ಜಿಗಣಿಯಲ್ಲಿ ಬಂಧಿತ ಉಲ್ಫಾ ಸಂಘಟನೆ ಸದಸ್ಯನ ಮಾಹಿತಿ ಮೇರೆಗೆ ಜೀವಂತ IED ವಶಕ್ಕೆ, ತಪ್ಪಿದ ಭಾರೀ ಅನಾಹುತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 01, 2024 | 8:58 PM

ಇದೇ ಸೆ.24ರಂದು ಆನೇಕಲ್(Anekal) ತಾಲೂಕಿನ ಜಿಗಣಿಯಲ್ಲಿ ಉಲ್ಫಾ ಸಂಘಟನೆಯ ಸದಸ್ಯ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಬೋರಾನನ್ನು NIA ತಂಡ ಬಂಧಿಸಿತ್ತು. ವಿಚಾರಣೆ ವೇಳೆ ಬಾಂಬ್ ಇಟ್ಟಿರುವ ಸ್ಥಳ ತೋರಿಸಿದ್ದಾನೆ. ಆರೋಪಿ ಮಾಹಿತಿ‌ ಮೇರೆಗೆ ಅಸ್ಸಾಂನ ಲಖೀಂಪುರ‌ ಜಿಲ್ಲೆಯಲ್ಲಿ IED ವಶಕ್ಕೆ ಪಡೆದು ಅಧಿಕಾರಿಗಳು ನಿಷ್ಕ್ರಿಯಗೊಳಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಜಿಗಣಿಯಲ್ಲಿ ಬಂಧಿತ ಉಲ್ಫಾ ಸಂಘಟನೆ ಸದಸ್ಯನ ಮಾಹಿತಿ ಮೇರೆಗೆ ಜೀವಂತ IED ವಶಕ್ಕೆ, ತಪ್ಪಿದ ಭಾರೀ ಅನಾಹುತ
ಉಲ್ಫಾ ಸಂಘಟನೆಯ ಸದಸ್ಯ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಬೋರಾ
Follow us on

ಬೆಂಗಳೂರು, ಅ.01: ಜಿಗಣಿಯಲ್ಲಿ ಉಲ್ಫಾ ಸಂಘಟನೆಯ ಸದಸ್ಯನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ‌ ಮಾಹಿತಿ ಮೇರೆಗೆ ಅಸ್ಸಾಂನಲ್ಲಿ ಜೀವಂತ IED ವಶಕ್ಕೆ ಪಡೆಯಲಾಗಿದೆ. ಇದೇ ಸೆ.24ರಂದು ಆನೇಕಲ್(Anekal) ತಾಲೂಕಿನ ಜಿಗಣಿಯಲ್ಲಿ ಆರೋಪಿ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಬೋರಾನನ್ನು NIA ತಂಡ ಬಂಧಿಸಿತ್ತು. ಬಳಿಕ ಆತನನ್ನು ಅಸ್ಸಾಂಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಬಾಂಬ್ ಇಟ್ಟಿರುವ ಸ್ಥಳ ತೋರಿಸಿದ್ದಾನೆ.

ಆರೋಪಿ ಮಾಹಿತಿ‌ ಮೇರೆಗೆ ಅಸ್ಸಾಂನ ಲಖೀಂಪುರ‌ ಜಿಲ್ಲೆಯಲ್ಲಿ IED ವಶಕ್ಕೆ ಪಡೆದು ಅಧಿಕಾರಿಗಳು ನಿಷ್ಕ್ರಿಯಗೊಳಿಸಿದ್ದಾರೆ. ಇನ್ನು ಇದನ್ನು ಉಲ್ಫಾ(I) ಸಂಘಟನೆಯ ನಾಯಕರು ಮಾತಿನಂತೆ ಆ.15ರಂದು ಸ್ಫೋಟಿಸಲು ಅನೇಕ ಐಇಡಿಗಳನ್ನ ಇಟ್ಟಿದ್ದೆ ಎಂದಿದ್ದಾನೆ. ಆದರೆ, ಉಲ್ಫಾ ಸಂಘಟನೆ ಸಂಚನ್ನು ಅಸ್ಸಾಂ ಪೊಲೀಸರು ವಿಫಲಗೊಳಿಸಿದ್ದರು. ಉತ್ತರ ಲಖೀಂಪುರದಲ್ಲಿ ಕೆಲ IED ವಶಕ್ಕೆ ಪಡೆಯಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನ ಕೈಗೆತ್ತಿಕೊಂಡಿದ್ದ ಎನ್​ಐಎ, ಬೆಂಗಳೂರಿನಲ್ಲಿ ಅಡಗಿದ್ದ ಆರೋಪಿಯನ್ನು ವಶಕ್ಕೆ ಪಡೆದಿತ್ತು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ ಅಧಿಕಾರಿಗಳು

ಕುಟುಂಬ ಸಮೇತ ಬೆಂಗಳೂರಿಗೆ ಬಂದು ವಾಸವಾಗಿದ್ದ ಆರೋಪಿ

ಉಲ್ಫಾ ಸಂಘಟನೆ ಸದಸ್ಯನಾದ ಗಿರೀಶ್ ಬೋರಾ ಅಲಿಯಾಸ್ ಗೌತಮ್, ಆಗಸ್ಟ್​ನಲ್ಲಿ ಗುವಾಹಟಿಯಲ್ಲಿಯೇ ಐದು IED ಬಾಂಬ್ ಇಟ್ಟು, ಕುಟುಂಬ ಸಮೇತ ಬೆಂಗಳೂರಿಗೆ ಬಂದು ವಾಸವಾಗಿದ್ದ. ಬಳಿಕ ಶಂಕಿತ ಉಗ್ರ ಖಾಸಗಿ ಕಂಪನಿಯಲ್ಲಿ ಗೌತಮ್ ಎನ್ನುವ ಹೆಸರಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿದ್ದನು. ಈ ಬಗ್ಗೆ ಪಕ್ಕಾ ಮಾಹಿತಿ ಆಧರಿಸಿದ ಅಸ್ಸಾಂ ಎನ್ಐಎ ಟೀಂ, ಶಂಕಿತ ಉಗ್ರನನ್ನು ಸೆ.24 ರಂದು ಬಂಧಿಸಿತ್ತು. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ಆತನನ್ನು ಎನ್ಐಎ ತಂಡ ಅಸ್ಸಾಂಗೆ ಕರೆದೊಯ್ದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ