
ಬೆಂಗಳೂರು, ಡಿಸೆಂಬರ್ 20: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಸ್ಕಾಂ (BESCOM) ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ಹಾಗೂ ಇನ್ನು ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಪವರ್ ಕಟ್ ಇರಲಿದೆ.
ಎಸ್1-ನಿಮ್ಹಾನ್ಸ್ ಕಿದ್ವಾಯಿ, ಜಯದೇವ, ರಾಜೀವ್‌ಗಾಂಧಿ, ಸಂಜಯಗಾಂಧಿ ಮತ್ತು ಇಂದಿರಾ ಗಾಂಧಿ ಆಸ್ಪತ್ರೆ, 1, 2, 3, 4, 9 ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್ ರಸ್ತೆ, ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ, ಐಎಎಸ್ ಕಾಲೊನಿ, ಕೆಎಎಸ್ ಕಾಲೊನಿ, ಎನ್.ಎನ್.ಪಾಳ್ಯ ಕೈಗಾರಿಕಾ ಪ್ರದೇಶ, ಬಿಎಚ್ಇಎಲ್ ಲೇಔಟ್, ಎಸ್ಆರ್ಕೆ ಗಾರ್ಡನ್ಸ್ ತಿಲಕ್ ನಗರ, ಶಾಂತಿ ವಾರ್ಕ್ ಮತ್ತು ಅಪಾರ್ಟ್ ಮೆಂಟ್, ರಂಕಾ ಕಾಲೊನಿ ರಸ್ತೆ, ಜಿಆರ್‌ಬಿ ಮುಖ್ಯರಸ್ತೆ, ಜೈನ ದೇವಾಲಯ ರಸ್ತೆ, ಬಿಟಿಎಂ 4ನೇ ಹಂತದ ಕೆಲವು ಭಾಗಗಳು, ಬಿಟಿಎಂ 2ನೇ ಹಂತ, ಮಂತ್ರಿ ಅಪಾರ್ಟ್ ಮೆಂಟ್, ಶೋಭಾ ಅಪಾರ್ಟ್ ಮೆಂಟ್, ವೆಗಾಸಿಟಿ ಮಾಲ್, ಬನ್ನೇರುಘಟ್ಟ ಮುರುಗುರಪ್ಪನ ಪಾಳ್ಯ, ಉತ್ತರಹಳ್ಳಿ ಪೂರ್ಣ ಪ್ರಜ್ಞಾ ಲೇಔಟ್, ಬನಶಂಕರಿ 6ನೇ ಹಂತ, ಶ್ರೀನಗರ, ಹೊಸಕರಹಳ್ಳಿ, ತ್ಯಾಗರಾಜನಗರ, ಬಸವನಗುಡಿ, ಕತ್ರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್, 100 ಆಡಿ ವರ್ಮುಲ ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಕಡಿತ ಇರಲಿದೆ.
ಬ್ರಿಗೇಟ್ ರಸ್ತೆ, ಕೇಂಬ್ರಿಡ್ಜ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ಕಮರ್ಶಿಯಲ್ ಸ್ಟ್ರೀಟ್, ಡಿಕನ್ಸನ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಈಶ್ವರ ಲೇಔಟ್, ಜೋಗುಪಾಳ್ಯ, ಕಾಮರಾಜ ರಸ್ತೆ, ಎಂ.ಜಿ.ರಸ್ತೆ (ಚಿನ್ನಸ್ವಾಮಿ ಸೇಡಿಯಂ ಸಮೀಪದ ಭಾಗ ಸಹಿತ). ಮ್ಯೂಸಿಯಂ ರಸ್ತೆ, ಪ್ಲೇನ್ ಸ್ಟ್ರೀಟ್, ಪ್ರೆಸ್ಟೀಜ್ ಹೆರ್ಮಿಟೇಜ್ ಅಪಾರ್ಟ್‌ಮೆಂಟ್, ರಿಚ್ಯಂಡ್ ಟೌನ್, ಯೂನಿಯನ್ ಸ್ಟ್ರೀಟ್, ವೆಲಿಂಗ್ಟನ್ ರಸ್ತೆ, ವುಡ್ ಸ್ಟ್ರೀಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು
ಭಾರತೀಯ ಸಿಟಿ ಸ್ಟೇಷನ್ ವ್ಯಾಪ್ತಿಯ – ಭಾರತೀಯ ಸಿಟಿ ಎಂಟ್ರೆನ್ಸ್ / ಮುಖ್ಯರಸ್ತೆ, ಭಾರತೀಯ ಸಿಟಿ ಬ್ಯಾಕ್ ಗೇಟ್, ಆರ್ಮಿ ಕಾಲೇಜ್, ಸ್ಟಮ್ ಬೋರ್ಡ್, ಕೆಎಂಪಿ ಲೇಔಟ್, ಕಿಂಗ್‌ಸ್ಟನ್ ರೆಸಿಡೆನ್ಸಿ, ಮದರ್ ಥೆರೇಸಾ ಲೇಔಟ್, ನಾಗೇನಹಳ್ಳಿ ಕೆರೆ, ರೀಜೆನ್ಸಿ ಪಾರ್ಕ್ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್‌ಐ ಲೇಔಟ್, ನಕ್ಷತ್ರ ಲೇಔಟ್, ಲಾಯರ್ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Published On - 7:15 am, Sat, 20 December 25