ಬೆಂಗಳೂರು: ಹೆಂಡತಿಯನ್ನು ಚುಡಾಯಿಸಿದ ಆರೋಪ, ವ್ಯಕ್ತಿ ಮೇಲೆ ಹಲ್ಲೆ

| Updated By: sandhya thejappa

Updated on: Dec 11, 2021 | 10:57 AM

ಮಧ್ಯರಾತ್ರಿ ವೇಳೆ ವಾಟ್ಸ್ ಆ್ಯಪ್ ಕಾಲ್ ಮಾಡಿ ಅಶ್ಲೀಲ ಸಂದೇಶಗಳ ಮುಖಾಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ವಾಸು ಯತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಹೆಂಡತಿಯನ್ನು ಚುಡಾಯಿಸಿದ ಆರೋಪ, ವ್ಯಕ್ತಿ ಮೇಲೆ ಹಲ್ಲೆ
ಯತೀಶ್ ಮೇಲೆ ಹಲ್ಲೆ ನಡೆಸುತ್ತಿರುವುದು
Follow us on

ಬೆಂಗಳೂರು: ಹೆಂಡತಿಯನ್ನು ಚುಡಾಯಿಸಿದ ಆರೋಪ ಕೇಳಿಬಂದಿದ್ದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ವಾಸು ಎಂಬುವವರು ಸೆಕ್ಯೂರಿಟಿ ಗಾರ್ಡ್ ಯತೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯತೀಶ್ ಮತ್ತು ವಾಸು ಇಬ್ಬರು ದೂರು ನೀಡಿದ್ದಾರೆ. ವಾಸು ಹಲ್ಲೆ ಮಾಡಿರುವುದಾಗಿ ಯತೀಶ್ ದೂರು ನೀಡಿದ್ದು, ತನ್ನ ಹೆಂಡತಿಯನ್ನು ಚುಡಾಯಿಸಿದ್ದಾಗಿ ವಾಸು ದೂರು ನೀಡಿದ್ದಾರೆ. ಈ ಪ್ರಕರಣ ಬೆಂಗಳೂರಿನ ಕೆಂಪೇಗೌಡನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಧ್ಯರಾತ್ರಿ ವೇಳೆ ವಾಟ್ಸ್ ಆ್ಯಪ್ ಕಾಲ್ ಮಾಡಿ ಅಶ್ಲೀಲ ಸಂದೇಶಗಳ ಮುಖಾಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ವಾಸು ಯತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಯತೀಶ್ ಹಲ್ಲೆ ತೀವ್ರತಿಗೆ ನಾಪತ್ತೆಯಾಗಿದ್ದರು. ವ್ಯಕ್ತಿ ಕಾಣೆಯಾದ ಪ್ರಕರಣದ ತನಿಖೆ ಕೈಗೊಂಡಾಗ ಹಲ್ಲೆ ಹಾಗೂ ಕಿರುಕುಳ ಕೇಸ್ ಬಯಲಾಗಿದೆ. ಯತೀಶ್ ಎರಡು ದಿನ ಧರ್ಮಸ್ಥಳ, ಕುಕ್ಕೆ ದೇವಸ್ಥಾನಗಳಿಗೆ ತೆರಳಿದ್ದರು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು.

ಯತೀಶ್ ಎರಡು ದಿನ ಆದರೂ ಪತ್ತೆಯಾಗದ ಹಿನ್ನೆಲೆ ಯೋಗ ಕೇಂದ್ರದವರು ಕೆಂಪೇಗೌಡ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಯತೀಶ್ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ

ಸೋಮವಾರದಿಂದ 3 ದಿನ ಸಿಎಂ ಪ್ರವಾಸ; ಕುಟುಂಬ ಸಮೇತರಾಗಿ ಕಾಶಿ, ಅಯೋಧ್ಯೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬೊಮ್ಮಾಯಿ

Viral Video: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ; ಡೇಂಜರಸ್ ವಿಡಿಯೋ ಹೇಗಿತ್ತು ನೀವೇ ನೋಡಿ