ಬೆಂಗಳೂರು, (ಆಗಸ್ಟ್ 21): ಪ್ರೀತಿಗೆ (Love) ವಯಸ್ಸು ಅಡ್ಡಿ ಆಗೋದಿಲ್ಲ ಅಂತಾರೆ. ಇನ್ನು ಕೆಲವರು ಪ್ರೀತಿ-ಪ್ರೇಮಕ್ಕೆ ಒಂದು ವಯಸ್ಸು ಅಂತ ಇರುತ್ತೆ. ಆ ವಯಸ್ಸಲ್ಲೇ ಮಾಡಿದ್ರೆ ಚೆಂದಾ ಅಂತಾರೆ. ಇನ್ನು ಯೌವನ ಸಮಯದಲ್ಲಿ ಹುಡುಗ-ಹುಡಿಗಿಗೆ ಆಕರ್ಷಣೆ ಮೂಲಕ ಲವ್ ಹುಟ್ಟಿಕೊಳ್ಳವುದು ಸಹಜ ಎನ್ನುವವರೂ ಇದ್ದಾರೆ. ಆ ವಯಸ್ಸೇ ಹಾಗೇ. ಆದ್ರೆ, ವೃದ್ಧಾಪ್ಯದಲ್ಲೂ ಲವ್ ಫೇಲ್ ಆಗಿ ಇದೀಗ ವಯಸ್ಸಾದ ಹೆಂಗಸು0ಗಂಡಸು ಲವ್ ಸ್ಟೋರಿ ಪೊಲೀಸ್ ಠಾಣೆ ಮೆಟ್ಟಿಲೇರುವ ವಿಚಿತ್ರ ಪ್ರೇಮ್ ಕಹಾನಿ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಹೌದು.. 70ರ ವಯಸ್ಸಿನ ಗಂಡಸು ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು 63 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಅರೇ ಇದೇನಿದು ಎಂದು ಅಚ್ಚರಿ ಆಯ್ತಾ? ಅಚ್ಚರಿ ಅನ್ನಿಸಿದರೂ ಸತ್ಯ.
ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿ ಕೈಕೊಟ್ಟಿದ್ದಾರೆ ಎಂದು ಆರೋಪಿಸಿ 63 ವರ್ಷದ ಹೆಂಗಸು, 70 ವಯಸ್ಸಿನ ವ್ಯಕ್ತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಹಲಸೂರಿನ ದಯಾಮಣಿ ಎನ್ನುವ ಅಜ್ಜಿ ಲೋಕನಾಥ್ ಎಂಬುವವರ ವಿರುದ್ದ ನಂಬಿಸಿ ವಂಚಿಸಿದ್ದಾರೆ ಎಂದು ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಗಂಡ ಬಾತ್ ರೂಮ್ನಲ್ಲಿ.. ಹೆಂಡತಿ ಪ್ರಿಯತಮನ ಬೈಕ್ನಲ್ಲಿ ಪರಾರಿ!
ಇಬ್ಬರ ಪರಿಚಯವಾಗಿ ನಂತರ ನಂತ್ರ ಮದುವೆಯಾಗುವುದಾಗಿ ನಂಬಿಸಿದ್ರು. ಆದ್ರೆ, ಈಗ ಮದುವೆಯಾಗಿಲ್ಲ. ಜೊತೆಗೆ ತಾನು ಕರೆದಾಗ ಬಂದಿಲ್ಲಾ ಎಂದು ದಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದಯಾಮಣಿ ದೂರಿನ ಅನ್ವಯ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಿದ್ದಾರೆ.
ವಾಯ ವಿಹಾರ ಮಾಡುವಾಗ ಇಬ್ಬರ ಪರಿಚಯ ಆಗಿತ್ತಂತೆ. ಅಲ್ಲದೇ ಇಬ್ಬರ ಪರಿಚಯವೂ ಪ್ರೀತಿಗೆ ತಿರುಗಿತ್ತು. ಬಳಿಕ ಸಿನಿಮಾ, ಪಾರ್ಕ್ ಅಂತ ಸುತ್ತಾಡಿದ್ದಾರೆ. ನಂತರ ಅದೇನಾಯ್ತೋ ಏನೋ ಏಕಾಏಕಿ ಲೋಕನಾಥನ್ ಅವರು ದಯಾಮಣಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದುದಯಾಮಣಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:11 am, Mon, 21 August 23