ಬೆಂಗಳೂರಿಗರೇ ಮಾಸ್ಕ್ ಧರಿಸದೆ ಹೊರಬಂದರೆ ಎಚ್ಚರ! ಕಳಪೆ ಏರ್ ಕ್ವಾಲಿಟಿಯಿಂದ ಶುರುವಾಗುತ್ತೆ ಅಸ್ತಮಾ, ಅಲರ್ಜಿ

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಕೆಲ ದಿನಗಳ ಹಿಂದೆ AQI 200 ದಾಟಿತ್ತು. ಇಂದೂ ಸಹ 196ಕ್ಕೆ ತಲುಪಿರುವ ಗಾಳಿಯ ಗುಣಮಟ್ಟ ಇನ್ನೂ ಕುಸಿಯಬಹುದೆಂದು ಹೇಳಲಾಗಿದೆ. PM2.5 ಮತ್ತು PM10 ಪ್ರಮಾಣ ಹೆಚ್ಚಳದಿಂದ ಅಸ್ತಮಾದಂತ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿದ್ದು, ಮಕ್ಕಳು ಮತ್ತು ವೃದ್ಧರು ಜಾಗರೂಕರಾಗಿರಬೇಕು ಎಂದು ಹೇಳಲಾಗಿದೆ.

ಬೆಂಗಳೂರಿಗರೇ ಮಾಸ್ಕ್ ಧರಿಸದೆ ಹೊರಬಂದರೆ ಎಚ್ಚರ! ಕಳಪೆ ಏರ್ ಕ್ವಾಲಿಟಿಯಿಂದ ಶುರುವಾಗುತ್ತೆ ಅಸ್ತಮಾ, ಅಲರ್ಜಿ
ಬೆಂಗಳೂರಿಗರೇ ಮಾಸ್ಕ್ ಧರಿಸದೆ ಹೊರಬಂದರೆ ಎಚ್ಚರ!

Updated on: Dec 20, 2025 | 8:28 AM

ಬೆಂಗಳೂರು, ಡಿಸೆಂಬರ್ 20: ದಿನೇ ದಿನೇ ಹಡಗೆಡುತ್ತಿರುವ ಬೆಂಗಳೂರಿನ ಗಾಳಿಯ ಗುಣಮಟ್ಟ (Bengaluru Air Quality) , ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿದೆ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯ, ಇಂದೂ ಸಹ 196ಕ್ಕೆ ತಲುಪಿದೆ. ನಗರದ ಈ ವಾತಾರಣ ದೆಹಲಿಯನ್ನು ನೆನಪಿಸುತ್ತಿದ್ದು, ಇದು ಹೀಗೆ ಮುಂದುವರೆದರೆ ಜನರ ಜೀವಕ್ಕೇ ಕುತ್ತು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಳಪೆ ಗುಣಮಟ್ಟದ ಗಾಳಿಯಿಂದ ಶ್ವಾಸಕೋಶ ಸಂಬಂಧಿ ಕಾಯಿಲೆ

ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 121ಕ್ಕೆ ತಲುಪಿದ್ದು, PM10 ಪ್ರಮಾಣ 167ಕ್ಕೆ ಇಳಿದಿದೆ.

ಇದರಿಂದಾಗಿ ಅಸ್ತಮಾ, ಅಲರ್ಜಿ ಸೇರಿದಂತೆ ಹೃದಯ ಸಂಬಂಧಿ ಖಾಯಿಲೆಗಳೂ ಎದುರಾಗಬಹುದು. 150ಕ್ಕಿಂತ ಹೆಚ್ಚಿನ ಗಾಳಿಯ ಗುಣಮಟ್ಟ ಜನರಲ್ಲಿ ಅಸ್ತಮಾ ತಂದೊಡ್ಡಬಹುದಾಗಿದ್ದು, ಈ ಸಮಸ್ಯೆಯಿಂದ ಬಚಾವಾಗಲು ಏರ್ ಪ್ಯೂರಿಫೈಯರ್ ಬಳಸುವುದರ ಜೊತೆಗೆ ಆದಷ್ಟು ಮನೆಯಿಂದ ಹೊರಹೋಗದಿರೊ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಒಂದೇ!

ಕಳೆದ ನಾಲ್ಕು ವರ್ಷಗಳಲ್ಲೇ ಕಳಪೆ ಏರ್ ಕ್ವಾಲಿಟಿ

ಕಳೆದ ನಾಲ್ಕು ವರ್ಷಗಳಿಗಿಂತ ಈ ವರ್ಷವೇ ಗಾಳಿಯ ಗುಣಮಟ್ಟ ಹೆಚ್ಚು ಹದಗೆಟ್ಟಿದೆ. 2025ರಲ್ಲಿ ಸುಮಾರು 90ಕ್ಕೂ ಹೆಚ್ಚು ದಿನಗಳ ಕಾಲ ಬೆಂಗಳೂರಿನ ಏರ್ ಕ್ವಾಲಿಟಿ ಅನಾರೋಗ್ಯಕರವಾಗಿತ್ತು ಎಂದು AQI ತಿಳಿಸಿದೆ. ಉಳಿದಂತೆ 2 ದಿನ ಉತ್ತಮ ಗಾಳಿಯ ಗುಣಮಟ್ಟವಿದ್ದರೆ, 253 ದಿನ ಸಾಧಾರಣ ಏರ್ ಕ್ವಾಲಿಟಿ ಕಂಡು ಬಂದಿದೆ. ಇಂದಿನ ದಿನಗಳಲ್ಲಿ ಶೀತದಲೆಯ ಜೊತೆಗೆ ಕಳಪೆ ಗುಣಮಟ್ಟದ ಗಾಳಿಯೂ ಸೇರಿ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index):

  • ಬೆಂಗಳೂರು –196
  • ಮಂಗಳೂರು – 140
  • ಮೈಸೂರು – 136
  • ಬೆಳಗಾವಿ – 144 ಕ
  • ಲಬುರ್ಗಿ – 94
  • ಶಿವಮೊಗ್ಗ – 73
  • ಬಳ್ಳಾರಿ – 166
  • ಹುಬ್ಬಳ್ಳಿ- 101
  • ಉಡುಪಿ – 111
  • ವಿಜಯಪುರ –68

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.