ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ನಜೀರ್ಗೆ ಕೈದಿಗಳಿಂದ ತರಾಟೆ
ಪರಪ್ಪನ ಅಗ್ರಹಾರ ಜೈಲಿನಿಂದ ಕೋರ್ಟ್ಗೆ ಕರೆದೊಯ್ಯುತ್ತಿದ್ದಾಗ ಶಂಕಿತ ಉಗ್ರ ನಜೀರ್ಗೆ ಇತರೆ ಕೈದಿಗಳು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇದೇ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಾಜೀರ್ಗೆ ಗೂಸಾ ಬೀಳುವ ಹಂತಕ್ಕೆ ತಲುಪಿತ್ತು.
ಆನೆಕಲ್, ಜುಲೈ 21: ಕೋರ್ಟ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಪರಪ್ಪನ ಅಗ್ರಹಾರ ಜೈಲಿನಿಂದ ಶಂಕಿತ ಉಗ್ರ ಟಿ.ನಜೀರ್ನನ್ನು (T Nazir) ಪೊಲೀಸರು ಕರೆದೊಯ್ಯುತ್ತಿದ್ದಾಗ ಎದುರಾದ ವಿಚಾರಣಾಧೀನ ಕೈದಿಗಳು ಹಿಗ್ಗಾಮುಗ್ಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಈ ವೇಳೆ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಹಲ್ಲೆ ನಡೆಸುವ ಸಾಧ್ಯತೆ ಹಿನ್ನೆಲೆ ಪೊಲೀಸರು ನಜೀರ್ನನ್ನು ಕೂಡಲೇ ಜೈಲಿನೊಳಗೆ ಕರೆದೊಯ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲೇ ಕುಳಿತುಕೊಂಡು ನಜೀರ್ ಇತರೆ ಕೈದಿಗಳಿಗೆ ಮೈಂಡ್ ವಾಶ್ ಮಾಡಿ ಉಗ್ರ ಚಟುವಟಿಕೆಗಳಿಗೆ ಸೆಳೆಯುತ್ತಿದ್ದನು. ಈತನನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ವಿಚಾರಣಾಧೀನ ಕೈದಿಗಳು, ‘ನೀನು ದೇಶದ್ರೋಹಿ, ನಿನ್ನಿಂದಲೇ ಜೈಲಿನ ವಾತಾವರಣ ಹದಗೆಟ್ಟಿದೆ’ ಎಂದೆಲ್ಲಾ ಹೇಳಿ ಹಿಗ್ಗಾಮುಗ್ಗಾವಾಗಿ ಬೈಗುಳ ನೀಡಿದ್ದಾರೆ.
ಇದನ್ನೂ ಓದಿ: ಬಂಧಿತರಿಗೆ ಜೈಲಿನಲ್ಲೇ ಉಗ್ರ ತರಬೇತಿ ನೀಡಿದ್ದು ಹೇಗೆ ನಜೀರ್? ತನಿಖೆಗೆ ಆದೇಶಿಸಿದ ಎಡಿಜಿಪಿ
ಇದೇ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿಯೂ ಆರಂಭಗೊಂಡಿದ್ದು, ತಕ್ಷಣ ಜಗಳ ಬಿಡಿಸಿದ ಪೊಲೀಸರು ನಜೀರ್ನನ್ನು ರಕ್ಷಿಸಿ ಸೆಲ್ಗೆ ಕಳುಹಿಸಲಾಯಿತು. ಈ ಗಲಾಟೆ ಎಷ್ಟರ ಮಟ್ಟಿಗೆ ಕೈಮೀರಿತ್ತು ಎಂದರೆ, ಶಂಕಿತ ಉಗ್ರ ನಜೀರ್ಗೆ ಗೂಸಾ ಬೀಳುವ ಹಂತಕ್ಕೆ ತಲುಪಿತ್ತು. ಸದ್ಯ ಜೈಲಿನಲ್ಲಿ ನಜೀರ್ ಇನ್ನೊಬ್ಬ ಕೈದಿ ಜೊತೆ ಇದ್ದಾನೆ ಎಂದು ಜೈಲಿನ ಹಿರಿಯ ಅಧಿಕಾರಿಗಳಿಂದ ಮಾಹಿತಿ ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ