ಬೆಂಗಳೂರಿನಲ್ಲಿ ಗಂಡ-ಹೆಂಡ್ತಿ ಜಗಳ: ಗಲಾಟೆಯಲ್ಲಿ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಪತಿ, ದೂರು ದಾಖಲು

ಬೆಂಗಳೂರಿನಲ್ಲಿ ಗಂಡ ಹೆಂಡತಿ ಗಲಾಟೆಯಲ್ಲಿ ಪತಿರಾಯ ತನ್ನ ಪತ್ನಿಯ ಬೆರಳನ್ನೇ ಕಚ್ಚಿತಿಂದ ಘಟನೆ ಕೊಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಬೆಂಗಳೂರಿನಲ್ಲಿ ಗಂಡ-ಹೆಂಡ್ತಿ ಜಗಳ: ಗಲಾಟೆಯಲ್ಲಿ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಪತಿ, ದೂರು ದಾಖಲು
ಬೆಂಗಳೂರಿನಲ್ಲಿ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಪತಿ
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2023 | 8:30 AM

ಬೆಂಗಳೂರು, ಆ.3: ಗಂಡ-ಹೆಂಡತಿ(Husband-Wife) ಜಗಳದ ನಡುವೆ ಕೂಸು ಬಡವಾಯ್ತು ಅನ್ನೋ ಮಾತಿದೆ. ಆದರಿಲ್ಲಿ ಇವರಿಬ್ಬರ ಗಲಾಟೆಯಲ್ಲಿ ಪತಿರಾಯ ತನ್ನ ಪತ್ನಿಯ ಬೆರಳನ್ನೇ ಕಚ್ಚಿತಿಂದ ಘಟನೆ ಬೆಂಗಳೂರಿನ ಕೊಣನಕುಂಟೆ (Konanakunte) ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇನ್ನು ಪುಷ್ಪಾ ಎಂಬ ಮಹಿಳೆಯು ಗಂಡನ ಕಾಟ ತಾಳಲಾರದೇ ತನ್ನ ಮಗನ ಜೊತೆಗೆ ಬೇರೆ ಮನೆ ಮಾಡಿ ವಾಸವಿದ್ದರು. ಆದರೂ ಕೂಡ ಆಕೆಗೆ ಗಂಡನ ಕಾಟದಿಂದ ಮುಕ್ತಿ ಸಿಕ್ಕಿರಲಿಲ್ಲ. ಅದರಂತೆ ಇಬ್ಬರು ಜಗಳ ಮಾಡುತ್ತಿದ್ದಾರೆ. ಈ ವೇಳೆ ಏಕಾಎಕಿ ಪತಿ ವಿಜಯಕುಮಾರ್ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ನಂತರ ನಿನ್ನನ್ನೂ ಕೂಡ ಕೊಂದು ಇದೇ ರೀತಿಯಾಗಿ ತಿನ್ನುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಇನ್ನು ಪುಷ್ಪಾ ಮತ್ತು ವಿಜಯ್​ಕುಮಾರ್​ಗೆ 23 ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಕೆಲ ವರ್ಷಗಳಿಂದ ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದನಂತೆ. ಈ ಹಿನ್ನಲೆ ಗಂಡನಿಂದ ಬೇಸತ್ತು ತನ್ನ ಮಗನ ಜೊತೆ ಬೇರೆಡೆ ಮನೆ ಮಾಡಿಕೊಂಡಿದ್ದರು. ಕಳೆದ‌ ತಿಂಗಳ ಜುಲೈ 28ನೇ ತಾರೀಖು ಪತಿ ವಿಜಯಕುಮಾರ್ ಪತ್ನಿ ಇದ್ದ ಮನೆಗೆ ಹೋಗಿ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಎಡಗೈ ಬೆರಳನ್ನೇ ಕಚ್ಚಿ ಕಚ್ಚಿ ತಿಂದಿದ್ದಾನಂತೆ. ಅಲ್ಲದೇ ರೌಡಿಶೀಟರ್​ಗಳನ್ನ ಬಿಟ್ಟು ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಪತ್ನಿ ಪುಷ್ಪ ಸದ್ಯ ಪತಿಯ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಕ್ಕೆ ಸಹಪಾಠಿಗಳಿಂದ ಹಲ್ಲೆ; ದೂರು ದಾಖಲು

ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬೈಕ್ ಸವಾರ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆ ರಸ್ತೆಯ ಬಳಿ ನಿಯಂತ್ರಣ ತಪ್ಪಿ ಬೈಕ್​ ಸವಾರನೊಬ್ಬ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಸ್ಕಿಡ್ ಆಗಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಗಾಯಾಳು ಬೈಕ್​ ಸವಾರನನ್ನು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಘಟನೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us