2008ರ ಬೆಂಗಳೂರು ಸರಣಿ ಸ್ಪೋಟದ ರುವಾರಿ ನಾಸೀರ್​ನ ಮತ್ತೊಂದು ಸಂಚು ಬಯಲು

2008ರ ಬೆಂಗಳೂರು ಸರಣಿ ಸ್ಪೋಟದ ರುವಾರಿ ನಾಸೀರ್ ಭಯೋತ್ಪಾದಕ ಚಟುವಟಿಕೆ ಎಸಗುವ ಸಂಚನ್ನು ಜೈಲಿನಲ್ಲಿದ್ದಕೊಂಡೇ ಮಾಡುತ್ತಿದ್ದಾನೆ. ಬೆಂಗಳೂರನ್ನು ಮತ್ತೆ ಟಾರ್ಗೆಟ್ ಮಾಡಿರುವುದು ಈಗ ಬೆಳಕಿಗೆ ಬಂದಿದೆ.

2008ರ ಬೆಂಗಳೂರು ಸರಣಿ ಸ್ಪೋಟದ ರುವಾರಿ ನಾಸೀರ್​ನ ಮತ್ತೊಂದು ಸಂಚು ಬಯಲು
2008ರ ಬೆಂಗಳೂರು ಸರಣಿ ಸ್ಪೋಟದ ರುವಾರಿ ನಾಸೀರ್​ನ ಮತ್ತೊಂದು ಸಂಚು ಬಯಲು (ಸಾಂದರ್ಭಿಕ ಚಿತ್ರ)
Follow us
Kiran HV
| Updated By: Rakesh Nayak Manchi

Updated on: Jul 20, 2023 | 3:41 PM

ಬೆಂಗಳೂರು, ಜುಲೈ 20: ಇಡಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ 2008ರ ವಿದ್ವಂಸಕ ಕೃತ್ಯದ (Bengaluru Serial Blasts) ರುವಾರಿ ನಾಸೀರ್, ಅಬ್ದುಲ್ ಮದನಿಯ ಆತ್ಮೀಯನೂ ಆಗಿದ್ದಾನೆ. ಈತನ ಹಿಸ್ಟರಿ ಉಗ್ರ ಚಟುವಟಿಕೆ ದೊಡ್ಡದಾಗಿದೆ. ಸದ್ಯ ಜೈಲು ಕಂಬಿ ಹಿಂದೆ ಕುಳಿತು ಷಡ್ಯಂತರ ಎಣೆಯುತ್ತಿರುವ ಮತ್ತೊಂದು ಸಂಚು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈ ನಾಸೀರ್ ಯಾರು ಅಂತ ಯೋಚಿಸುತ್ತಿದ್ದೀರಾ?

ಮೂಲತಃ ಕೇರಳದ ನಾಸೀರ್ ಎಲ್​ಇಟಿ ಸಂಘಟನೆಯ ಅಬ್ದುಲ್ ಮದನಿಯನ ಆತ್ಮೀಯನೂ ಆಗಿದ್ದಾನೆ. ಆತನ ಜೊತೆಗೂಡಿ 1998 ರಲ್ಲಿ ಕೊಯಂಬತ್ತೂರಿನಲ್ಲಿ ಸ್ಪೋಟ ನಡೆಸಿದ್ದ ಈತ ಬೆಂಗಳೂರಿನತ್ತ ಮುಖ ಮಾಡಿದ್ದ. ಬಳಿಕ ಬೆಂಗಳೂರಿನಲ್ಲಿ 2008 ರಲ್ಲಿ ಸರಣಿ ಸ್ಪೋಟದ ಪ್ರಮುಖ ರುವಾರಿಯಾದ ಈತ ನಾಪತ್ತೆಯಾಗಿದ್ದ. ನಂತರ ಬಾಂಗ್ಲಾದೇಶಕ್ಕೆ ಪರಾರಿಯಾಗುವ ಯತ್ನದ ವೇಳೆ ಬಿಎಸ್​ಎಫ್​ ಸಿಬ್ಬಂದಿ ಕೈಗೆ ಸಿಕ್ಕಿಬಿದಿದ್ದ. ಅಂದಿನ ಬೆಂಗಳೂರು ಸಿಸಿಬಿ ವಿಭಾಗದ ಡಿಸಿಪಿ ಸಿದ್ಧರಾಮಪ್ಪ ಹಾಗೂ ಎಸಿಪಿ ಒಂಕಾರಪ್ಪ ಮೇಘಾಲಯಕ್ಕೆ ತೆರಳಿ ಆತನ ವಶಕ್ಕೆ ಪಡೆದು ಕರೆತಂದಿದ್ದರು. ಅದರಂತೆ ಪರಪ್ಪನ ಅಗ್ರಹಾರಕ್ಕೆ ಸೇರಿದ್ದ. ಆದರೆ ಅಷ್ಟೊತ್ತಿಗಾಗಲೇ ಈತ ಉಗ್ರ ಸಂಘಟನೆಯಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದನು.

ಎಲ್​ಇಟಿನ ದಕ್ಷಿಣ ಭಾರತದ ಕಮಾಂಡರ್ ಆದ ಈತನಿಗೆ ಪಾಕಿಸ್ತಾನದಲ್ಲಿ ತರಬೇತಿ, ಬಾಂಬ್ ತಯಾರಿ, ಸ್ಪೋಟಕ ವಸ್ತುಗಳ ಸಂಗ್ರಹಣೆ, ಬಾಂಬ್ ಸ್ಪೋಟ ಮಾಡುವುದು, ಅದಕ್ಕೆ ಬೇಕಾದ ಫಂಡಿಗ್, ಟ್ರೇನಿಂಗ್ ನೀಡುವುದರಲ್ಲಿ ಪರಿಣಿತಿ ಹೊಂದಿದ್ದನು. ಜೊತೆಗೆ ಈತನ ಪ್ರಮುಖ ಅಸ್ತ್ರ ಬ್ರೇನ್ ವಾಶ್ ಮಾಡುವುದಾಗಿತ್ತು. ಬೇಕಾದ ವ್ಯಕ್ತಿ ಆಯ್ಕೆ ಮಾಡುತಿದ್ದ ಈತ ಬೇಕಾದಂತೆ ತಲೆ ಕಡಿಸುತ್ತಿದ್ದನು. ಅದರ ಮುಂದುವರೆದ ಭಾಗವಾಗಿ 2017ರ ಆರ್ ಟಿ ನಗರ ಮರ್ಡರ್ ಕೇಸ್​ನ ಆರೋಪಿ ಜುನೈದ್​ ಉಗ್ರ ಸಂಘಟನೆಗೆ ಎಂಟ್ರಿ ಕೊಡುತ್ತಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಿಗೆ ದಾವಣಗೆರೆ ಲಿಂಕ್? ಮತ್ತೊಬ್ಬ ಸಿಸಿಬಿ ವಶಕ್ಕೆ

ಪರಾರಿ ವೇಳೆ ಜೈಲು ಸೇರಿದ್ದ ನಾಸಿರ್ ಜೈಲಿನಲ್ಲೇ ತನ್ನ ಬ್ರೇನ್ ವಾಶ್ ಕೆಲಸ ಆರಂಭಸಿದ್ದ. ತನ್ನ ತತ್ವ ಸಿದ್ಧಾಂತಗಳಿಗೆ ಹೊಲುವ ವ್ಯಕ್ತಿಗಳನ್ನು ತನ್ನ ಬ್ಯಾರೆಕ್​ಗೆ ಕರೆಸಿಕೊಳ್ಳುತಿದ್ದ ಈತ ವಿದ್ವಂಸಹ ಕೃತ್ಯಕ್ಕೆ ಬೇಕಾದ ರೀತಿ ವ್ಯಕ್ತಿಗಳನ್ನು ರೆಡಿ ಮಾಡುತಿದ್ದ. ಅದೇ ರೀತಿ ಜುನೈದ್ ಭೇಟಿ ಬಳಿಕ ಆತನ ಜೊತೆಗೂಡಿ ಬೇಕಾದ ಸಿದ್ಧತೆ ನಡೆಸಿ ಆತನನ್ನು ತಯಾರು ಮಾಡಿದ ನಾಸೀರ್ ಆತನನ್ನು ವಿದೇಶಕ್ಕೆ ಕಳುಹಿಸಿದ್ದ. ಬಳಿಕ ಜುನೈದ್ ಮೂಲಕವೇ ಒಂದು ತಂಡವನ್ನು ರಚಿಸಿ ಆತನ ಮುಖಾಂತರವೇ ಬೆಂಗಳೂರಿನಲ್ಲೊಂದು ದೊಡ್ಡ ವಿದ್ವಂಸಕ ಸಂಚಿಗೆ ಸ್ಕೆಚ್ ಹಾಕಿದ್ದ. ಸದ್ಯ ಇದೆಲ್ಲಾ ಈಗ ಸಿಸಿಬಿ ವಿಚಾರಣೆ ವೇಳೆ ಬಯಲಾಗಿದ್ದು, ಜುನೈದ್ ಒಗ್ಗೂಡಿಸಿದ್ದ ಶಂಕಿತ ಉಗ್ರರು ಸಿಸಿಬಿ ಬಲೆಗೆ ಬಿದಿದ್ದಾರೆ.

ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಜುನೈದ್ ಜೊತೆ ಮಾತ್ರ ನಾಸೀರ್ ಚರ್ಚೆ ನಡೆಸುತಿದ್ದ. ಬೇಕಾದ ಫಂಡಿಗ್, ಶಸ್ತ್ರಾಸ್ತ್ರ ಹಾಗೂ ತರಬೇತಿಗಳನ್ನು ಆತನ ಮುಖಾಂತರವೇ ಕೊಡಿಸಿದ್ದಾನೆ ಎನ್ನಲಾಗಿದೆ. ಈ ಮುಖಾಂತರ ಸಿಕ್ಕ ಶಂಕಿತ ಉಗ್ರರಿಗೂ ಹಾಗೂ ನಾಸಿರ್​ಗೂ ಯಾವುದೇ ಸಂಪರ್ಕ ಇರಲಿಲ್ಲ. ಆದರೆ ಇವೆಲ್ಲವನ್ನೂ ಸಿಸಿಬಿ ತಾಂತ್ರಿಕ ಮಾಹಿತಿ ಮೂಲಕ ಸಂಗ್ರಹಿಸಿದೆ. ಸದ್ಯ ಕೇರಳ ಜೈಲಿನಲ್ಲಿರುವ ನಾಸಿರ್​ನನ್ನು ಬಾಡಿ ವಾರೆಂಟ್ ಮುಖಾಂತರ ಕರೆತರಲು ಸಿದ್ಧತೆ ನಡೆಸಿದ್ದು, ವಿದ್ವಂಸಕ ಕೃತ್ಯದ ಸಂಚಿನ ಮತ್ತಷ್ಟು ಸಂಗತಿ ಅನಾವರಣವಾಗಲಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ