ಬೆಂಗಳೂರು, ಜುಲೈ 22: ಇಷ್ಟ ಬಂದ ಕಡೆ ಡ್ಯೂಟಿ ಹಾಗೂ ರಜೆ ನೀಡಲು ಲಂಚ ಕೇಳುತ್ತಿರುವ ಆರೋಪ ಕೆಎಸ್‌ಆರ್‌ಪಿ (KSRP) ಹಿರಿಯ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ. ಕೂಡ್ಲು ಬಳಿಯ 9ನೇ ಬ್ಯಾಚ್‌ನ ಕೆಎಸ್‌ಆರ್‌ಪಿ ಹಿರಿಯ ಅಧಿಕಾರಿಗಳ ಅಧಿಕಾರ ದುರುಪಯೋಗದ ವಿರುದ್ಧ ಬೇಸತ್ತು ಹೆಡ್‌ಕಾನ್ಸ್‌ಟೇಬಲ್ ಓಂಕಾರಪ್ಪ ಅವರು ಎಡಿಜಿಪಿ (ADGP) ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.
ಕೂಡ್ಲು ಬಳಿಯ 9ನೇ ಬ್ಯಾಚ್‌ನ KSRP ಆರ್‌ಪಿಐ ರವಿ, ಆರ್‌ಎಸ್‌ಐ ಮಹಂತೇಶ್ ಬನ್ನಪ್ಪ ಗೌಡರ್ ಅವರು ಬೇಕಾದಕಡೆ ಡ್ಯೂಟಿ ನೀಡಲು ತಿಂಗಳಿಗೆ 10 ಸಾವಿರ ಲಂಚ ಕೇಳುತ್ತಿದ್ದಾರೆ. ರಜೆ ನೀಡಲು 500 ರೂ. ಕೇಳುತ್ತಿದ್ದಾರೆ ಎಂದು ಆರೋಪಿಸಿ ಹೆಡ್ ಕಾನ್ಸ್ಟೇಬಲ್ ಓಂಕಾರಪ್ಪ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ನೈಟ್ ಡ್ಯೂಟಿ ಅಥವಾ ಡೇ ಡ್ಯೂಟಿ ಬೇಕೆಂದರೂ ಲಂಚ ನೀಡಬೇಕು. ಈ ಹಣವನ್ನು ಗೂಗಲ್‌ಪೇ, ಫೋನ್‌ಪೇ ಮೂಲಕ ತೆಗೆದುಕೊಳ್ಳುತ್ತಿದ್ದಾರೆ ಎಂದು ಓಂಕಾರಪ್ಪ ಆರೋಪಿಸಿದ್ದಾರೆ.
ಇದನ್ನೂ ಓದಿ: Kolar News: ಮೇಲಾಧಿಕಾರಿಗಳಿಂದ ಕಿರುಕುಳ ಆರೋಪ; ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಆತ್ಮಹತ್ಯೆಗೆ ಶರಣು
ಇತ್ತೀಚೆಗಷ್ಟೇ, ಹಿರಿಯ ಪೊಲೀಸ್ ಅಧಿಕಾರಿಗಳು, ಮೇಲಧಿಕಾರಿಗಳು ನಮ್ಮನ್ನು ಹಫ್ತಾ ವಸೂಲಿ ಮಾಡಲು ಕಳುಹಿಸುತ್ತಾರೆ ಎಂದು ಕಲಬುರಗಿಯ ಪೊಲೀಸ್ ಕಾನ್ಸ್ಟೇಬಲ್ಗಳು ಆರೋಪಿಸಿದ್ದರು. ಅಧಿಕಾರಿಗಳ ನಡೆಯಿಂದ ಬೇಸತ್ತು ಕಲಬುರಗಿ ನಗರದ ಸಂಚಾರಿ ಠಾಣೆ 1 ರಲ್ಲಿನ ಸಿಬ್ಬಂದಿ ಚಂದ್ರಕಾಂತ್ ಆತ್ಮಹತ್ಯೆಗೆ ಯತ್ನಿಸಿದ್ದರು. ಅಷ್ಟೇ ಅಲ್ಲದೆ, ಕಲಬುರಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ತಮಗೆ ಬೇಡವಾದ 59 ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ ಅಂತಾನೂ ಕಾನಸ್ಟೇಬಲ್ಗಳು ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Sat, 22 July 23