Bengaluru Power Cut: ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್​ ವ್ಯತ್ಯಯ

ನವೆಂಬರ್ 18ರಂದು ಬೆಂಗಳೂರಿನ ಹಲವು ಭಾಗಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 66/11 ಕೆವಿ ಶೋಭಾ ಸಿಟಿ ಉಪಕೇಂದ್ರದಲ್ಲಿ ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಿರುವ ಕಾರಣ, ಶೋಭಾ ಸಿಟಿ, ಆರ್.ಕೆ. ಹೆಗ್ಡೆ ನಗರ, ಥಣಿಸಂದ್ರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

Bengaluru Power Cut: ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್​ ವ್ಯತ್ಯಯ
ಸಾಂದರ್ಭಿಕ ಚಿತ್ರ

Updated on: Nov 17, 2025 | 12:49 PM

ಬೆಂಗಳೂರು, ನವೆಂಬರ್​ 17: ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ) ತುರ್ತು ನಿರ್ವಹಣಾ ಕಾಮಗಾರಿಗಳನ್ನು ನಡೆಸಲಿರುವ ಕಾರಣ ನವೆಂಬರ್ 18ರಂದು ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. 66/11 ಕೆವಿ ಶೋಭಾ ಸಿಟಿ ಉಪಕೇಂದ್ರದಲ್ಲಿ ಅಗತ್ಯ ದುರಸ್ತಿ ಕಾರ್ಯ ನಡೆಯಲಿದ್ದು, ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್​ ಸರಬರಾಜು ಸ್ಥಗಿತಗೊಳ್ಳಲಿದೆ.

ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ?

ಶೋಭಾ ಸಿಟಿ, ಚೋಕ್ಕನಹಳ್ಳಿ, ಡೊಮಿನೋಸ್ ಪಿಜ್ಜಾ-ಪ್ಯಾರಡೈಸ್ ನೂರ್​ ನಗರ, ಎಕ್ಸ್-ಸರ್ವಿಸ್‌ಮೆನ್ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಆರ್.ಕೆ. ಹೆಗ್ಡೆ ನಗರ, ಶಬರಿ ನಗರ, ನ್ಯೂ ಶಾಂತಿ ನಗರ,ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರಿಜೆನ್ಸಿ ಪಾರ್ಕ್, ಎಸ್ತರ್ ಹಾರ್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಮ್ ಬರ್ಡ್, ಬೆಂಚ್ ರಾಯಲ್ ವುಡ್, ಅರ್ಕಾವತಿ ಲೇಔಟ್, ಥಣಿಸಂದ್ರ, ಆರ್.ಕೆ. ಹೆಗ್ಡೆ ನಗರ (ವಿಸ್ತೃತ ಭಾಗ), ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿಟ್ಟಗನಹಳ್ಳಿ, ಕೋಗಿಲು ಗ್ರಾಮದಲ್ಲಿ ನಾಳೆ ವಿದ್ಯುತ್ ಸರಬರಾಜು​ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್​ಗೆ ಬಿಡ್ ಕರೆದ ಬಿಎಂಆರ್ ಸಿಎಲ್

ಈ ನಿಗದಿತ ವಿದ್ಯುತ್ ಸರಬರಾಜು ವ್ಯತ್ಯಯವು ನಗರದಲ್ಲಿ ಸ್ಥಿರ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಲು ಬೆಸ್ಕಾಂ ಕೈಗೊಂಡಿರುವ ನಿರಂತರ ಮೂಲಸೌಕರ್ಯ ಸಂರಕ್ಷಣಾ ಕಾರ್ಯಗಳ ಭಾಗವಾಗಿದೆ. ಶೋಭಾ ಸಿಟಿ ಉಪಕೇಂದ್ರದಲ್ಲಿ ನಡೆಯುತ್ತಿರುವ ನಿರ್ವಹಣಾ ಕಾರ್ಯಗಳು ಭವಿಷ್ಯದಲ್ಲಿನ ವಿದ್ಯುತ್ ತೊಂದರೆಗಳನ್ನು ತಪ್ಪಿಸಲು ಮತ್ತು ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಅತ್ಯವಶ್ಯ ಎಂದು ಬೆಸ್ಕಾಂ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:49 pm, Mon, 17 November 25