ಜುಲೈ 23 ರಂದು ಬೆಂಗಳೂರಿನಲ್ಲಿ ಕುಂದಾಪುರ ಕನ್ನಡ ಹಬ್ಬ: ನಟ ರಿಷಬ್ ಶೆಟ್ಟಿ, ಸಿಎಂ ಸಿದ್ದರಾಮಯ್ಯ ಭಾಗಿ

|

Updated on: Jul 21, 2023 | 5:47 PM

ಕುಂದಾಪುರ ಕನ್ನಡ ಹಬ್ಬವು ಬೆಂಗಳೂರಿನಲ್ಲಿ ಜುಲೈ 23 ರಂದು ನಡೆಯಲಿದೆ. ಈ ಹಬ್ಬದಲ್ಲಿ ನಟ ರಿಷಬ್ ಶೆಟ್ಟಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಕುಂದಾಪುರ ‌ಕನ್ನಡ ಪ್ರತಿಷ್ಠಾನ ಬೆಂಗಳೂರು ಅಧ್ಯಕ್ಷ ದೀಪಕ್ ಶೆಟ್ಟಿ ಹೇಳಿದ್ದಾರೆ.

ಜುಲೈ 23 ರಂದು ಬೆಂಗಳೂರಿನಲ್ಲಿ ಕುಂದಾಪುರ ಕನ್ನಡ ಹಬ್ಬ: ನಟ ರಿಷಬ್ ಶೆಟ್ಟಿ, ಸಿಎಂ ಸಿದ್ದರಾಮಯ್ಯ ಭಾಗಿ
ಜುಲೈ 23 ರಂದು ಬೆಂಗಳೂರಿನಲ್ಲಿ ನಡೆಯುವ ಕುಂದಾಪುರ ಕನ್ನಡ ಹಬ್ಬದಲ್ಲಿ ನಟ ರಿಷಬ್ ಶೆಟ್ಟಿ ಮತ್ತು ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗುತ್ತಿದ್ದಾರೆ
Follow us on

ಬೆಂಗಳೂರು, ಜುಲೈ 21: ಐದನೇ ಕುಂದಾಪುರ ಕನ್ನಡ ಹಬ್ಬ (Kundapur Kannada Festival) ನಗರದಲ್ಲಿರುವ ಅತ್ತಿಗುಪ್ಪೆಯಲ್ಲಿರುವ ಬಂಟರ ಭವನದಲ್ಲಿ ಜುಲೈ 23 ರಂದು ನಡೆಯಲಿದ್ದು, ನಟ ರಿಷಬ್ ಶೆಟ್ಟಿ (Rishab Shetty), ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಕುಂದಾಪುರ ‌ಕನ್ನಡ ಪ್ರತಿಷ್ಠಾನ ಬೆಂಗಳೂರು ಅಧ್ಯಕ್ಷ ದೀಪಕ್ ಶೆಟ್ಟಿ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.

ಐದನೇ ಬಾರಿಗೆ ಬೆಂಗಳೂರಿನಲ್ಲಿ ಕುಂದಾಪುರ ಕನ್ನಡ ಹಬ್ಬ ಆಯೋಜನೆ ಆಗುತ್ತಿದೆ. ಜುಲೈ 23 ರಂದು 9 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ‌ನಡೆಯಲಿದ್ದು, ಶಾಸಕರಾದ ಕಿರಣ್‌ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ ಉಪಸ್ಥಿತರಿಲಿದ್ದಾರೆ ಎಂದರು.

ಇದನ್ನೂ ಓದಿ: ಮತದಾರರಿಗೆ ಆಮಿಷ: ಸಿಎಂ ಸಿದ್ದರಾಮಯ್ಯ ಶಾಸಕ ಸ್ಥಾನ ಅಸಿಂಧು ಕೋರಿ ಹೈಕೋರ್ಟ್​​ಗೆ ಅರ್ಜಿ

ಕಂದಗನ್ನಡದ ಮೇಲಿನ ಪ್ರೀತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಕುಂದಗನ್ನಡಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸಲಾಗಿದೆ ಎಂದು ಹೇಳಿದ ದೀಪಕ್ ಶೆಟ್ಟಿ, ಯಕ್ಷಗಾನ, ಹಾಡು, ನೃತ್ಯ, ಮಾತಿನ ಚಾವಡಿ, ಖಾದ್ಯ ವೈವಿದ್ಯ, ನಾಟಕ ಕಾರ್ಯಕ್ರಮಗಳು, ಗ್ರಾಮೀಣ ಆಟೋಟ ಸ್ಪರ್ಧೆಗಳು‌ ನಡೆಯಲಿವೆ. ಚಿತ್ರರಂಗ ತಾರೆಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗೂ ನೀಡಲಿದ್ದಾರೆ. ನಟ- ನಿರ್ದೇಶಕ ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ ಎಂದು ಹೇಳಿದ ದೀಪಕ್ ಶೆಟ್ಟಿ, ಸಿಎಂ ಸಿದ್ದರಾಮಯ್ಯ ಅವರ ಮುಂದೆ ಕೆಲವು ಬೇಡಿಕೆಯನ್ನು ಇಟ್ಟಿದ್ದೇವೆ. ಕುಂದಾಪುರ ಕನ್ನಡಕ್ಕೆ ಅಧ್ಯಯನ ಪೀಠಕ್ಕೆ ರಚಿತವಾಗಿದೆ. ಈ ಪೀಠವು ಮಂಗಳೂರು ವಿಶ್ವವಿದ್ಯಾಲಯದಲ್ಲಿದೆ. ಇದಕ್ಕೆ ಸರ್ಕಾರದ ಧನಸಹಾಯ ಸಹಾಯಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ