ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುತ್ತಾರೆ. ರಸ್ತೆ ಮೇಲೆ ಸಂಚಾರ ಮಾಡುವಾಗ ಏನ್ ಆಗುತ್ತೋ ಏನೋ ಎಂಬ ಭಯದಲ್ಲಿರುತ್ತಾರೆ. ಇದಕ್ಕೆ ಕಾರಣ ರಸ್ತೆಗಳ ಮೇಲಿರುವ ಗುಂಡಿಗಳು. ಹಲವು ಬಾರಿ ಬೆಂಗಳೂರಿನ ಜನರು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರಯೋಜನ ಆಗದಿದ್ದಾಗ ಗುಂಡಿಗಳಲ್ಲಿ ನಾಟಿ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಕೆಲವರು ಪ್ರಾಣ ರಕ್ಷಣೆಗೆ ತಾವೇ ಹೋಗಿ ಗುಂಡಿಗಳನ್ನು ಮುಚ್ಚಿದ್ದಾರೆ. ಆದರೆ ಇದೀಗ ರಸ್ತೆ ಗುಂಡಿಗಳಲ್ಲಿ ಗಣಹೋಮ ಮಾಡಿ ನಾಗರಿಕ ಸಂಘಟನೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದೆ.
ಭಾರತಿನಗರ ರೆಸಿಡೆಂಟ್ಸ್ ಫೋರಮ್ ಎಂಬ ನಾಗರಿಕ ಸಂಘಟನೆ, ಕಾಂಪಬೆಲ್ ರಸ್ತೆಯ ಗುಂಡಿಯೊಂದಕ್ಕೆ ಗಣಹೋಮ ಮಾಡಿಸಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಒಂದೇ ಒಂದು ರಸ್ತೆ ಕೂಡ ಗುಂಡಿಗಳಿಂದ ಮುಕ್ತವಾಗಿಲ್ಲ. ಬಿಬಿಎಂಪಿ ಗಾಢ ನಿದ್ರೆಯಲ್ಲಿರುವುದರಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನಲ್ಲಿ ಗುಂಡಿಗಳು ಅನೇಕ ಜೀವಗಳನ್ನು ಬಲಿ ಪಡೆದಿವೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಲು ಗುಂಡಿಯಲ್ಲಿ ಹೋಮ ಮಾಡಿದ್ದೇವೆ ಅಂತ ಭಾರತಿನಗರ ರೆಸಿಡೆಂಟ್ಸ್ ಫೋರಮ್ ತಿಳಿಸಿದೆ.
ಕಾಂಪಬೆಲ್ ರಸ್ತೆ ಗುಂಡಿಗೆ ಇಂದು (ನ.30) 11 ಗಂಟೆ ಸುಮಾರಿಗೆ ಗಣಹೋಮ ಸಲ್ಲಿಸಿದ್ದಾರೆ. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ಗೆ ಪ್ರತಿಕ್ರಿಯೆ ನೀಡಿರುವ ಭಾರತಿನಗರ ರೆಸಿಡೆಂಟ್ಸ್ ಫೋರಮ್ ಪ್ರಧಾನ ಕಾರ್ಯದರ್ಶಿ ಎನ್ ಎಸ್ ರವಿ, ಪ್ರತಿದಿನ ಬೈಕ್ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಜೀವ ಕಳೆದುಕೊಳ್ಳುತ್ತಿದ್ದಾರೆ. ಓಡಾಡಲು ಆಗದೇ ಪರದಾಡುವಂತಾಗಿದೆ. ಹೀಗಾಗಿ ರಸ್ತೆಗಳು ಗುಂಡಿಗಳಿಂದ ಮುಕ್ತಿ ಪಡೆಯುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಅಂತ ತಿಳಿಸಿದ್ದಾರೆ.
ನೀರಿನಿಂದ ತುಂಬಿದ್ದ ಕಾಂಪಬೆಲ್ ರಸ್ತೆಯ ಗುಂಡಿಗೆ ಹೂವು ಹಾಕಿ ಗಣಹೋಮ ಮಾಡಿದ್ದಾರೆ. ಪುರೋಹಿತರು ರಸ್ತೆಯಲ್ಲಿ ಕುಳಿತು ವೇದ ಮಂತ್ರ ಪಠಿಸಿ ಪೂಜೆ ನೆರವೇರಿಸಿದ್ದಾರೆ.
#POTHOLE puja in #Bengaluru!
Frustrated by potholes & craters, citizens invoke gods. Puja on Campbell Road by Bharathinagar Residents Forum ?
Why can’t the tech-city fix its roads?@NammaBengaluroo @WFRising @Namma_ORRCA @BLRrocKS @tinucherian @ShyamSPrasad pic.twitter.com/ZQQAEKfzI5
— Rakesh Prakash (@rakeshprakash1) November 30, 2021
ಇದನ್ನೂ ಓದಿ
ಸುಲಿಗೆ ಪ್ರಕರಣದಲ್ಲಿ ಪರಮ್ ಬೀರ್ ಸಿಂಗ್ ವಿರುದ್ಧದ ಜಾಮೀನು ರಹಿತ ವಾರಂಟ್ ರದ್ದು ಮಾಡಿದ ಮ್ಯಾಜಿಸ್ಟ್ರೇಟ್ ಕೋರ್ಟ್
ಸಂಸತ್ನಲ್ಲಿ ದೇವೇಗೌಡರ ಕೈ ಹಿಡಿದು ಕೂರಿಸಿ, ಆತಿಥ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ
Published On - 2:32 pm, Tue, 30 November 21