ಅಬಕಾರಿ ಸುಂಕ ಹೆಚ್ಚಳ ಎಫೆಕ್ಟ್; ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು, ಐಎಂಎಲ್‌ ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ

| Updated By: ಆಯೇಷಾ ಬಾನು

Updated on: Aug 21, 2023 | 8:24 AM

ಅಬಕಾರಿ ಸುಂಕ ಹೆಚ್ಚಳ ಆಗುತ್ತಿದ್ದಂತೆ ಬಾರ್‌, ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಕುಸಿದಿದೆ. ಹೀಗಾಗಿ ರಾಜ್ಯ ಪಾನೀಯ ನಿಗಮಕ್ಕೆ ಮದ್ಯಕ್ಕಾಗಿ ಸಲ್ಲಿಸುವ ಖರೀದಿ ಬೇಡಿಕೆ (ಪರ್ಚೇಸ್‌ ಇಂಡೆಂಟ್‌) ಇಳಿಕೆಯಾಗಿದೆ. ಅಬಕಾರಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಮದ್ಯ ಮಾರಾಟ ಶೇ.15ರಷ್ಟು ಕುಸಿತವಾಗಿದ್ದರೆ, ಬಿಯರ್‌ ಶೇ.5ರಷ್ಟು ಕುಸಿದಿದೆ.

ಅಬಕಾರಿ ಸುಂಕ ಹೆಚ್ಚಳ ಎಫೆಕ್ಟ್; ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು, ಐಎಂಎಲ್‌ ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆ.20: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ(Congress Guarantee) ಪರಿಣಾಮವಾಗಿ ಒಂದೊಂದೇ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟುತ್ತಿದೆ. ಇದರ ನಡುವೆ ರಾಜ್ಯ ಸರಕಾರ ಜುಲೈ ತಿಂಗಳಲ್ಲಿ ಮದ್ಯ ಹಾಗೂ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು(Liquor Price Hike). ಈ ಮೂಲಕ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಿತ್ತು. ಆದರೆ ಮದ್ಯಪ್ರಿಯರು ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ. ಭಾರತೀಯ ಮದ್ಯ(ಐಎಂಎಲ್‌) ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ ಕಂಡಿದೆ. ಆದರೆ, ಬಿಯರ್‌ ಮಾರಾಟದಲ್ಲಿ ಅಂತಹ ವ್ಯತ್ಯಯವೇನೂ ಆಗಿಲ್ಲ.

ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆ

ಅಬಕಾರಿ ಸುಂಕ ಹೆಚ್ಚಳ ಆಗುತ್ತಿದ್ದಂತೆ ಬಾರ್‌, ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಕುಸಿದಿದೆ. ಹೀಗಾಗಿ ರಾಜ್ಯ ಪಾನೀಯ ನಿಗಮಕ್ಕೆ ಮದ್ಯಕ್ಕಾಗಿ ಸಲ್ಲಿಸುವ ಖರೀದಿ ಬೇಡಿಕೆ (ಪರ್ಚೇಸ್‌ ಇಂಡೆಂಟ್‌) ಇಳಿಕೆಯಾಗಿದೆ. ಅಬಕಾರಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಮದ್ಯ ಮಾರಾಟ ಶೇ.15ರಷ್ಟು ಕುಸಿತವಾಗಿದ್ದರೆ, ಬಿಯರ್‌ ಶೇ.5ರಷ್ಟು ಕುಸಿದಿದೆ. ಇದಿರಂದ ಸರ್ಕಾರದ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಏಪ್ರಿಲ್ -2308 ಕೋಟಿ, ಮೇ -2607 ಕೋಟಿ, ಜೂನ್-3549 ಕೋಟಿ, ಜುಲೈ-2980 ಕೋಟಿ ರೂ. ಇದ್ದ ಆದಾಯ ಆಗಸ್ಟ್‌ ತಿಂಗಳಲ್ಲಿ (ಆ.14ವರೆಗೆ) ಕೇವಲ 962 ಕೋಟಿ ರೂ. ಸಂಗ್ರಹವಾಗಿದೆ.

ಎಷ್ಟೆಷ್ಟು ಮಾರಾಟ ಇಳಿಕೆ?

2022ರ ಆಗಸ್ಟ್​ನಲ್ಲಿ 25.50 ಲಕ್ಷ ಸ್ವದೇಶಿ ಬ್ರ್ಯಾಂಡ್ ಬಾಕ್ಸ್, 10.34 ಲಕ್ಷ ಬಿಯರ್ ಬಾಕ್ಸ್ ಸೇಲ್ ಆಗಿತ್ತು. ಆದರೆ 2023ರ ಆಗಸ್ಟ್ ನಲ್ಲಿ 21.87 ಲಕ್ಷ ದೇಶಿ ಬ್ರ್ಯಾಂಡ್ ಬಾಕ್ಸ್, ಬಿಯರ್ 12.52 ಲಕ್ಷ ಬಾಕ್ಸ್ ಮಾತ್ರ ಮಾರಾಟವಾಗಿದೆ. ಕಡಿಮೆ ದರದ ಬ್ರ್ಯಾಂಡ್​ಗಳಿಗೆ ಬೇಡಿಕೆ ಹೆಚ್ಚಿದೆ. ಸ್ಕಾಚ್ ಪ್ರಿಯರು ಪ್ರೀಮಿಯಮ್ ಬ್ರ್ಯಾಂಡ್​ಗೆ ಶಿಫ್ಟ್ ಆದ್ರೆ, ಪ್ರೀಮಿಯಮ್ ಪ್ರಿಯರು ನಾರ್ಮಲ್ ಬ್ರ್ಯಾಂಡ್​ಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಎಫೆಕ್ಟ್ ಆಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರ್ತಿತ್ತು. ಆದರೆ ಈ ಆಗಸ್ಟ್​ನಲ್ಲಿ 962 ಕೋಟಿ ಮಾತ್ರ ಸಂಗ್ರಹವಾಗಿದೆ.

ಇದನ್ನೂ ಓದಿ: ಒಂದೇ ಒಂದು ಮದ್ಯದ ಬಾಟಲಿ ಮಾರಾಟ ಮಾಡದೆ ತೆಲಂಗಾಣ ಅಬಕಾರಿ ಇಲಾಖೆಗೆ 2,600 ಕೋಟಿ ರೂ. ಹರಿದುಬಂದಿದ್ಹೇಗೆ?

ಐಎಂಎಲ್ ಮೇಲೆ ಶೇ.20 ರಷ್ಟು ಸುಂಕ ಹೆಚ್ಚಳ ಪರಿಣಾಮ ಎಲ್ಲಾ 18 ಸ್ಲಾಬ್​ಗಳ ಲಿಕ್ಕರ್ ದರ ಏರಿಕೆಯಾಗಿದೆ. ಪ್ರತಿ ಪೆಗ್​ಗೆ 10 ರಿಂದ 20 ರೂಪಾಯಿ ಏರಿಕೆಯಾಗಿದ್ದು ಪ್ರತಿ ಬಾಟಲ್​ಗೆ 50 ರಿಂದ 200 ರೂ.ಏರಿಕೆಯಾಗಿದೆ. ಪ್ರತಿ ತಿಂಗಳು ಸರಾಸರಿ 61 ಲಕ್ಷ ಟನ್ ಬಾಕ್ಸ್ ಮಾರಾಟವಾಗ್ತಿತ್ತು. ಆಗಸ್ಟ್​ನಲ್ಲಿ 18.8 ಲಕ್ಷ ಟನ್ ಬಾಕ್ಸ್ ಮಾತ್ರ ಮಾರಾಟವಾಗಿದೆ.

ಅಬಕಾರಿ ಸುಂಕ ಹೆಚ್ಚಳ ಪರಿಣಾಮ ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ಲೇಬಲ್‌ ಇರುವ ಹೆಚ್ಚು ಬೆಲೆಯ ನಕಲಿ ಮದ್ಯ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ. ಅಲ್ಲದೆ ಮಿಲಿಟರಿ ಕ್ಯಾಂಟೀನ್‌ ಮತ್ತು ಡ್ಯೂಟಿ ಫ್ರೀ ಹೆಸರಿನಲ್ಲಿ ಹೆಚ್ಚು ಬೆಲೆಯ ನಕಲಿ ಮದ್ಯ ಮಾರುಕಟ್ಟೆಗೆ ಬರುತ್ತಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟದ ಸದಸ್ಯರು ತಿಳಿಸಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ