AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್! ಕಾಮಗಾರಿ ಸ್ಥಗಿತಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಚಿಂತನೆ

ರಾಜ್ಯ ಗುತ್ತಿಗೆದಾರರ ಸಂಘವೂ ಸರ್ಕಾರಕ್ಕೆ ಶಾಕ್ ಕೊಡಲು ಮುಂದಾಗಿದ್ದು, ಈ ಕುರಿತು ‘ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಕಾಮಗಾರಿ ಪೂರ್ಣ ಮಾಡಲು ಕಷ್ಟವಾಗುತ್ತೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಮಗಾರಿ ನಿಲ್ಲಿಸುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್! ಕಾಮಗಾರಿ ಸ್ಥಗಿತಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಚಿಂತನೆ
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
Anil Kalkere
| Edited By: |

Updated on:Aug 20, 2023 | 9:31 PM

Share

ಬೆಂಗಳೂರು, ಆ.20: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘ (Karnataka Contractors Association) ಸಮರ ಸಾರಲು ಮುಂದಾಗಿದೆ. ಹೌದು, ಕಾಮಗಾರಿ ಬಿಲ್ ಬಾಕಿ ಇರಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ನೀಡಲು ಕಾಮಗಾರಿ ಸ್ಥಗಿತಕ್ಕೆ ಚಿಂತನೆ ನಡೆಸಿದೆ. ಈಗಾಗಲೇ ಬಿಬಿಎಂಪಿ ಗುತ್ತಿಗೆದಾರರ (Contractors)ಸಂಘ ಸಚಿವರ ವಿರುದ್ಧ ಕಮಿಷನ್​​ ಆರೋಪ ಮಾಡಿದೆ. ಇದರ ಮಧ್ಯೆ ಇದೀಗ ರಾಜ್ಯ ಗುತ್ತಿಗೆದಾರರ ಸಂಘವೂ ಸರ್ಕಾರಕ್ಕೆ ಶಾಕ್ ಕೊಡಲು ಮುಂದಾಗಿದ್ದು, ಈ ಕುರಿತು ‘ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಕಾಮಗಾರಿ ಪೂರ್ಣ ಮಾಡಲು ಕಷ್ಟವಾಗುತ್ತೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಮಗಾರಿ ನಿಲ್ಲಿಸುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕೆಲಸ ನಿಲ್ಲಿಸುವುದು ಅನಿವಾರ್ಯ

ಹೌದು, ಸರ್ಕಾರವು 7ಕ್ಕೂ ಹೆಚ್ಚು ಇಲಾಖೆಗಳಿಂದ 25 ಸಾವಿರ ಕೋಟಿಗೂ ಹೆಚ್ಚು ಬಿಲ್ ಬಾಕಿ ಉಳಿಸಿಕೊಂಡಿದ್ದು, ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕೆಲಸ ನಿಲ್ಲಿಸುವುದು ಅನಿವಾರ್ಯವಾಗಲಿದೆ. ಈ ಹಿನ್ನಲೆ ಆಗಸ್ಟ್​ 31ರೊಳಗೆ ಸರ್ಕಾರ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಸಭೆ ನಡೆಸಲಿದ್ದು, 61 ವಿವಿಧ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಕೆಂಪಣ್ಣ ಹೇಳಿದ್ದಾರೆ. ಇನ್ನು ಗುತ್ತಿಗೆದಾರರ ಸಂಘ ಈಗಾಗಲೇ ಬಾಕಿ ಬಿಲ್ ಕ್ಲಿಯರ್ ಮಾಡಲು ಸಂಬಂಧಪಟ್ಟ ಇಲಾಖೆ ಸಚಿವರಿಗೂ ಸೇರಿ ಸಿಎಂ, ಡಿಸಿಎಂಗೆ ಮನವಿ ಸಲ್ಲಿಸಿದರೂ, ಪ್ರಯೋಜನ ಆಗಿಲ್ಲ.

ಇದನ್ನೂ ಓದಿ:ನಾವೂ ಯಾವುದೇ ರೀತಿ ಕಮೀಷನ್ ಆರೋಪ ಮಾಡಿಲ್ಲ: ಸ್ಪಷ್ಟಪಡಿಸಿದ ಬಿಬಿಎಂಪಿ ಗುತ್ತಿಗೆದಾರರ ಸಂಘ

ಸರ್ಕಾರ ಕೊಡುತ್ತಿರುವ ಕಾರಣಗಳೇನು?

ಕಳೆದ 3 ವರ್ಷಗಳಿಂದ ಬಾಕಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರು ಸರ್ಕಸ್ ಮಾಡುತ್ತಿದ್ದು, ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಹಾಗಾದರೆ, ಸರ್ಕಾರ ಕೊಡುತ್ತಿರುವ ಕಾರಣಗಳೇನು? ಇಲ್ಲಿದೆ ನೋಡಿ.

1) ಗ್ಯಾರೆಂಟಿ ಯೋಜನೆಗಳಿಗೆ ಎಲ್ಲ ಹಣ ಖರ್ಚು.

2) ಸರ್ಕಾರ ಬಂದು 3 ತಿಂಗಳಾಗಿದೆ, ಸ್ಟೇಬಲ್ ಆಗಲು ಟೈಂ ಕೊಡಿ ಅಂತಿದ್ಯಂತೆ.

3) ಬಿಜೆಪಿ ಸರ್ಕಾರದ ಅವಧಿಯಲ್ಲೇ ಯಾಕೆ ಬಿಡುಗಡೆ ಮಾಡಿಸಿಕೊಂಡಿಲ್ಲ ಎಂದು ಗುತ್ತಿಗೆದಾರರಿಗೆ ಪ್ರಶ್ನೆ.

ಈ ರೀತಿಯಾಗಿ ಕಾರಣಗಳನ್ನು ಸರ್ಕಾರ ಕೊಡುತ್ತಿದೆ. ಇನ್ನು ಈ ಹಿಂದೆ ಕೆಂಪಣ್ಣ ಅವರು ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿ, ಅಂದು ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರವೇ ಗುತ್ತಿಗೆದಾರರ ಬಾಕಿ ಬಿಲ್​ ಪಾವತಿಸದೇ ಪೆಂಡಿಂಗ್ ಇಟ್ಟಿದೆ.

​ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:30 pm, Sun, 20 August 23

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ