AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madikeri News: 2 ವರ್ಷದ ಮಗು, ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಪತಿ: ಬಂಧನ

ಕುಡಿದು ಬಂದ ಪತಿರಾಯ ಪತ್ನಿ ಮತ್ತು ಎರಡು ವರ್ಷದ ಮಗುವಿನ‌ ಮೇಲೆ ಕತ್ತಿಯಿಂದ ತೀವ್ರ ಹಲ್ಲೆ‌ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದಲ್ಲಿ ನಡೆದಿದೆ. ಸದ್ಯ ಪತ್ನಿ ದೂರಿನನ್ವಯ ಪತಿಯನ್ನು ಬಂಧಿಸಲಾಗಿದೆ.

Madikeri News: 2 ವರ್ಷದ ಮಗು, ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಪತಿ: ಬಂಧನ
ಬಂಧಿತ ಪತಿ ಭರತ್​
Follow us
Gopal AS
| Updated By: ಗಂಗಾಧರ​ ಬ. ಸಾಬೋಜಿ

Updated on: Jul 06, 2023 | 8:20 PM

ಮಡಿಕೇರಿ: ಕುಡಿದು ಬಂದ ಪತಿರಾಯ ಪತ್ನಿ ಮತ್ತು ಎರಡು ವರ್ಷದ ಮಗುವಿನ‌ ಮೇಲೆ ಕತ್ತಿಯಿಂದ ತೀವ್ರ ಹಲ್ಲೆ‌ (assaulting) ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದಲ್ಲಿ ನಡೆದಿದೆ. ಕೂಲಿ ಕಾರ್ಮಿಕನಾಗಿರುವ ಭರತ್ (35) ಹಲ್ಲೆ ಮಾಡಿದ ಪತಿ. ಸದ್ಯ ಪ್ರೇಮಾ ನಾಪೋಕ್ಲು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಭರತ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಜೆ ಕಂಠಪೂರ್ತಿ ಕುಡಿದು ಮನೆಗೆ ಬಂದ ಈತ ಪತ್ನಿ‌ ಪ್ರೇಮಾ(30)ಳಿಗೆ ಅನ್ನ ಮಾಡುವಂತೆ ಹೇಳಿದ್ದಾನೆ. ಅದಕ್ಕೆ ಪ್ರೇಮ ರಾತ್ರಿ ಅನ್ನ ಮಾಡಿ ಊಟ ಮಾಡಿದರಾಯಿತು ಎಂದಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಪತಿ ಭರತ್, ಪತ್ನಿ ಜೊತೆ ಜಗಳ ಮಾಡಿದ್ದಾನೆ.

ಇದನ್ನೂ ಓದಿ: ಪರೀಕ್ಷೆಯಲ್ಲಿ ಫೇಲ್​; ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಮಾತಿಗೆ ಮಾತು ಬೆಳೆದು ಭರತ್ ಕತ್ತಿ ತೆಗೆದು ಪ್ರೇಮಾಳಿಗೆ ಬೀಸಿದ್ದಾನೆ. ಈ ಸಂದರ್ಭ ಪ್ರೇಮಾರ ಎಡಗೈಗೆ ತೀವ್ರ ಗಾಯಗಳಾಗಿವೆ. ಪ್ರೇಮಾ‌ ತನ್ನ ಎರಡು ವರ್ಷದ ಮಗುವನ್ನು ಎತ್ತಿಕೊಂಡಿದ್ದರಿಂದ ಆ ಮಗುವಿನ ಕಾಲಿಗೂ ಕತ್ತಿ ಏಟು ಬಿದ್ದಿದೆ. ಇವರ ಕಿರುಚಾಟ ಕೇಳಿ ಓಡಿ ಬಂದ ಅಕ್ಕ ಪಕ್ಕದ ಮನೆಯವರು ಜಗಳ ಬಿಡಿಸಿ ತಾಯಿ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನೆಗಳ್ಳತನ ಮಾಡುತ್ತಿದ್ದ ಐವರು ಕಳ್ಳರ ಪೈಕಿ ಮೂವರ ಬಂಧನ 

ಬಾಗಲಕೋಟೆ: ಹುನಗುಂದ ತಾಲೂಕಿನ ಅಮೀನ್‌ಗಡ ಪಟ್ಟಣ ಹಾಗೂ ವಡಗೇರಿ ಗ್ರಾಮದಲ್ಲಿ ಮನೆಗಳ್ಳತನ ಮಾಡಿದ್ದ ಐವರ ಪೈಕಿ ಮೂವರನ್ನು ಅಮೀನ್‌ಗಡ ಠಾಣೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಂಧಿತರಿಂದ 1 ಬೊಲೆರೊ, 1 ಬೈಕ್​ ಜಪ್ತಿ ಮಾಡಿದ್ದಾರೆ. ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Kalaburagi News: ನಾಲ್ವರು ಅಪ್ರಾಪ್ತ ಬಾಲಕರಿಂದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಬೀದಿ ನಾಯಿಗಳ ದಾಳಿಯಿಂದ 30ಕ್ಕೂ ಹೆಚ್ಚು ಕುರಿಗಳು ಸಾವು

ಚಿತ್ರದುರ್ಗ: ಬೀದಿ ನಾಯಿಗಳ ದಾಳಿಯಿಂದ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ. ಚಿಕ್ಕಮ್ಮನಹಳ್ಳಿ ನಿವಾಸಿ ಮಹಾಂತೇಶ್​​ ಎನ್ನುವವರಿಗೆ ಕುರಿಗಳು ಸೇರಿದ್ದವು. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮಹಾಂತೇಶ್​ ಆಗ್ರಹಿಸಿದ್ದಾರೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.