ಪೋಷಕರೇ ಎಚ್ಚರ: ಬೆಂಗಳೂರಿನ ಸ್ಕೂಲ್ ಬಸ್​ಗಳ ಚಾಲಕರ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಿದ ಪೊಲೀಸರೇ ಶಾಕ್!

ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 59 ಶಾಲಾ ಬಸ್ ಚಾಲಕರು ಮತ್ತು 14 ನೀರಿನ ಟ್ಯಾಂಕರ್ ಚಾಲಕರು ಡ್ರಂಕ್ ಆ್ಯಂಡ್ ಡ್ರೈವ್‌ ಮಾಡಿ ಸಿಕ್ಕಿಬಿದ್ದಿದ್ದಾರೆ. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಈ ಕುಡುಕ ಚಾಲಕರ ಪರವಾನಗಿ ರದ್ದುಗೊಳಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದಾಗ್ಯೂ, ಪೋಷಕರಲ್ಲಿ ಆತಂಕ ಮೂಡಿಸಿದೆ.

ಪೋಷಕರೇ ಎಚ್ಚರ: ಬೆಂಗಳೂರಿನ ಸ್ಕೂಲ್ ಬಸ್​ಗಳ ಚಾಲಕರ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಿದ ಪೊಲೀಸರೇ ಶಾಕ್!
ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ
Image Credit source: Bangalore Traffic Police X Handle
Edited By:

Updated on: Mar 28, 2026 | 7:34 AM

ಬೆಂಗಳೂರು, ಮಾರ್ಚ್ 28: ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುತ್ತಿದ್ದೇವೆ ಎಂದು ಭಾವಿಸಿರುವ ಪೋಷಕರಿಗೆ ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಾಲಾ ವಾಹನಗಳ ಚಾಲಕರೇ ಕುಡಿದು ಬಸ್ ಚಲಾಯಿಸುತ್ತಾ (Drunk and Drive) ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಶುಕ್ರವಾರ (ಮಾರ್ಚ್​​ 27) ಬೆಳ್ಳಂಬೆಳಗ್ಗೆ ಬೆಂಗಳೂರು ಸಂಚಾರ ಪೊಲೀಸರು (Bangalore Traffic Police) ನಡೆಸಿದ ವಿಶೇಷ ಡ್ರಂಕ್ ಆ್ಯಂಡ್ ಡ್ರೈವ್ ಕಾರ್ಯಾಚರಣೆಯಲ್ಲಿ ಭರ್ಜರಿ ಬೇಟೆ ನಡೆದಿದೆ.

ಡ್ರಂಕ್ ಆ್ಯಂಡ್ ಡ್ರೈವ್ ಚೆಕ್ಕಿಂಗ್: ಪೊಲೀಸರಿಗೇ ಶಾಕ್!

ನಗರದಾದ್ಯಂತ ಸಂಚಾರ ವಿಭಾಗದ ಪೊಲೀಸರು ನಡೆಸಿದ ‘ಸ್ಪೆಷಲ್ ಡ್ರೈವ್’ನಲ್ಲಿ ಶಾಲಾ ಬಸ್ ಹಾಗೂ ನೀರಿನ ಟ್ಯಾಂಕರ್ ಚಾಲಕರನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಖಾಸಗಿ ಶಾಲಾ ಬಸ್ ಚಾಲಕರ ಹೊಣೆಗೇಡಿತನ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆಯ ಅಂಕಿಅಂಶ

  • ಪಾನಮತ್ತ ಶಾಲಾ ಬಸ್ ಚಾಲಕರು: 59
  • ಪಾನಮತ್ತ ನೀರಿನ ಟ್ಯಾಂಕರ್ ಚಾಲಕರು: 14

ಲೈಸೆನ್ಸ್ ರದ್ದು ಮಾಡಲು ಕ್ರಮ

ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಒಟ್ಟು 73 ಚಾಲಕರ ವಿರುದ್ಧ ಐಎಂವಿ (IMV) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಚಾಲಕರುಗಳ ಚಾಲನಾ ಪರವಾನಗಿಯನ್ನು (DL) ಅಮಾನತುಗೊಳಿಸಲು ಆರ್‌ಟಿಒ (RTO) ಕಚೇರಿಗೆ ವರದಿ ಸಲ್ಲಿಸಲಾಗುತ್ತಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತೀಕ್ ರೆಡ್ಡಿ ತಿಳಿಸಿದ್ದಾರೆ.

ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಹತ್ತಾರು ಸಾವಿರ ರೂಪಾಯಿ ಫೀಸು ಪಡೆಯುವ ಖಾಸಗಿ ಶಾಲೆಗಳು ಚಾಲಕರ ನೇಮಕಾತಿ ವೇಳೆ ಕನಿಷ್ಠ ಜವಾಬ್ದಾರಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಧನದಾಹಿ ಶಾಲೆಗಳು ಇಂತಹ ಕುಡುಕ ಚಾಲಕರಿಗೆ ಬ್ರೇಕ್ ಹಾಕದಿದ್ದರೆ ಮಕ್ಕಳ ಅಮೂಲ್ಯ ಜೀವಕ್ಕೆ ಅಪಾಯ ಕಟ್ಟಿಬುತ್ತಿ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us