ಧಾರ್ಮಿಕ ಕಾರ್ಯಗಳ‌ ಮೂಲಕ ರಾಮಬಂಟ ಹನುಮನ ಪ್ರಾಣಪ್ರತಿಷ್ಠಾಪನೆ ಸಂಭ್ರಮ ‌ಮನೆ ಮಾಡಿದೆ ಎಂದು ರವಿ ಕುಮಟಗಿ, ಹನುಮ ದೇವಸ್ಥಾನ ಸ್ವಾಗತ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ: 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣದವರೆಗೆ; ಟೈಮ್​ಲೈನ್

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ