ಚಿಕ್ಕಬಳ್ಳಾಫುರ: ಕೌಟುಂಬಿಕ ಕಲಹ; ಇಬ್ಬರು ಮಕ್ಕಳ ಜೊತೆಗೆ ಬಾವಿಗೆ ಹಾರಿದ ತಾಯಿ
ಕೌಟುಂಬಿಕ ಕಲಹ ಹಿನ್ನಲೆ ಮಹಿಳೆಯೊಬ್ಬಳು ಇಬ್ಬರ ಮಕ್ಕಳ ಜೊತೆ ಬಾವಿಗೆ ಹಾರಿದ ಘಟನೆ ತಾಲೂಕಿನ ಜಡೇನಹಳ್ಳಿಯಲ್ಲಿ ನಡೆದಿದೆ. ತಾಯಿ ನಾಗಮ್ಮ, ಮಗಳು ಶ್ರೀನಿಧಿ (3) ಸಾವನ್ನಪ್ಪಿದ್ದು, 10 ವರ್ಷದ ಬಾಲಕಿ ಗಂಗೋತ್ರಿ ನೀರಿನಲ್ಲಿ ಈಜಾಡಿ ಮೇಲೆ ಬಂದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಚಿಕ್ಕಬಳ್ಳಾಫುರ: ಕೌಟುಂಬಿಕ ಕಲಹ ಹಿನ್ನಲೆ ಮಹಿಳೆಯೊಬ್ಬಳು ಇಬ್ಬರ ಮಕ್ಕಳ ಜೊತೆ ಬಾವಿಗೆ ಹಾರಿದ ಘಟನೆ ಚಿಕ್ಕಬಳ್ಳಾಫುರ (Chikkaballapura) ತಾಲೂಕಿನ ಜಡೇನಹಳ್ಳಿಯಲ್ಲಿ ನಡೆದಿದೆ. ತಾಯಿ ನಾಗಮ್ಮ, ಮಗಳು ಶ್ರೀನಿಧಿ (3) ಸಾವನ್ನಪ್ಪಿದ್ದು, 10 ವರ್ಷದ ಬಾಲಕಿ ಗಂಗೋತ್ರಿ ನೀರಿನಲ್ಲಿ ಈಜಾಡಿ ಮೇಲೆ ಬಂದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಬಾವಿಯಿಂದ ಮೇಲೆ ಬಂದ ಕೂಡಲೇ ಗಂಗೋತ್ರಿ ಗ್ರಾಮದಲ್ಲಿ ವಿಚಾರ ತಿಳಿಸಿದ್ದಾಳೆ. ಬಳಿಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಾಯಿ ಶವವನ್ನ ಮೇಲೆತ್ತಿದ್ದು, ಬಾಲಕಿ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಕುರಿತು ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದು ಬಂದು ತಂದೆ-ತಾಯಿಯನ್ನೇ ಕೊಂದಿದ್ದ ಪುತ್ರ ಅರೆಸ್ಟ್
ಬೆಂಗಳೂರು; ಕುಡಿದು ಬಂದು ತಂದೆ-ತಾಯಿಯನ್ನೇ ರಾಡ್‌ನಿಂದ ಹೊಡೆದು ಕೊಂದಿದ್ದ ಮಗನನ್ನ ನಗರದ ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುಲೈ 17ರಂದು ಬ್ಯಾಟರಾಯನಪುರದಲ್ಲಿ ಈ ಘಟನೆ ನಡೆದಿತ್ತು. ತಂದೆ ಭಾಸ್ಕರ್, ತಾಯಿ ಶಾಂತಾ ಮೃತ ರ್ದುದೈವಿಗಳು. ಇನ್ನು ಕೊಲೆಗೈದಿದ್ದ ಆರೋಪಿ ಶರತ್ ನಿತ್ಯವೂ ಕುಡಿದು ಬರುತ್ತಿದ್ದನಂತೆ, ಬಳಿಕ ತಂದೆ ತಾಯಿ ಜೊತೆ ಜಗಳವಾಡುತ್ತಿದ್ದ. ಹೀಗೆ ಗಲಾಟೆ ತಾರಕಕ್ಕೇರಿ ಹೆತ್ತವರನ್ನೇ ಕೊಲೆ ಮಾಡಿ ಪರಾರಿಯಾಗಿದ್ದ. ಇದೀಗ ಕೊಡಿಗೆಹಳ್ಳಿ ಪೊಲೀಸರ ಬಲೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ಹೆಂಡತಿಯ ಅನೈತಿಕ ಸಂಬಂಧದಿಂದ ಮನನೊಂದ ಗಂಡ; ಸಾವಿನ ಆಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಶರಣು
ಯುವಕರ ವೀಲಿಂಗ್ ಹುಚ್ಚಾಟಕ್ಕೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದ ಶಿಕ್ಷಕಿ ಪ್ರಾಣಾಪಾಯದಿಂದ ಪಾರು
ಮೈಸೂರು: ಯುವಕರ ವೀಲಿಂಗ್ ಹುಚ್ಚಾಟಕ್ಕೆ ಶಿಕ್ಷಕಿಗೆ ಅಪಘಾತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಪ್ರಾಣಾಪಯದಿಂದ ಪಾರಾಗಿದ್ದಾರೆ. 18ನೇ ತಾರೀಖು ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಮೈಸೂರಿನಲ್ಲಿ ಪುಂಡ ಯುವಕರು ತ್ರಿಬಲ್ ರೈಡಿಂಗ್ ಮೂಲಕ ವೀಲಿಂಗ್ ಮಾಡುತ್ತಾ ಬಂದು ಗಾಯತ್ರಿ ಪುರಂ ಚರ್ಚ್ ಬಳಿ ಡಿಕ್ಕಿ ಹೊಡೆದಿದ್ದರು. ಇವರ ಹುಚ್ಚಾಟದಿಂದ ಅಪಘಾತಕ್ಕೊಳಗಾಗಿದ್ದ ಶಿಕ್ಷಕಿ ಅನಿತಾ ತಲೆಗೆ ಗಾಯವಾಗಿ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದರು. ಬಳಿಕ ಅವರು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಸದ್ಯ ಚೇತರಿಸಿಕೊಂಡಿರುವ ಅನಿತಾ ಅವರು ಆಸ್ಪತ್ರೆಯಿಂದಲೇ ಘಟನೆ ಬಗ್ಗೆ ವಿವರಿಸಿದ್ದಾರೆ. ವೀಲಿಂಗ್ ಮಾಡುವವರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ