ಬೆಂಗಳೂರು: ಒಮಿಕ್ರಾನ್ ಸೋಂಕಿತನ ಸಂಪರ್ಕದಲ್ಲಿದ್ದ ವೈದ್ಯರಿಗೆಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಅವರ ಪತ್ನಿ ಹಾಗೂ ಮಾವನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇಬ್ಬರ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಲಾಗಿದೆ. ಬಸವನಗುಡಿಯ ರತ್ನವಿಲಾಸ್ ರಸ್ತೆಯಲ್ಲಿರುವ ವೈದ್ಯರ ಮನೆಯಲ್ಲಿನ ಒಟ್ಟು ಐವರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಒಬ್ಬರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನಿಬ್ಬರು ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಬಿಬಿಎಂಪಿ ಮನೆಯನ್ನು ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿದ್ದು, ರೆಡ್ ಟೇಪ್ ಹಾಕಿ ಕಂಟೇನ್ಮೆಂಟ್ ಮಾಡಲಾಗಿದೆ.
ಕೋರಮಂಗಲದಲ್ಲಿ ‘ಒಮಿಕ್ರಾನ್’ ಪ್ರಾಥಮಿಕ ಸಂಪರ್ಕಿತ ವೈದ್ಯರ ಮನೆ ಸೀಲ್ಡೌನ್:
ಒಮಿಕ್ರಾನ್’ ಸೋಂಕಿತ ವೈದ್ಯರ ಪ್ರಾಥಮಿಕ ಸಂಪರ್ಕಿತ ಮತ್ತೋರ್ವ ವೈದ್ಯರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಮನೆಯನ್ನು ಸೀಲ್ಡೌನ್ ಮಾಡಲಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ. ಒಮಿಕ್ರಾನ್ ಸೋಂಕಿತ ವೈದ್ಯನ ಪ್ರಾಥಮಿಕ ಸಂಪರ್ಕಕ್ಕೆ ಮತ್ತೋರ್ವರು ವೈದ್ಯರು ಬಂದಿದ್ದರು. ಪ್ರಾಥಮಿಕ ಸಂಪರ್ಕಿತ ವೈದ್ಯರಿಗೂ ಕೊರೊನಾ ಪಾಸಿಟಿವ್ ಆಗಿದ್ದು, ಅವರ ಪತ್ನಿ ದಂತವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋರಮಂಗಲದ ಮನೆಯಲ್ಲಿ ದಂಪತಿ ಹಾಗೂ ಮಕ್ಕಳಿಬ್ಬರು ವಾಸವಾಗಿದ್ದಾರೆ. ನಿನ್ನೆ ನಡೆಸಿದ RAT ಟೆಸ್ಟ್ನಲ್ಲಿ ಮನೆಯ ಸದಸ್ಯರ ವರದಿ ನೆಗೆಟಿವ್ ಬಂದಿದೆ. ಇಂದು RTPCR ಟೆಸ್ಟ್ ರಿಪೋರ್ಟ್ ಬರಲಿದೆ. ಪ್ರಸ್ತುತ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ.
ವ್ಯಾಕ್ಸಿನೇಷನ್, ಮುಂಚಿನ ಸೋಂಕುಗಳ ಕಾರಣದಿಂದಾಗಿ ಒಮಿಕ್ರಾನ್ ತೀವ್ರತೆ ಕಡಿಮೆ: ಆರೋಗ್ಯ ಸಚಿವಾಲಯ
ಕೊವಿಡ್ ಲಸಿಕೆ ನೀಡುವಿಕೆಯ ವೇಗ ಮತ್ತು ಡೆಲ್ಟಾ ರೂಪಾಂತರಕ್ಕೆ ಹೆಚ್ಚಿನ ಒಗ್ಗಿಕೊಳ್ಳುವಿಕೆಯಿಂದಾಗಿ ಭಾರತದಲ್ಲಿ ಒಮಿಕ್ರಾನ್ ರೂಪಾಂತರಿಯಿಂದ ಬರುವ ಕೊರೊನಾವೈರಸ್ ಕಾಯಿಲೆಯ ತೀವ್ರತೆಯು ಕಡಿಮೆಯಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಹೊಸ ರೂಪಾಂತರವು ಭಾರತ ಸೇರಿದಂತೆ ಹೆಚ್ಚಿನ ದೇಶಗಳಿಗೆ ಹರಡುವ ಸಾಧ್ಯತೆಯಿದೆ. ಆದರೆ ಸೋಂಕಿನ ಹೆಚ್ಚಳದ ಪ್ರಮಾಣ ಮತ್ತು ತೀವ್ರತೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:
New Guidelines: ಪೋಷಕರು 2 ಡೋಸ್ ಲಸಿಕೆ ಪಡೆದಿದ್ದರೆ ಮಾತ್ರ ಮಕ್ಕಳಿಗೆ ಶಾಲೆ ಪ್ರವೇಶ
ತಮಿಳುನಾಡಿನಲ್ಲಿ ರಿಸ್ಕ್ ದೇಶಗಳಿಂದ ಬಂದ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢ