Bengaluru Air Quality: ಕಳೆದ ವರ್ಷಕ್ಕಿಂತ ಈ ವರ್ಷ ಕುಸಿಯಲಿದೆಯೇ ಬೆಂಗಳೂರಿನ ಏರ್ ಕ್ವಾಲಿಟಿ?
ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿತವಾಗಿದೆ. 2025ರಲ್ಲಿ ಕಳೆದ ನಾಲ್ಕು ವರ್ಷದಲ್ಲೇ ಅತೀ ಕಳಪೆ ಏರ್ ಕ್ವಾಲಿಟಿ ದಾಖಲಾಗಿದೆ. ಹೀಗೆ ಮುಂದುವರೆದರೆ ಈ ವರ್ಷವೂ ಗಾಳಿಯ ಗುಣಮಟ್ಟ ಇನ್ನಷ್ಟು ಕುಸಿಯಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸೂಚನೆ ನೀಡಿದ್ದಾರೆ.

ಬೆಂಗಳೂರು, ಜನವರಿ 05: ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (Bengaluru Air Quality) ಇಂದಿನ ಗಾಳಿಯ ಗುಣಮಟ್ಟ 175 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಇಂದೂ PM2.5 82 ಇದ್ದರೆ, PM10 108 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ
ಈ ವರ್ಷ ಇನ್ನೂ ಹದಗೆಡಬಹುದು ಗಾಳಿಯ ಗುಣಮಟ್ಟ
ಇತ್ತೀಚಿನ ವರದಿಗಳ ಪ್ರಕಾರ, ಕಲ್ಯಾಣ ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು (AQI) ಆಗಾಗ್ಗೆ 170 ದಾಟುತ್ತಿದ್ದು, ಇದು ನಗರದಲ್ಲೇ ಅತ್ಯಂತ ಕಳಪೆ ಮಟ್ಟದ ಗಾಳಿ ಇರುವ ಪ್ರದೇಶಗಳಲ್ಲಿ ಒಂದಾಗಿದೆ. ವಾಹನ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಸಿಲ್ಕ್ ಬೋರ್ಡ್ ಜಂಕ್ಷನ್, ನೈಟ್ರೋಜನ್ ಡೈಆಕ್ಸೈಡ್ (NO2) ಮತ್ತು ಧೂಳಿನ ಕಣಗಳ ಅತಿ ದೊಡ್ಡ ಕೇಂದ್ರವಾಗಿದೆ. ಹೀಗಿರುವಾಗ ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಗಾಳಿಯ ಗುಣಮಟ್ಟ ಇನ್ನೂ ಹದಗೆಡಬಹುದೆಂದು ತಜ್ಞರು ಹೇಳುತ್ತಾರೆ. ಸಾರ್ವಜನಿಕರು ತಮ್ಮ ಆರೋಗ್ಯ ಕಾಯ್ದುಕೊಳ್ಳಲು, ಮನೆಯಿಂದ ಹೊರಗೆ ಹೊರಟಾಗ ಮಾಸ್ಕ್ ಧರಿಸುವುದರ ಜೊತೆಗೆ ಬೆಳಗ್ಗೆ ಸಂಜೆ ವೇಳೆಗೆ ಹೊರ ಹೋಗುವುದನ್ನು ಕಡಿಮೆ ಮಾಡುವಂತೆ ಸಲಹೆ ನೀಡಲಾಗಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
- ಬೆಂಗಳೂರು –175
- ಮಂಗಳೂರು-170
- ಮೈಸೂರು – 151
- ಬೆಳಗಾವಿ – 168
- ಕಲಬುರ್ಗಿ – 90
- ಶಿವಮೊಗ್ಗ – 178
- ಬಳ್ಳಾರಿ – 189
- ಹುಬ್ಬಳ್ಳಿ- 159
- ಉಡುಪಿ –166
- ವಿಜಯಪುರ –99
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
