KGF Babu: ರಾಜಕೀಯ ಸೋಲಿನಿಂದ ಕಂಗೆಟ್ಟು ಸೀದಾ ಆಟೋ ಹತ್ತಿ ಹೊರಟ ಕೋಟಿ ಧಣಿ ಬಾಬು

| Updated By: ಆಯೇಷಾ ಬಾನು

Updated on: Dec 14, 2021 | 1:23 PM

ಕೆಜಿಎಫ್ ಬಾಬು ಸೋಲು ಎಂದು ತಿಳಿಯುತ್ತಿದ್ದಂತೆ ಮಹಾರಾಣಿ ಎಣಿಕೆ ಕೇಂದ್ರದಿಂದ ಹೊರ ಬಂದು ಆಟೋ ಹತ್ತಿ ಹೊರಟು ಹೋದ್ರು. ತಮ್ಮ ಐಷಾರಾಮಿ ಕಾರು ಬೇರೆಡೆ ಬಿಟ್ಟಿದ್ದ ಕಾರಣ ಆಟೋ ಹತ್ತಿ ಹೊರಟಿದ್ದಾರೆ.

KGF Babu: ರಾಜಕೀಯ ಸೋಲಿನಿಂದ ಕಂಗೆಟ್ಟು ಸೀದಾ ಆಟೋ ಹತ್ತಿ ಹೊರಟ ಕೋಟಿ ಧಣಿ ಬಾಬು
ಕೆಜಿಎಫ್ ಬಾಬು
Follow us on

ಬೆಂಗಳೂರು: ಬೆಂಗಳೂರು ನಗರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ಎಸ್. ಗೋಪಿನಾಥ್ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ, ಸಾವಿರಾರು ಕೋಟಿಯ ಒಡೆಯ ಯೂಸಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಸೋಲುಂಡಿದ್ದಾರೆ. ತಮ್ಮ ಸೋಲು ಸಮೀಪಿಸುತ್ತಿದ್ದಂತೆ ಕೋಟಿ ಒಡೆಯ ಕೆಜಿಎಫ್ ಬಾಬು ಆಟೋ ಹತ್ತಿ ಮನೆ ಕಡೆ ಹೊರಟ್ರು.

ಕಾಂಗ್ರೆಸ್‌ ಪಕ್ಷದಲ್ಲಿ ಶ್ರೀಮಂತ ರಾಜಕಾರಣಿಗಳು ಎಂದರೆ ನನಪಾಗುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಎಂಟಿಬಿ ನಾಗರಾಜ್ ಆದ್ರೆ ಇವರನ್ನೂ ಮೀರಿಸಿದ ರಾಜಕಾರಣಿಯಾಗಿ ಕೋಲಾರದ ಶ್ರೀಮಂತ ಅಭ್ಯರ್ಥಿಯಾಗಿ ಬೆಂಗಳೂರು ನಗರ ಕ್ಷೇತ್ರದಿಂದ ಕೆಜಿಎಫ್ ಬಾಬು ಕಣಕ್ಕೆ ಇಳಿದಿದ್ದರು. ಆದ್ರೆ ಇವರ ಶ್ರೀಮಂತಿಕೆ ಚುನಾವಣೆಯಲ್ಲಿ ಕೈ ಹಿಡಿದಿಲ್ಲ. ಕೋಟಿ ಒಡೆಯನಾದರೂ ಗೆಲುವು ಮಾತ್ರ ಅವರನ್ನು ತಪ್ಪಿಕೊಳ್ಳಲಿಲ್ಲ. ವಿಪರ್ಯಾಸವೆಂದರೆ ಕೆಜಿಎಫ್ ಬಾಬು ಸೋಲು ಎಂದು ತಿಳಿಯುತ್ತಿದ್ದಂತೆ ಮಹಾರಾಣಿ ಎಣಿಕೆ ಕೇಂದ್ರದಿಂದ ಹೊರ ಬಂದು ಆಟೋ ಹತ್ತಿ ಹೊರಟು ಹೋದ್ರು. ತಮ್ಮ ಐಷಾರಾಮಿ ಕಾರು ಬೇರೆಡೆ ಬಿಟ್ಟಿದ್ದ ಕಾರಣ ಆಟೋ ಹತ್ತಿ ಹೊರಟಿದ್ದಾರೆ. ರಾಜಕೀಯಕ್ಕೆ ಬಂದಾಗಿನಿಂದ ದುಃಖದ ದಿನಗಳನ್ನೇ ಎಣಿಸುತ್ತಿರುವ ಬಾಬು ಅವರಿಗೆ ಮತ್ತೊಂದು ದುಃಖ ಆವರಿಸಿದೆ.

‘ಕೆಜಿಎಫ್‌ ಬಾಬು’ ಎಂದೇ ಪ್ರಸಿದ್ಧಿ ಪಡೆದಿರುವ ಯೂಸೂಫ್‌ ಷರೀಫ್‌ ಬರೋಬ್ಬರಿ 1,743 ಕೋಟಿ ರೂ. ಆಸ್ತಿಯ ಒಡೆಯ. ಇಲ್ಲಿಯವರೆಗೆ ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್‌ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು. 2019 ರಲ್ಲಿ ನಡೆದ ಉಪಚುನಾವಣೆಯ ವೇಳೆ ಎಂಟಿಬಿ 1200 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಎಂಟಿಬಿ ಹೆಸರಿನಲ್ಲಿದ್ದ ʼಶ್ರೀಮಂತ ಅಭ್ಯರ್ಥಿʼ ದಾಖಲೆಯನ್ನು ಯೂಸುಫ್‌ ಷರೀಫ್‌ ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದರು. ಆದರೆ ಶ್ರೀಮಂತ ವ್ಯಕ್ತಿ ಇಂದು ಸೋಲು ಅನುಭವಿಸಿ ಆಟೋ ಹತ್ತಿ ಹೊರಟಿದ್ದಾರೆ.

ಇದನ್ನೂ ಓದಿ: MLC Election Result: ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಎದುರು ಸೋಲುಂಡ ಕೋಟಿಗಳ ಧನಿಕ ಕಾಂಗ್ರೆಸ್​ ಅಭ್ಯರ್ಥಿ ಕೆಜಿಎಫ್ ಬಾಬು