ಬೆಂಗಳೂರು, ನ.16: ಗೊಂಬೆ ಮಾಸ್ಕ್ ಧರಿಸಿಕೊಂಡು ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರು ಮತ್ತು ಬೈಕ್ಗಳನ್ನು ಧ್ವಂಸ ಮಾಡಿದ್ದ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬೆಂಗಳೂರು (Bengaluru) ನಗರದ ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏರಿಯಾದಲ್ಲಿ ಹವಾ ಇಡಲು ಲಗ್ಗೆರೆ ಬಳಿ ಬೈಕ್ನಲ್ಲಿ ಬಂದಿದ್ದ ಪುಂಡರ ಗ್ಯಾಂಗ್, 15 ಕಾರು ಹಾಗೂ ಬೈಕ್ಗಳನ್ನು ಪೈಡಿಗೈದಿದ್ದರು. ಕಂಠ ಪೂರ್ತಿ ಕುಡಿದು ಬೈಕ್ಗಳಲ್ಲಿ ಬಂದು ತೂರಾಡುತ್ತಾ ಮನಬಂದಂತೆ ರಾಡ್ ಮತ್ತು ಲಾಂಗ್ಗಳಿಂದ ಕಾರುಗಳ ಗ್ಲಾಸ್ ಪುಡಿ ಮಾಡಿ ಪರಾರಿಯಾಗಿದ್ದರು.
ಸ್ಥಳಕ್ಕೆ ಶಾಸಕ ಮುನಿರತ್ನ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಇತ್ತ, ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ರಾಜಗೋಪಾಲನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಸದ್ಯ, ಪಕ್ಕದ ಏರಿಯಾದಿಂದ ಲಗ್ಗೆರೆಗೆ ಬಂದು ಕೃತ್ಯ ಎಸಗಿ ಬೇರೆಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಒಂದು ಚೊಂಬಿನ ಕಥೆ! ಕಳ್ಳತನದ ಕೇಸ್ ಅಂತ ಹೋದ ಹೊಯ್ಸಳ ಪೊಲೀಸರು ಕಕ್ಕಾಬಿಕ್ಕಿಯಾದರು!
ಆನೇಕಲ್: ಶೆಟರ್ ಮುರಿದು ಪ್ರಜ್ವಲ್ ಬಾರ್ ಒಳಗೆ ನುಗ್ಗಿದ ಕಳ್ಳರು, ಹಣ ದೋಚಿ ಪರಾರಿಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ತಿರುಪಾಳ್ಯದಲ್ಲಿ ನಡೆದಿದೆ. ನಿನ್ನೆ ರಾತ್ರಿ ಮೂರು ಜನ ಖದೀಮರು ಬಾರ್ಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಕಳೆದ ರಾತ್ರಿ ಬಾರ್ ಬಳಿ ಬಂದಿದ್ದ ಮೂವರ ಪೈಕಿ ಇಬ್ಬರು ಹೊರಗಡೆ ಮಾಹಿತಿದಾರರಾಗಿ ನಿಂತುಕೊಂಡು ಮತ್ತೊಬ್ಬ ಬಾರ್ ಒಳಗೆ ನುಗ್ಗಿ ಹಣ ದೋಚಿ ಪರಾರಿಯಾಗಿದ್ದಾರೆ. ಬಾರ್ನಲ್ಲಿ 6 ಲಕ್ಷಕ್ಕೂ ಹೆಚ್ಚು ನಗದು ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ, ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Thu, 16 November 23