ಗೋಲ್​ಮಾಲ್: ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಅನರ್ಹ ಶಿಕ್ಷಕರ ನೇಮಕ

ಕಳಪೆ ಫಲಿತಾಂಶ ಬಂದ ಹಿನ್ನೆಲೆ ನಡೆಸಿದ ತನಿಖೆ ವೇಳೆ ಬಿಬಿಎಂಪಿ ಶಾಲಾ ಕಾಲೇಜಿನಲ್ಲಿ ಶಿಕ್ಷಕ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಇಲ್ಲದವರನ್ನು ಶಿಕ್ಷಕರನ್ನಾಗಿ ನೇಮಕಾತಿ ಮಾಡಿರುವುದು ತಿಳಿದುಬಂದಿದೆ.

ಗೋಲ್​ಮಾಲ್: ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಅನರ್ಹ ಶಿಕ್ಷಕರ ನೇಮಕ
ಬಿಬಿಎಂಪಿ
Follow us
Rakesh Nayak Manchi
|

Updated on: Jun 04, 2023 | 11:47 AM

ಬೆಂಗಳೂರು: ಕಳಪೆ ಫಲಿತಾಂಶ ಬಂದ ಹಿನ್ನೆಲೆ ನಡೆಸಿದ ತನಿಖೆ ವೇಳೆ ಬಿಬಿಎಂಪಿ (BBMP) ಶಾಲಾ ಕಾಲೇಜಿನಲ್ಲಿ ಶಿಕ್ಷಕ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಇಲ್ಲದವರನ್ನು ಶಿಕ್ಷಕರನ್ನಾಗಿ ನೇಮಕಾತಿ (Teachers Recruitment) ಮಾಡಿರುವುದು ತಿಳಿದುಬಂದಿದೆ. ಹೊರಗುತ್ತಿಗೆ ಶಿಕ್ಷಕರ ನೇಮಕಾತಿಯಲ್ಲಿ ಬಾರಿ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಲಂಚಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಶಿಕ್ಷಣ ವ್ಯವಸ್ಥೆಯನ್ನೇ ಮಾರಿಕೊಂಡರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಅನರ್ಹ ಶಿಕ್ಷಕರ ನೇಮಕಾತಿಯಲ್ಲಿ ಬಾರಿ ಅವ್ಯವಹರ ನಡೆದಿರುವ ಸಾಧ್ಯತೆಗಳಿವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಹಾಗೂ ಎಸ್​ಎಸ್​ಎಲ್​ಸಿ ಕಳೆಪೆ ಪರೀಕ್ಷಾ ಫಲಿತಾಂಶ ಬಂದ ಹಿನ್ನಲೆ ಬಿಬಿಎಂಪಿ ಶಾಲೆಗಳ ಸಮಗ್ರ ವರದಿ ನೀಡುವಂತೆ ಬಿಬಿಎಂಪಿ ಅಯುಕ್ತ ತುಷಾರ್ ಗಿರಿನಾಥ್ ಅದೇಶ ಹೊರಡಿಸಿದ್ದರು. ಅದೇಶ ಬೆನ್ನಲ್ಲೇ ಶಿಕ್ಷಕರ ವಿದ್ಯಾರ್ಹತೆ ಬಗ್ಗೆ ತನಿಖೆ ಮಾಡಿದ್ದ ಪಾಲಿಕೆಗೆ ಶಿಕ್ಷಕರ ವಿದ್ಯಾರ್ಹತೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ, ನಾಗರಿಕರು ನೋಂದಣಿ ಯಾವಾಗ ಮಾಡಿಕೊಳ್ಳಬಹುದು? ಇಲ್ಲಿದೆ ಮಾಹಿತಿ

ಪಾಲಿಕೆ ಹಿರಿಯ ಅಧಿಕಾರಿಗಳು ನಡೆಸಿರೋ ತನಿಖ ವರದಿಯಲ್ಲಿ ಶಿಕ್ಷಕರ ಬಂಡವಾಳ ಬಯಲಾಗಿದ್ದು, ಶಾಲಾ ಕಾಲೇಜುಗಳಿಗೆ ನೇಮಕ ಮಾಡಿಕೊಂಡ ಸುಮಾರು 181 ಶಿಕ್ಷಕರಿಗೆ ಶಿಕ್ಷಕರಾಗುವ ಅಹರ್ತೆ ಇಲ್ಲವಂತೆ. ಮಕ್ಕಳ ಶಿಕ್ಷಣ ಗುಣಮಟ್ಟ ಕಡಿಮೆ ಅಗಲು ಈ ಶಿಕ್ಷಕರೇ ನೇರ ಕಾರಣ ಅಂತಾ ವರದಿಯಲ್ಲಿ ತಿಳಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಹರ್ತೆ ಇಲ್ಲದ ಶಿಕ್ಷಕರ ವಿವರ

  • ಶಿಶುವಿಹಾರ ಶಿಕ್ಷಕರು: 48
  • ಪ್ರಾಥಮಿಕ ಶಾಲೆ ಶಿಕ್ಷಕರು: 70
  • ಪೌಢ ಶಾಲೆ ಶಿಕ್ಷಕರು: 04
  • ಗಣಕಯಂತ್ರ ಶಿಕ್ಷಕರು: 29
  • ಪದವಿ ಕಾಲೇಜು ಶಿಕ್ಷಕರು: 17
  • ಪದವಿ ಪೂರ್ವ ಕಾಲೇಜು ಶಿಕ್ಷಕರು: 13

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ