
ಬೆಂಗಳೂರು, ಜ.5: ಬೆಂಗಳೂರಿನಲ್ಲಿ ಸಂಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕಿಗೆ ಬರುತ್ತಿದೆ. ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಇಲಾಖೆ ಒಂದಲ್ಲ ಒಂದು ರೀತಿಯಲ್ಲಿ ಎಚ್ಚರಿಕೆಯನ್ನು ನೀಡುತ್ತಿದ್ದರೂ ಅದನ್ನು ಲೆಕ್ಕಿಸದೆ ಜನ ಪೊಲೀಸರ ಕಣ್ತಪ್ಪಿಸಿ ಸಂಚಾರ ಉಲ್ಲಂಘನೆ ಮಾಡುತ್ತಾರೆ. ಆದರೆ ಇನ್ಮುಂದೆ ಇದು ಸಾಧ್ಯವಿಲ್ಲ, ಹೊಸ ತಂತ್ರಜ್ಞಾನವೊಂದು ಪರಿಚಯಿಸಿಲಾಗಿದೆ. ನಗರದಲ್ಲಿನ ಸಂಚಾರ ಶಿಸ್ತಿನ ಕಳಪೆ ಸ್ಥಿತಿಯಿಂದ ಬೇಸತ್ತ ಬೆಂಗಳೂರು ಮೂಲದ ತಂತ್ರಜ್ಞನೊಬ್ಬರು ಕೃತಕ ಬುದ್ಧಿಮತ್ತೆ ಮೂಲಕ ಹೆಲ್ಮೆಟ್ನ್ನು (AI helmet) ಟ್ರಾಫಿಕ್ ಪೊಲೀಸ್ ಸಾಧನವಾಗಿ ಪರಿವರ್ತನೆ ಮಾಡಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾನು ಪ್ರತಿದಿನ ಕೆಲವೊಂದು ಜನ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಮಾಡುವುದನ್ನು ನೋಡಿದ್ದೇನೆ. ಇದನ್ನು ನೋಡಿ ನೋಡಿ ಸಾಕಾಗಿದೆ. ಅದಕ್ಕಾಗಿ ನನ್ನ ಹೆಲ್ಮೆಟ್ನ್ನು ಎಐ ಸಾಧನವಾಗಿ ಪರಿವರ್ತನೆ ಮಾಡಿ, ಈ ಮೂಲಕ ಪೊಲೀಸರಿಗೆ ಸಂಚಾರ ನಿಯಮ ಉಲ್ಲಂಘಿಸಿದವರ ಮಾಹಿತಿ ನೀಡಲು ಸಹಾಯವಾಗುತ್ತದೆ ಎಂದು ಪಂಕಜ್ ತನ್ವರ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಎಐ ತಂತ್ರಜ್ಞಾನ ನೈಜ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದವರ ವಾಹನ ಹಾಗೂ ಮುಖವನ್ನು ಸೆರೆಹಿಡಿಯುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಳೆದ ವರ್ಷಕ್ಕಿಂತ ಈ ವರ್ಷ ಕುಸಿಯಲಿದೆಯೇ ಬೆಂಗಳೂರಿನ ಏರ್ ಕ್ವಾಲಿಟಿ?
i was tired of stupid people on road so i hacked my helmet into a traffic police device 🚨
while i ride, ai agent runs in near real time, flags violations, and proof with location & no plate goes straight to police.
blr people – so now ride safe… or regret it. pic.twitter.com/lWaRO01Jaq
— Pankaj (@the2ndfloorguy) January 3, 2026
ಈ ಸಾಧನವೂ ಸ್ಥಳ ಮತ್ತು ನಂಬರ್ ಪ್ಲೇಟ್‌ನೊಂದಿಗೆ ನೇರವಾಗಿ ಪೊಲೀಸರಿಗೆ ಸಂಪರ್ಕವನ್ನು ಸಾಧಿಸುತ್ತದೆ. ಬೆಂಗಳೂರಿನ ಜನರೇ, ಈಗ ಸುರಕ್ಷಿತವಾಗಿ ಸವಾರಿ ಮಾಡಿ ಎಂದು ಈ ಪೋಸ್ಟ್ನಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಇದೊಂದು ಉತ್ತಮ ತಂತ್ರಜ್ಞಾನ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇಂತಹ ತಂತ್ರಜ್ಞಾನಗಳು ಬರಬೇಕು. ಇದನ್ನು ಸರ್ಕಾರ ಬಳಸಿಕೊಂಡು ಸಂಚಾರ ನಿಮಯ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ