ಪ್ರಯಾಣಿಕರೇ ಗಮನಿಸಿ: ನಾಳೆ ಸಂಜೆಯಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ; ಸಂಪೂರ್ಣ ಮಾಹಿತಿ ಇಲ್ಲಿದೆ
Metro Purple Line Timings: ನಾಳೆ (ಡಿಸೆಂಬರ್ 04) ಸಂಜೆ 5ರಿಂದ ಭಾನುವಾರ ಮುಂಜಾನೆ 7ರವರೆಗೆ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ನಾಳೆ ಸಂಜೆಯಿಂದ ನೇರಳೆ ಮಾರ್ಗದ (Purple Line) ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಂಸ್ಥೆ, ನೇರಳೆ ಮಾರ್ಗದ ಮೆಟ್ರೋ ಸಂಚಾರ ಭಾಗಶಃ ಸ್ಥಗಿತವಾಗಲಿದೆ. ಟ್ರಿನಿಟಿಯಿಂದ ಹಲಸೂರು ಮೆಟ್ರೋ ಮಾರ್ಗದಲ್ಲಿ ದುರಸ್ತಿಯ ಕಾರಣ ಸಂಚಾರ ವ್ಯತ್ಯಯ ಆಗಲಿದೆ. ನಾಳೆ ಅಂದರೆ ಶನಿವಾರ ಸಂಜೆ 5ರಿಂದ (ಡಿಸೆಂಬರ್ 04) ಭಾನುವಾರ ಬೆಳಗ್ಗೆ 7ರವರೆಗೆ (ಡಿಸೆಂಬರ್ 05) ಸಂಚಾರ ಸ್ಥಗಿತವಾಗಲಿದೆ ಎಂದು ತಿಳಿಸಿದೆ. ಇದೇ ವೇಳೆ ಕೆಂಗೇರಿಯಿಂದ ಎಂಜಿ ರಸ್ತೆಯವರೆಗೆ ಸಂಚಾರ ಇರಲಿದೆ ಎಂದೂ ಅದು ಸ್ಪಷ್ಟಪಡಿಸಿದೆ. ಭಾನುವಾರ ಬೆಳಗ್ಗೆ 7ರಿಂದ ನೇರಳೆ ಮಾರ್ಗ ಸಂಪೂರ್ಣವಾಗಿ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಅದು ತಿಳಿಸಿದೆ.
ನೇರಳೆ ಮಾರ್ಗದ ಸಂಚಾರ ಹೇಗೆ? ನೇರಳೆ ಮಾರ್ಗದ ಟ್ರಿನಿಟಿ ಇಂದ ಹಲಸೂರು ಮಾರ್ಗದಲ್ಲಿ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಎಂಜಿ ರಸ್ತೆಯಿಂದ ಬಯ್ಯಪ್ಪನಹಳ್ಳಿ ನಿಲ್ದಾಣದವರೆಗೆ ಸೇವೆಯಲ್ಲಿ ವ್ಯತ್ಯಯವಾಗಲಿದೆ. ನಾಳೆ ಸಂಜೆ 5 ಗಂಟೆಯಿಂದ ಭಾನುವಾರ ಬೆಳಿಗ್ಗೆ 7 ಗಂಟೆಯವರೆಗೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. ಇದೇ ವೇಳೆ, ಎಂಜಿ ರೋಡ್ ಇಂದ ಕೆಂಗೇರಿವರೆಗೆ ಸಂಚಾರ ಇರಲಿದೆ ಎಂದು ತಿಳಿಸಲಾಗಿದೆ.
ಮೆಟ್ರೋದಲ್ಲಿ ಮಾಸ್ಕ್ ಕಡ್ಡಾಯ: ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್ (omicron) ಆತಂಕ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಟ್ಟುನಿಟ್ಟಿನ ಕ್ರಮಕ್ಕೆ ನಮ್ಮ ಮೆಟ್ರೋ ಮುಂದಾಗಿದ್ದು, ಮಾಸ್ಕ್ ಇಲ್ಲದೆ ಮೆಟ್ರೋದಲ್ಲಿ ಪ್ರಯಾಣಕ್ಕೆ ಅವಕಾಶ ಇಲ್ಲ ಎಂಬ ನಿಯಮವನ್ನು ಅನುಸರಿಸಲಾಗುತ್ತಿದೆ. ಕೊವಿಡ್ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಿದ ಬೆಂಗಳೂರು ಮೆಟ್ರೋ ನಿಗಮ (BMRCL) ಮೆಟ್ರೋ ಸ್ಟೇಷನ್, ಮೆಟ್ರೋ ಬೋಗಿ ಒಳಗೆ ಮಾಸ್ಕ್ ಇಲ್ಲದೆ ಬರುವ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ರೂಪಾಂತರಿ ಒಮಿಕ್ರಾನ್ ಆತಂಕದಿಂದ ಪ್ರಯಾಣಿಕರ ಮೇಲೆ ಮೆಟ್ರೋ ಸಿಬ್ಬಂದಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ.
ಇದನ್ನೂ ಓದಿ:
New Guidelines: ಪೋಷಕರು 2 ಡೋಸ್ ಲಸಿಕೆ ಪಡೆದಿದ್ದರೆ ಮಾತ್ರ ಮಕ್ಕಳಿಗೆ ಶಾಲೆ ಪ್ರವೇಶ
ಕೊವಿಡ್ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಿದ ಬಿಎಂಆರ್‌ಸಿಎಲ್; ಮೆಟ್ರೋದಲ್ಲಿ ಓಡಾಟಕ್ಕೆ ಮಾಸ್ಕ್ ಕಡ್ಡಾಯ
Published On - 4:22 pm, Fri, 3 December 21