ಆಗಸ್ಟ್​​​​ ಮಳೆಯಿಂದ ರೈತರಿಗೆ ಸಂಕಷ್ಟ: ಚಳಿಗಾಲದಲ್ಲಿ ಬೆಂಗಳೂರಿಗರಿಗೆ ಶಾಕ್​​​ ಕೊಟ್ಟ ಅವರೆಕಾಯಿ

ಬೆಂಗಳೂರಿನಲ್ಲಿ ಅವರೆಕಾಯಿ ಬೆಲೆ ಗಗನಕ್ಕೇರಿದ್ದು, ಚಳಿಗಾಲದಲ್ಲಿ ಜನರಿಗೆ ಹೊರೆಯಾಗಿದೆ. ಅನಿಯಮಿತ ಮಳೆ, ಆಗಸ್ಟ್ ತಿಂಗಳ ಮಳೆಯಿಂದ ಬೆಳೆ ನಷ್ಟವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇದರಿಂದ ಮಾರುಕಟ್ಟೆಗೆ ಅವರೆಕಾಯಿ ಸರಬರಾಜು ಕಡಿಮೆಯಾಗಿ ಬೆಲೆ ಏರಿದೆ. ಪ್ರತಿ ಕೆ.ಜಿ.ಗೆ 80 ರೂ.ನಿಂದ 400 ರೂ.ವರೆಗೂ ತಲುಪಿದೆ. ಇಳುವರಿ ವಿಳಂಬ, ಬೆಳೆ ಕೈಬಿಟ್ಟ ರೈತರು ಪರಿಸ್ಥಿತಿಗೆ ಕಾರಣ.

ಆಗಸ್ಟ್​​​​ ಮಳೆಯಿಂದ ರೈತರಿಗೆ ಸಂಕಷ್ಟ: ಚಳಿಗಾಲದಲ್ಲಿ ಬೆಂಗಳೂರಿಗರಿಗೆ ಶಾಕ್​​​ ಕೊಟ್ಟ ಅವರೆಕಾಯಿ
ಸಾಂದರ್ಭಿಕ ಚಿತ್ರ

Updated on: Dec 03, 2025 | 12:32 PM

ಬೆಂಗಳೂರು, ಡಿ.3: ಬೆಂಗಳೂರಿನಲ್ಲಿ (Bengaluru) ವಾತಾವರಣ ಬದಲಾಗಿದೆ. ಪ್ರಸುತ್ತ ಚಳಿಯ ವಾತಾರಣದಲ್ಲಿ ಬೆಂಗಳೂರಿನ ಜನ ವಾಸಿಸುತ್ತಿರುವ ಕಾರಣ ಅವರೆಕಾಯಿ ಈ ಋತುಮಾನದಲ್ಲಿ ಒಳ್ಳೆಯದು. ಆದರೆ ಇದರ ಬೆಲೆ ಏರಿಕೆಯಾಗಿದೆ. ಇದರಿಂದ ಬೆಂಗಳೂರಿನ ಜನರ ಅವರೆಕಾಯಿಯನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಅನಿಯಮಿತ ಮುಂಗಾರು ಮಳೆಯಿಂದಾಗಿ ಅವರೆಕಾಯಿ ಬೆಳಗಾರರು ತುಂಬಾ ಸಂಕಷ್ಟವನ್ನು ಅನುಭವಿಸಿದ್ದಾರೆ. ಈ ಕಾರಣದಿಂದ ಅವರೆಕಾಯಿ ಬೆಲೆ ದುಬಾರಿಯಾಗಿದೆ. ಈಶಾನ್ಯ ಮಾನ್ಸೂನ್ ಮಳೆ ಹಾಗೂ ಆಗಸ್ಟ್​​ ತಿಂಗಳಿನಲ್ಲಿ ಆಗಿರುವ ಮಳೆಯಿಂದ ಇಳುವರಿಗೆ ತುಂಬಾ ಸಂಕಷ್ಟ ಎದುರಾಗಿದೆ ಎಂದು ರೈತರು ಹೇಳಿದ್ದಾರೆ. ಆದರೆ ಇದರ ನಡುವೆ ಒಂದು ಖುಷಿ ಸಂಗತಿ ಕೂಡ ಇದೆ. ಪ್ರಸುತ್ತ ಋತುಮಾನದಲ್ಲಿ ಅಂದರೆ ಗಾಳಿ ಹಾಗೂ ಬೆಳಗಿನ ಇಬ್ಬನಿಯಿಂದ ಈ ಬೆಳೆ ಮತ್ತೆ ಚೇರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬೆಂಗಳೂರಿಗರು ಈ ವರ್ಷಪೂರ್ತಿ ಅವರೆಕಾಯಿ ಬೆಲೆ ಏರಿಕೆಯನ್ನು ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿವರ್ಷ ನವೆಂಬರ್‌ನಿಂದ ಸರಬರಾಜುಗಳು ಬರಲು ಪ್ರಾರಂಭವಾಗುತ್ತದೆ ಮತ್ತು ಸಂಕ್ರಾಂತಿಯ ನಂತರವೂ ಅದು ಮುಂದುವರಿಯುತ್ತದೆ. ಈ ಹೊತ್ತಿಗೆ, ಅವರೆಕಾಯಿ ಪ್ರತಿ ಕಿಲೋಗೆ 50 ರೂ.ನಿಂದ 40 ರೂ.ಗೆ ಇಳಿದಿರಬೇಕಿತ್ತು .ಆದರೆ ಅದು ಇನ್ನೂ 80 ರೂ. ನಲ್ಲಿಯೇ ಇದೆ ಎಂದು ಮಲ್ಲೇಶ್ವರದ ಮಾರಾಟಗಾರರೊಬ್ಬರು ತಿಳಿಸಿದ್ದಾರೆ. ಇನ್ನು ಸಿಪ್ಪೆ ಸುಲಿದ ಅವರೆಗೆ ಕಿಲೋಗೆ 400 ರೂ. ಆಗಿದೆ. ಇದರಿಂದ ರೈತರು ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಋತುಮಾನಗಳಲ್ಲಿ ಬೆಳೆ ನಷ್ಟವಾದ ಕಾರಣ ಈ ವರ್ಷ ಬೆಳೆ ಕೈಬಿಟ್ಟೆ ಎಂದು ಮಾಗಡಿಯ ಅವರೆಕಾಯಿ ಕೃಷಿಕರೊಬ್ಬರು ಹೇಳಿದ್ದಾರೆ. ಅವರೆಕಾಯಿ ಬಿತ್ತನೆಗೆ ಆಗಸ್ಟ್ ತಿಂಗಳು ಉತ್ತಮ, ಆದರೆ ಈ ವರ್ಷ ನಿರಂತರ ಮಳೆಯಿಂದ ಎಲ್ಲವೂ ಕೊಚ್ಚಿಹೋಗಿದೆ ಎಂದು ಚಿಕ್ಕಬಳ್ಳಾಪುರದ ರೈತ ಮುಖಂಡರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: “ಬೆಂಗಳೂರಿನಲ್ಲಿ ಹೊಸ ಫ್ಲಾಟ್ ಬಾಡಿಗೆ ಹಗರಣ”: 15 ಸಾವಿರ ರೂ.ಗೆ 2BHK ಅಪಾರ್ಟ್‌ಮೆಂಟ್​​, ಇದು ನಂಬಲು ಸಾಧ್ಯವೇ?

ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ. ರೈತರು ಮಳೆಯ ಸಮಯದಲ್ಲಿ ಬಿತ್ತನೆ ಮಾಡಿದ್ದಾರೆ. ಇದರಿಂದ ಈ ಪರಿಸ್ಥಿತಿ ಎದುರಿಸಬೇಕಿದೆ. ಮಳೆ ನಿಂತ ಮೇಲೆ ಬಿತ್ತನೆ ಮಾಡಬೇಕಿತ್ತು. ಇದರಿಂದಾಗಿ ಕೊಯ್ಲು ವಿಳಂಬವಾಗಿದೆ ಎಂದು ಹೇಳಿದರು. ಹಾಪ್‌ಕಾಮ್ಸ್ ನಿರ್ದೇಶಕರ ಪ್ರಕಾರ, ಬೆಂಗಳೂರು ಈಗ ಹುಣಸೂರು ಪ್ರದೇಶದ ಉತ್ಪನ್ನಗಳನ್ನು ಅವಲಂಬಿಸಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಿಂದ ಸರಬರಾಜುಗಳು ಇದೀಗ ಬರಲು ಪ್ರಾರಂಭಿಸಿವೆ. ಮುಂದಿನ ದಿನಗಳ ಋತುಮಾನದಲ್ಲಿ ಇದರ ಬೆಳೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ