ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಶೃಂಗೇರಿ ಮಠದ ಪುರೋಹಿತ ಶಿವಕುಮಾರ ಶರ್ಮಾರಿಗೆ ಆಹ್ವಾನ

ಶೃಂಗೇರಿ ಶಾರದಾ ಮಠದ ಪುರೋಹಿತ ಡಾ. ಶಿವಕುಮಾರ ಶರ್ಮಾ ಅವರಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಆಹ್ವಾನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಶಿವಕುಮಾರ ಶರ್ಮಾ ಅವರು ಇದೇ 19 ರಂದು ಅಯೋಧ್ಯೆಗೆ ತೆರಳಲಿದ್ದಾರೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಶೃಂಗೇರಿ ಮಠದ ಪುರೋಹಿತ ಶಿವಕುಮಾರ ಶರ್ಮಾರಿಗೆ ಆಹ್ವಾನ
ಶಿವಕುಮಾರ್​ ಶರ್ಮಾ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on: Jan 15, 2024 | 10:15 AM

ಚಿಕ್ಕಮಗಳೂರು, ಜನವರಿ 14: ಅಯೋಧ್ಯೆ (Ayodhya) ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ (ಬಾಲರಾಮ)ನ ಪ್ರಾಣ ಪ್ರತಿಷ್ಠಾಪನೆಗೆ ಶಂಕರಾಚಾರ್ಯರ (Shankaracharya) ನಾಲ್ಕು ಪೀಠದ  ಸ್ವಾಮೀಜಿಗಳು ಹೋಗುವುದಿಲ್ಲ ಎಂಬ ವಿವಾದ ಎದ್ದಿದೆ. ಇದಕ್ಕೆ ಶೃಂಗೇರಿ ಶಾರದಾ ಮಠ ಮತ್ತು ಹರಿಹರಪುರ ಮಠದ ಸ್ವಾಮೀಜಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಬೆನ್ನಲ್ಲೇ ಇದೀಗ ಶೃಂಗೇರಿ ಶಾರದಾ ಮಠದ ಪುರೋಹಿತ ಡಾ. ಶಿವಕುಮಾರ ಶರ್ಮಾ ಅವರಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಆಹ್ವಾನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಶಿವಕುಮಾರ ಶರ್ಮಾ ಅವರು ಇದೇ 19 ರಂದು ಅಯೋಧ್ಯೆಗೆ ತೆರಳಲಿದ್ದಾರೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಏನಿದು ವಿವಾದ

ಉತ್ತರಾಖಂಡ ರಾಜ್ಯದ ಬದರಿನಾಥದ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹಾಗೂ ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಗಳು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಹೋಗುವುದಿಲ್ಲ ಎಂದು ಹೇಳಿದ್ದರು. ತಾವು ಹೋಗದಿರುವುದಕ್ಕೆ ಕಾರಣವನ್ನೂ ನೀಡಿದ್ದರು. ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಗರ್ಭ ಗೃಹದಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾದದ್ದು ಎಂದು ಎರಡೂ ಮಠಗಳು ಹೇಳಿದ್ದವು. ಅಲ್ಲದೇ ತಾವು ಈ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಶ್ರೀಗಳು ಹೇಳಿದ್ದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ವಿರೋಧ ಆರೋಪಕ್ಕೆ ಹರಿಹರಪುರ ಶಂಕರಾಚಾರ್ಯರ ಪೀಠ ಸ್ವಾಮೀಜಿ ಕೊಟ್ಟರು ಸ್ಪಷ್ಟನೆ

ಆದರೆ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠಂ, ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ ಮತ್ತು ಶೃಂಗೇರಿ ಮಠದ ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಸ್ಪಷ್ಟನೆ ನೀಡಿದ್ದರು.

ನೂತನ ಸಂಸತ್​ ಭವನ ಭೂಮಿಪೂಜೆ ನೆರವೇರಿಸಿದ್ದ ಶಿವಕುಮಾರ್ ಶರ್ಮಾ

ಶಿವಕುಮಾರ್ ಶರ್ಮಾ ಅವರು 2020ರಲ್ಲಿ ಸಂಸತ್ ಭವನದ ಭೂಮಿಪೂಜೆ ನೆರವೇರಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನೂತನ ಸಂಸತ್ ಭವನದ ಶಂಕುಸ್ಥಾಪನಾ ಸಮಾರಂಭದಲ್ಲಿ ಶೃಂಗೇರಿ ಶಾರದಾ ಮಠದ ಆರು ಮಂದಿ ಅರ್ಚಕರು ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಟಿ.ವಿ.ಶಿವಕುಮಾರ ಶರ್ಮ, ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ, ಕೆ.ಎಸ್.ಗಣೇಶ್ ಸೋಮಯಾಜಿ, ನಾಗರಾಜ ಅಡಿಗ ಅವರು ಶೃಂಗೇರಿಯಿಂದ ದೇಲಿಗೆ ಹೋದರೆ, ದೆಹಲಿಯ ಮಠದ ರಾಘವೇಂದ್ರ ಭಟ್ ಮತ್ತು ಋಷ್ಯಶೃಂಗ ಅವರು ಸೇರಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ