AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕಿತರಿಗೆ ಕೊರೊನಾ ಪಾಸಿಟಿವ್; ಮನೆಗಳನ್ನು ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿದ ಬಿಬಿಎಂಪಿ

ಬೆಂಗಳೂರಿನಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾದ ವೈದ್ಯನ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರಿಗೆ ಕೊರೊನಾ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅವರ ಮನೆಗಳನ್ನು ಬಿಬಿಎಂಪಿ ಸೀಲ್​ಡೌನ್ ಮಾಡಿದ್ದು, ಮುನ್ನೆಚ್ಚರಿಕೆಗಳನ್ನು ಕೈಗೊಂಡಿದೆ.

ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕಿತರಿಗೆ ಕೊರೊನಾ ಪಾಸಿಟಿವ್; ಮನೆಗಳನ್ನು ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿದ ಬಿಬಿಎಂಪಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 03, 2021 | 3:52 PM

Share

ಬೆಂಗಳೂರು: ಒಮಿಕ್ರಾನ್ ಸೋಂಕಿತನ ಸಂಪರ್ಕದಲ್ಲಿದ್ದ ವೈದ್ಯರಿಗೆಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಅವರ ಪತ್ನಿ ಹಾಗೂ ಮಾವನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇಬ್ಬರ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಲಾಗಿದೆ. ಬಸವನಗುಡಿಯ ರತ್ನವಿಲಾಸ್ ರಸ್ತೆಯಲ್ಲಿರುವ ವೈದ್ಯರ ಮನೆಯಲ್ಲಿನ ಒಟ್ಟು ಐವರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಒಬ್ಬರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನಿಬ್ಬರು ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಬಿಬಿಎಂಪಿ ಮನೆಯನ್ನು ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿದ್ದು, ರೆಡ್ ಟೇಪ್ ಹಾಕಿ ಕಂಟೇನ್ಮೆಂಟ್ ಮಾಡಲಾಗಿದೆ. 

ಕೋರಮಂಗಲದಲ್ಲಿ ‘ಒಮಿಕ್ರಾನ್’ ಪ್ರಾಥಮಿಕ ಸಂಪರ್ಕಿತ ವೈದ್ಯರ ಮನೆ ಸೀಲ್​​ಡೌನ್: ಒಮಿಕ್ರಾನ್’ ಸೋಂಕಿತ ವೈದ್ಯರ ಪ್ರಾಥಮಿಕ ಸಂಪರ್ಕಿತ ಮತ್ತೋರ್ವ ವೈದ್ಯರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಮನೆಯನ್ನು ಸೀಲ್​​ಡೌನ್ ಮಾಡಲಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಮನೆಯನ್ನು ಸೀಲ್​​ಡೌನ್ ಮಾಡಲಾಗಿದೆ. ಒಮಿಕ್ರಾನ್ ‌ಸೋಂಕಿತ ವೈದ್ಯನ ಪ್ರಾಥಮಿಕ ಸಂಪರ್ಕಕ್ಕೆ ಮತ್ತೋರ್ವರು ವೈದ್ಯರು ಬಂದಿದ್ದರು. ಪ್ರಾಥಮಿಕ ಸಂಪರ್ಕಿತ ವೈದ್ಯರಿಗೂ ಕೊರೊನಾ ಪಾಸಿಟಿವ್ ಆಗಿದ್ದು, ಅವರ ಪತ್ನಿ ದಂತವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋರಮಂಗಲದ ಮನೆಯಲ್ಲಿ ದಂಪತಿ ಹಾಗೂ ಮಕ್ಕಳಿಬ್ಬರು ವಾಸವಾಗಿದ್ದಾರೆ. ನಿನ್ನೆ ನಡೆಸಿದ RAT ಟೆಸ್ಟ್​ನಲ್ಲಿ ಮನೆಯ ಸದಸ್ಯರ ವರದಿ ನೆಗೆಟಿವ್ ಬಂದಿದೆ. ಇಂದು RTPCR ಟೆಸ್ಟ್ ರಿಪೋರ್ಟ್ ಬರಲಿದೆ. ಪ್ರಸ್ತುತ ಮನೆಯನ್ನು ಸೀಲ್​ಡೌನ್ ಮಾಡಲಾಗಿದೆ.

ವ್ಯಾಕ್ಸಿನೇಷನ್, ಮುಂಚಿನ ಸೋಂಕುಗಳ ಕಾರಣದಿಂದಾಗಿ ಒಮಿಕ್ರಾನ್ ತೀವ್ರತೆ ಕಡಿಮೆ: ಆರೋಗ್ಯ ಸಚಿವಾಲಯ ಕೊವಿಡ್ ಲಸಿಕೆ ನೀಡುವಿಕೆಯ ವೇಗ ಮತ್ತು ಡೆಲ್ಟಾ ರೂಪಾಂತರಕ್ಕೆ ಹೆಚ್ಚಿನ ಒಗ್ಗಿಕೊಳ್ಳುವಿಕೆಯಿಂದಾಗಿ ಭಾರತದಲ್ಲಿ ಒಮಿಕ್ರಾನ್ ರೂಪಾಂತರಿಯಿಂದ ಬರುವ ಕೊರೊನಾವೈರಸ್ ಕಾಯಿಲೆಯ ತೀವ್ರತೆಯು ಕಡಿಮೆಯಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಹೊಸ ರೂಪಾಂತರವು ಭಾರತ ಸೇರಿದಂತೆ ಹೆಚ್ಚಿನ ದೇಶಗಳಿಗೆ ಹರಡುವ ಸಾಧ್ಯತೆಯಿದೆ. ಆದರೆ ಸೋಂಕಿನ ಹೆಚ್ಚಳದ ಪ್ರಮಾಣ ಮತ್ತು ತೀವ್ರತೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:

New Guidelines: ಪೋಷಕರು 2 ಡೋಸ್ ಲಸಿಕೆ ಪಡೆದಿದ್ದರೆ ಮಾತ್ರ ಮಕ್ಕಳಿಗೆ ಶಾಲೆ ಪ್ರವೇಶ

ತಮಿಳುನಾಡಿನಲ್ಲಿ ರಿಸ್ಕ್ ದೇಶಗಳಿಂದ ಬಂದ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢ