ಬೆಂಗಳೂರಿನ ಶೇ 95 ರಷ್ಟು ಜನರಿಗೆ ತಮ್ಮ ಸ್ವಂತ ವಾಹನಕ್ಕಿಂತ ನಮ್ಮ ಮೆಟ್ರೋ ಪ್ರಯಾಣವೇ ಅಚ್ಚುಮೆಚ್ಚು

|

Updated on: Sep 05, 2023 | 10:07 AM

ಖಾಸಗಿ ಸುದ್ದಿ ಸಂಸ್ಥೆಗಳಾದ ರಾಜಕೀಯ ಕ್ರಿಯಾ ಸಮಿತಿ (ಬಿ-ಪ್ಯಾಕ್) ಹಾಗೂ ವರ್ಲ್ಡ್ ರಿಸೋರ್ಸ್ ಇನ್ ಸ್ಟಿಟ್ಯೂಟ್ (ಡಬ್ಲ್ಯೂಆರ್‌ಐ) ಇಂಡಿಯಾ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಶೇ 95 ರಷ್ಟು ಜನ ಮೆಟ್ರೋದಲ್ಲಿ ಪ್ರಯಾಣಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಶೇ 95 ರಷ್ಟು ಜನರಿಗೆ ತಮ್ಮ ಸ್ವಂತ ವಾಹನಕ್ಕಿಂತ ನಮ್ಮ ಮೆಟ್ರೋ ಪ್ರಯಾಣವೇ ಅಚ್ಚುಮೆಚ್ಚು
ನಮ್ಮ ಮೆಟ್ರೋ
Follow us on

ಬೆಂಗಳೂರು: ನಗರದ ಶೇಕಡ 95ರಷ್ಟು ಜನ ಸ್ವಂತ (ಖಾಸಗಿ) ವಾಹನದಲ್ಲಿ ಸಂಚರಿಸುವುದಕ್ಕಿಂತ ಹೆಚ್ಚಾಗಿ ಮೆಟ್ರೋ (Metro) ರೈಲಿನಲ್ಲಿ ಪ್ರಯಾಣಿಸಲು ಒಲವು ಹೊಂದಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆಗಳಾದ ರಾಜಕೀಯ ಕ್ರಿಯಾ ಸಮಿತಿ (ಬಿ-ಪ್ಯಾಕ್) ಹಾಗೂ ವರ್ಲ್ಡ್ ರಿಸೋರ್ಸ್ ಇನ್ ಸ್ಟಿಟ್ಯೂಟ್ (ಡಬ್ಲ್ಯೂಆರ್‌ಐ) ಇಂಡಿಯಾ ಜಂಟಿಯಾಗಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ ಪ್ಯಾಕ್ ಸಿಇಒ ರೇವತಿ ಅಶೋಕ್ ಅವರು ನಗರದಾದ್ಯಂತ, ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ 3,855 ಜನರನ್ನು ಸಮೀಕ್ಷೆ ನಡೆಸಲಾಯಿತು. ಇದರಲ್ಲಿ 1172 ಪ್ರಯಾಣಿಕರು ಪ್ರತಿದಿನ, ಕಾರು, 1046 ಜನ ದ್ವಿಚಕ್ರ ವಾಹನ ಬಳಸುತ್ತಾರೆ. ಇದರಲ್ಲಿ ಶೇ 95 ರಷ್ಟು ಜನ ಮೆಟ್ರೋದಲ್ಲಿ ಪ್ರಯಾಣಿಸಲು ಇಚ್ಚೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್, ಸೆಪ್ಟೆಂಬರ್ 6ರಿಂದ ಮೆಟ್ರೋ ಮಿತ್ರ ಆರಂಭ; ಹೇಗೆ ಕಾರ್ಯನಿರ್ವಹಿಸುತ್ತೆ? ಇಲ್ಲಿದೆ ವಿವರ

ಡಬ್ಲ್ಯುಆರ್‌ಐ ಇಂಡಿಯಾದ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ ನಮ್ಮ ಟ್ರಾಫಿಕ್ ಸಮಸ್ಯೆಗೆ ದೀರ್ಘಾವಧಿಯ ಪರಿಹಾರವೆಂದರೆ ಸಾರ್ವಜನಿಕ ಸಾರಿಗೆ. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಿದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ. 2023 ರ ವರ್ಷವು ಬ್ರಾಂಡ್ ಬೆಂಗಳೂರಿಗೆ ಒಂದು ಮೈಲಿಗಲ್ಲಾಗಲಿದೆ. ವೈಟ್‌ಫೀಲ್ಡ್‌ ಅನ್ನು ನಗರದ ಇತರ ಭಾಗಗಳಿಗೆ ಮೆಟ್ರೋ ಸಂಪರ್ಕಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ನೇರಳೆ ಮಾರ್ಗದ ಮೆಟ್ರೋ ಹೊರವರ್ತುಲ ರಸ್ತೆಯಲ್ಲಿ ನೆಲೆಸಿರುವ ಟೆಕ್ ಪಾರ್ಕ್‌ಗಳಿಗೆ ಫೀಡರ್ ಬಸ್‌ಗಳ ಸಂಪರ್ಕವನ್ನು ಕಲ್ಪಿಸುವುದರಿಂದ ಸಾಕಷ್ಟು ಬದಲಾವಣೆ ಆಗಲಿದೆ ಎಂದರು.

ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಅಧ್ಯಕ್ಷ ವಿಕ್ರಮ ರೈ ಮಾತನಾಡಿ, ಸಮೀಕ್ಷಾ ತಂಡವು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಅಭಿಯಾನಕ್ಕೆ ಸರ್ಕಾರದ ಬೆಂಬಲವನ್ನು ಕೋರಿತು. ವಾರಕ್ಕೆ ಎರಡು ಬಾರಿಯಾದರೂ ಸ್ವಂತ ವಾಹನ ತೊರೆದು ಸಾರ್ವಜನಿಕ ಸಾರಿಗೆ ವಾಹನದಲ್ಲಿ ಸಂಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:53 am, Tue, 5 September 23