ಒಂದು ಚೊಂಬಿನ ಕಥೆ! ಕಳ್ಳತನದ ಕೇಸ್ ಅಂತ ಹೋದ ಹೊಯ್ಸಳ ಪೊಲೀಸರು ಕಕ್ಕಾಬಿಕ್ಕಿಯಾದರು!
ಪಕ್ಕದ ಮನೆಯವನು ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಹೋಗಿದ್ದರಿಂದ ಚೆಂಬು ಕದ್ದಿದ್ದ ವ್ಯಕ್ತಿ ಅದನ್ನು ವಾಪಸ್ಸು ಇಟ್ಟುಬಿಟ್ಟಿದ್ದಾನೆ. ಈ ಬಗ್ಗೆ ಕಂಟ್ರೋಲ್ ರೂಂ ನವರು ಹೊಯ್ಸಳ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಚೆಂಬಿನ ಕತೆ ವಿವರಿಸಿದ್ದಾರೆ. ಸದ್ಯ ಹೊಯ್ಸಳ ಹಾಗೂ ಕಂಟ್ರೋಲ್ ರೂಂ ಸಿಬ್ಬಂದಿ ನಡುವಿನ ಆಡಿಯೋ ವೈರಲ್ ಆಗಿದೆ.
ಬೆಂಗಳೂರು: ಕಳ್ಳತನ ಕೇಸ್ ಅಂತ ಹೋದ ಹೊಯ್ಸಳ ಪೊಲೀಸರು (Hoysala police) ಕಕ್ಕಾಬಿಕ್ಕಿಯಾಗಿದ್ದಾರೆ. ಕಳ್ಳತನ ಆಗಿದೆ ಅಂತ ಕಂಟ್ರೋಲ್ ರೂಂಗೆ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಈ ವೇಳೆ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಫುಲ್ ಗಲಿಬಿಲಿಗೊಂಡಿದ್ದಾರೆ. ಕಸಿವಿಸಿ ಅನುಭವಿಸಿದ್ದಾರೆ. ಸ್ಥಳಕ್ಕೆ ಹೋದ ಪೊಲೀಸರಿಗೆ ಟಾಯ್ಲೆಟ್ ನಲ್ಲಿ ಬಳಸುವ ಚೆಂಬು ಕಳ್ಳತನ (Theft) ಆಗಿದೆ (A mug story) ಎಂದು ಆ ವ್ಯಕ್ತಿ ಮಾಹಿತಿ ನೀಡಿದ್ದಾರೆ.
ಪಕ್ಕದ ಮನೆಯವನು ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಕುತೂಹಲದ ಸಂಗತಿಯೆಂದರೆ ಪೊಲೀಸರು ಹೋಗಿದ್ದರಿಂದ ಚೆಂಬು ಕದ್ದಿದ್ದ ವ್ಯಕ್ತಿ ಅದನ್ನು ವಾಪಸ್ಸು ಇಟ್ಟುಬಿಟ್ಟಿದ್ದಾನೆ. ಈ ಬಗ್ಗೆ ಕಂಟ್ರೋಲ್ ರೂಂ ನವರು ಹೊಯ್ಸಳ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಚೆಂಬಿನ ಕತೆ ವಿವರಿಸಿದ್ದಾರೆ. ಸದ್ಯ ಹೊಯ್ಸಳ ಹಾಗೂ ಕಂಟ್ರೋಲ್ ರೂಂ ಸಿಬ್ಬಂದಿ ನಡುವಿನ ಆಡಿಯೋ ವೈರಲ್ ಆಗಿದೆ.
ಮನೆಗಳ್ಳತನ, ಬೈಕ್ ಕಳ್ಳತನ ಮಾಡುತ್ತಿದ್ದ ಕಾರ್ತಿಕ್ನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿಯಿದ್ದ 1 ಬೈಕ್, ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದಾರೆ.
Also read: ಬೆಂಗಳೂರಿನ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
ಮನೆ ಕೆಲಸ ಮಾಡ್ತಿದ್ದ ಮನೆಯಲ್ಲೆ ಕಳ್ಳತನ ಮಾಡಿದ್ದಾಕೆ ಅರೆಸ್ಟ್ ಆಗಿದ್ದಾಳೆ. ಲಕ್ಕಮ್ಮ ಬಂಧಿತ ಅರೋಪಿ ಮಹಿಳೆ. ರಂಜಿತಾ ಎಂಬುವವರ ಮನೆಯಲ್ಲಿ ಕೆಲಸ ಮಾಡ್ತಿದ್ದ ಆರೋಪಿಯು ಮನೆಯ ಕಬೋರ್ಡ್ ನಲ್ಲಿ ಇದ್ದ ಚಿನ್ನದ ಆಭರಣ ಕಳ್ಳತನ ಮಾಡಿದ್ದಳು. ತಮ್ಮ ಸರವನ್ನು ಬೇರೊಬ್ಬರಿಗೆ ನೀಡಲು ಕಬೋರ್ಡ್ ತೆರೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಂಧಿತ ಮಹಿಳೆಯಿಂದ 374 ಚಿನ್ನ ವಶಕ್ಕೆ ಪಡೆಯಲಾಗಿದೆ. ಕಾಮಾಕ್ಷಿ ಪಾಳ್ಯ ಪೊಲೀಸರು ಸದರಿ ಅರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಕೆಂಗೇರಿ ಪೊಲೀಸರಿಂದ ಮನೆಕಳ್ಳತನ ಮತ್ತು ಬೈಕ್ ಕಳ್ಳತನ ಮಾಡ್ತುದ್ದ ಅರೋಪಿ ಅರೆಸ್ಟ್: ಕೆಂಗೇರಿ ಪೊಲೀಸರು ಮನೆಗಳ್ಳತನ ಮತ್ತು ಬೈಕ್ ಕಳ್ಳತನ ಮಾಡ್ತಿದ್ದ ಅರೋಪಿಯೊಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಕಾರ್ತಿಕ್ ಅಲಿಯಾಸ್ ಹಂದಿ ಬಂಧಿತ ಅರೋಪಿ. ಅರೋಪಿ ಬಳಿಯಿಂದ ಒಂದು ಸ್ಕೂಟರ್ ಮತ್ತು ಎರಡೂ ವರೆ ಲಕ್ಷ ಮೌಲ್ಯದ ಚಿನ್ನದ ಆಭರಣ ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ